Posts

ಮೇರು ಪರ್ವತ ಎಲ್ಲಿದೆ?

Image
ಮೇರು ಪರ್ವತ ಎಲ್ಲಿದೆ?

ಇಂದೂ ಕೂಡ ಭಾರತೀಯ ಸಾಹಿತ್ಯದಲ್ಲಿ, ಸಾಮಾನ್ಯವಾಗಿ ಅತ್ಯುತ್ತಮ ವ್ಯಕ್ತಿತ್ವವನ್ನು ಗುರುತಿಸುವಾಗ, “ಮೇರುಸಮಾನರಾದ” “ಮೇರು ಪ್ರಾಯರಾದ” ಮೊದಲಾದ ವಿಶೇಷಣಗಳನ್ನ ನೋಡಿರುತ್ತೀರಿ.

ಒಂದುವೇಳೆ ನೀವು ಕರ್ನಾಟಕ ಸಂಗೀತದ ಅಭಿಮಾನಿಯೇನಾದರೂ ಆಗಿದ್ದರೆ, ತ್ಯಾಗರಾಜರ ಮಾಯಾಮಾಳವ ಗೌಳ ರಾಗದ ಕೃತಿ, ‘ಮೇರು ಸಮಾನ’ ಎಂಬುದರಲ್ಲಿ ಶ್ರೀರಾಮನ ಪರಾಕ್ರಮವನ್ನು, ಅವನ ಧೀರ ನಿಲುವನ್ನೂ ಮೇರುಪರ್ವತಕ್ಕೆ ಹೋಲಿಸುವುದನ್ನು ಗಮನಿಸಿರುತ್ತೀರಿ. ಅದೇ ರೀತಿ ಶಾಮಾಶಾಸ್ತ್ರಿ ಅವರು ಲಲಿತಾ ರಾಗದ ‘ನನ್ನು ಬ್ರೋವು ಲಲಿತಾ’ ಎಂಬ ರಾಗದಲ್ಲಿ ಜಗನ್ಮಾತೆ ಪಾರ್ವತಿಯನ್ನು ‘ಸುಮೇರು ಮಧ್ಯ ನಿಲಯೇ’ - ‘ಮೇರುವಿನ ನಡುವಿನಲ್ಲಿ ನೆಲೆ ನಿಂತವಳೇ’  ಎಂದು ಕರೆಯುವುದನ್ನೂ ನೋಡಿರುತ್ತೀರಿ. ಪಾರ್ವತಿ ಪರ್ವತ ರಾಜ ಹಿಮಾಲಯನ ಮಗಳಾದ್ದರಿಂದ, ಇದೇ ಕಾರಣಕ್ಕೇ ಮೇರು ಪರ್ವತ ಹಿಮಾಲಯ ಪರ್ವತಗಳಲ್ಲಿ ಎಲ್ಲೋ ಇದೆ ಎಂಬ ನಂಬಿಕೆ ಕೆಲವರು ಇಟ್ಟಿರುವುದನ್ನೂ ನೀವು ಕಾಣಬಹುದು.  

ಇನ್ನು ವಿಕಿಪೀಡಿಯಾ ನೋಡಿದರೆ, ಮೇರು ಪರ್ವತವನ್ನು ಅದು ಟಾಂಜಾನಿಯಾದಿಂದ ಟಿಬೆಟ್ ವರೆಗೆ, ಹಿಮಾಲಯದಿಂದ ಮಧ್ಯ ಏಷ್ಯಾ ವರೆಗೆ ಎಲ್ಲೆಲ್ಲೋ ಗುರುತಿಸುತ್ತೆ. ಆದರೆ, ನಮ್ಮ ಸಂಸ್ಕೃತಿಯಲ್ಲಿ ಈ ಮೇರು ಪರ್ವತದ ಉಲ್ಲೇಖ ಅಷ್ಟು ನೂರಾರು ವರ್ಷಗಳಿಂದ ಇದ್ದರೆ, ಅದನ್ನು ಗುರುತಿಸುವುದು ಅಷ್ಟು ಕಷ್ಟವೇಕೆಂಬ ಪ್ರಶ್ನೆ ನಿಮಗೆ ಬರಬಹುದು. ಈಗ ಕೆಲವು ಉಲ್ಲೇಖಗಳನ್ನು ನೋಡಿ,  ಮೇರು ಎಲ್ಲಿರಬಹುದು ಎಂಬ ಪ್ರ…

ಪಂಚವಟಿಯಲ್ಲಿ ಕಡೆಯ ದಿನ

Image
ಕಳೆದಿರಲು ಹಲವಾರು ತಿಂಗಳು
ಕುಳಿರುಗಾಲವು ಮುಗಿಯಬಂದಿತು
ಹೊಳೆಯೆ ಚೈತ್ರದ ಚಿಗುರು ಸುತ್ತೆಡೆಯಲ್ಲಿ ವನರಾಜಿ |
ನಳನಳಿಸೆ ಪಂಚವಟಿಯಾಶ್ರಮ
ವಿಳೆಯ ಸಗ್ಗವೆನಿಸಿರೆ ಜಾನಕಿ
ಕಳೆದ ಗಳಿಗೆಗಳನ್ನು ಸಂತಸದಲ್ಲಿ ನೆನೆಯುತಿರೆ ||೧||

ಒಂದು ಹಗಲಲಿ ಜನಕಸುತೆ ಕುಟಿ
ಮುಂದುಗಡೆಯಲಿ ಮಲ್ಲೆ ಹಂಬಿಗೆ
ಚಂದದಲಿ ನೀರೆರೆಯುತಿರೆ ಅವಳ ಕಣ್ಣೆದುರ- |
ಲ್ಲೊಂದು  ಹೊಂಬಣ್ಣದಲಿ ಹೊಳೆದಿ-
ತ್ತಂದವಾಗಿಹ ಚಿಕ್ಕೆ ಚಿಂಕೆಯು
ಹಿಂದೆಮುಂದೆಯೆ ಸುತ್ತುತಿದ್ದಿತು ಮನವನಪಹರಿಸಿ ||೨||

ಸೀತೆ ಕರೆಯುತ ಹೊನ್ನ ಜಿಂಕೆಗೆ
ಪ್ರೀತಿ ತೋರುತ ಬಳಿಗೆ ಹೋಗಲು
ಭೀತಿಯಲಿ ಹಾರುತ್ತ ದೂರಕೆ ಓಡಿಹುದು ಮಿಗವು  |
ಮಾತಿಗಂಜುವುದೆಂದು ಮರವ-
ನ್ನಾತುಕೊಂಡೇ ನೋಡುತಿದ್ದಳು
ಮಾತಿನಲಿ ಸಿಗದಂಥ ಸೊಗವನು ಕಣ್ಗೆ ತುಂಬುತಲಿ ||೩||

ಹೊರಗೆ ಬಂದಿಹ ರಾಮನಾಕಡೆ
ತರುಣಿ ಕಣ್ಗಳು  ಪೋಗದಿರಲವ
ಹರುಷವೇನಿವಳದೆನುತ ಕೂಡಲೆ ಬಳಿಗೆ ಬಂದಾತ |
-ನೊರೆದಿಹನು ಸತಿ ನುಡಿಯೆ ನಿನ್ನಯ
ಮರುಳು ಮಾಡಿದ ತವಕವೇನಿದು?
ಇರಲಿ ನಡೆಸುವೆ ಬೇಗ ಪೇಳೆಂದಿಹನು ಮೈಥಿಲಿಗೆ  ||೪||

ನಲ್ಲ ನೋಡೈ  ಹೊನ್ನ ಬಣ್ಣಗ
ಳಲ್ಲಿ ಕಂಗೊಳಿಸಿರುವುದೀ ಮಿಗ
ಮೆಲ್ಲನೇ ಹಿಡಿದಿದನು ತಾರೈ ಬೇಗ ನನಗಾಗಿ |
ಹುಲ್ಲ ತಿನ್ನಿಸಿ ಮುದ್ದು ಮಾಡುವೆ
ಬಲ್ಲೆಯಾ! ಬೇಸರವ ಕಳೆಯಲಿ
-ದಿಲ್ಲದಿರಲೀ ಪಂಚವಟಿ ಬೇಡೆನಗೆಯೆಂದಿಹಳು ||೫||

-ಹಂಸಾನಂದಿ

ಕೊ: ಕಳೆದ ವರ್ಷ ಪಂಚವಟಿಯಲ್ಲಿ ಮೊದಲದಿನ ಅನ್ನುವ ತಲೆಬರಹದಲ್ಲಿ ಒಂದಷ್ಟು ಷಟ್ಪದಿಗಳನ್ನ ಬರೆದಿದ್ದೆ. ಅದೇ ರೀತಿ …

ಆಷಾಢಸ್ಯ ಪ್ರಥಮ ದಿವಸೇ ...

Image
"ಮಳೆಗಾಲ ಚಳಿಗಾಲ ಬೇಸಿಗೇ ಕಾಲ ಮುಗಿಯಾಲಿ, ಕಲಿಸತ್ತೆ ಕೆಲಸಾವ!" ಅಂದಳಂತೆ ಯಾರೋ ಜಾಣೆ ಸೊಸೆ. ಸಮಶೀತೋಷ್ಣವಲಯದಲ್ಲಿರುವ ಪ್ರದೇಶಗಳಲ್ಲಿ ವರ್ಷಕ್ಕೆ ನಾಲ್ಕು ಕಾಲ ಎಂಬ ಲೆಕ್ಕಾಚಾರವಿದ್ದರೆ, ನಮ್ಮ ದೇಶದಲ್ಲಿ ಹಿಂದಿನಿಂದ ವರ್ಷಕ್ಕೆ ಮೂರು ಕಾಲ, ಆರು ಋತುಗಳು ಮತ್ತೆ ಹನ್ನೆರಡು ತಿಂಗಳುಗಳು ಎಂಬ ಲೆಕ್ಕಾಚಾರ. ಎಲ್ಲಾ ಕಾಲಗಳನ್ನೂ ಕವಿಗಳು ವರ್ಣಿಸಿದ್ದರೂ, ಮಳೆಗಾಲವನ್ನು ವಿಶೇಷವಾಗಿ ಬಣ್ಣಿಸುವುದನ್ನ ನೋಡಬಹುದು. ಬಹುಶಃ ನಮ್ಮ ಬದುಕಿಗೆ ಮೂಲವೇ ಈ ಮಳೆಗಾಲ, ಅದೇ ನಮ್ಮ ಜೀವನಾಡಿಯಾದ್ದರಿಂದಲೇ ಈ ಬಣ್ಣನೆ. ’ಆಷಾಢ ಮಾಸ ಬಂದೀತವ್ವಾ , ಅಣ್ಣ ಬರಲಿಲ್ಲ ಕರಿಯಾಕ’ ಎಂದು ಹಳ್ಳಿಯ ಹೆಂಗಸೊಬ್ಬಳ ಹಾಡಿನಿಂದ ಹಿಡಿದು ಕಾಳಿದಾಸನಂತಹ ಮಹಾ ಕವಿ ’ಆಷಾಢಸ್ಯ ಪ್ರಥಮದಿವಸೇ’ ಎಂದು ಬರೆಯುವತನಕ ಈ ಮುಂಗಾರಿನ ವರ್ಣನೆ ನಮ್ಮ ಚರಿತ್ರೆಯ, ಸಂಸ್ಕೃತಿಯ ಒಳನೋಟಗಳನ್ನು ಕೊಡಬಲ್ಲವು. ನಾವು ಒಳಹೊಕ್ಕು ನೋಡಬೇಕಷ್ಟೇ!ಅಷ್ಟಕ್ಕೂ, ನಮ್ಮ ತಿಂಗಳುಗಳಿಗೆ ಹೆಸರು  ಕೊಟ್ಟಿರುವುದೇ ಒಂದು ಕುತೂಹಲದ ಸಂಗತಿ. ಆಯಾ ಹುಣ್ಣಿಮೆಯಲ್ಲಿ ಚಂದ್ರ ಆಕಾಶದಲ್ಲಿ ಎಲ್ಲಿ ಕಾಣುತ್ತಾನೆ ಅನ್ನುವುದರ ಮೇಲೆ  ಚೈತ್ರ, ವೈಶಾಖ ಮೊದಲಾದ ತಿಂಗಳುಗಳ ಹೆಸರನ್ನು ಇಡಲಾಗಿದೆ. ಹುಣ್ಣಿಮೆಯ ಚಂದ್ರ ಪೂರ್ವಾಷಾಢಾ-ಉತ್ತರಾಷಾಢಾ ಎಂಬ ನಕ್ಷತ್ರಗಳ ಬಳಿ ಇರುವ ತಿಂಗಳೇ ಆಷಾಢ. ಇದು ಕಾರ್ಗಾಲದ ಸಮಯ. ಮೋಡ ಕವಿದಿರುವ ಆಕಾಶದಿಂದ ಹುಣ್ಣಿಮೆಯ ಚಂದ್ರ ಕಾಣದೇ ಹೋಗಬಹುದಾದರೂ, ಹುಣ್ಣಿಮೆಯ ಚಂದಿರ ಎಲ್ಲಿರುತ್…

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಮ್ಮಲ್ಲಿ ಹೆಚ್ಚಿನ ಕನ್ನಡದ ಜನರಲ್ಲಿ ಒಂದು  ಭ್ರಮೆ ಇದೆ (ಅದು ಬೇರೆ ನುಡಿಯಾಡುವ ಜನರಲ್ಲೂ ಇರಬಹುದು, ಆದರೆ ಈ ಬರಹವನ್ನು ಓದುವವರು ಕೇವಲ ಕನ್ನಡಿಗರಾದ್ದರಿಂದ ನನ್ನ ಮಾತುಗಳನ್ನು ಆ ಚೌಕದೊಳಗೇ ಮೀಸಲಾಗಿಡುತ್ತೇನೆ).  ಪ್ರಾಕೃತವೆಂಬ ಭಾಷೆಯಿಂದ (ಅಥವಾ ಭಾಷೆಗಳಿಂದ) ಸಂಸ್ಕೃತ ಎನ್ನುವ ಭಾಷೆಯನ್ನು ಶೋಧಿಸಿ, "ಕಟ್ಟಲಾಯಿತು" ಎನ್ನುವುದೇ ಈ ಭ್ರಮೆ. ಈ ಭ್ರಮೆಯನ್ನು ಚಾಲ್ತಿಯಲ್ಲಿಡಲು ಹಲವರು ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಅದು  ಅವರವರ ವಾದಗಳಿಗೆ ಸಮಜಾಯಿಶಿ ಕೊಡಲು ಮಾಡುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.

ಈ ಭ್ರಮೆಗೆ ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳಲ್ಲಿರುವ ಅರೆಬೆಂದ ಪಾಠಗಳನ್ನೇ ಓದಿ, ಅದನ್ನೇ ನಿಜವೆಂದು ನಂಬಿ ಅದನ್ನೇ ಪಾಠ ಮಾಡಿ, ಮತ್ತೆ ಮುಂದಿನ ಪೀಳಿಗೆಗೂ ಅಜ್ಞಾನ ಪ್ರಸಾರ ಮಾಡುತ್ತಿರುವವರದ್ದೂ,  ಇನ್ನೊಂದು ಭಾಷೆಯನ್ನು ಓದದೇ ತಿಳಿಯದೇ ಅದರ ಬಗ್ಗೆ ದೊಡ್ಡ ವಿನ್ಯಾಸವಾಗಿ ಬಣ್ಣಬಣ್ಣವಾಗಿ ಮಾತಾಡುವಂತಹ ಸಾಹಿತಿಗಳದ್ದೂ, ಬುದ್ಧಿಜೀವಿಗಳು , ಜಾತ್ಯತೀತರು ಎಂಬ ಕಿರೀಟವನ್ನು ಹೊತ್ತು ಮೆರೆಯುವ ಮಹನೀಯರದ್ದೂ, ಇನ್ನು ಇವತ್ತಿನ ಮಟ್ಟಿಗೆ ಬಂದರೆ ವಾಟ್ಸಪ್ ನಲ್ಲಿಯೋ, ಯಾವುದೋ ಫೇಸ್ ಬುಕ್ ಗುಂಪಿನಲ್ಲೋ,  ಅಥವಾ ಯಾವುದೋ ಪತ್ರಿಕೆ ಅಂಕಣದಲ್ಲಿ ಓದಿದ್ದೆಲ್ಲ ನಿಜವೆಂದು ತಿಳಿಯುವ ಮುಗ್ಧರದ್ದೂ - ಈ ರೀತಿಯ ಹಲವಾರು ಬಗೆಯ ಜನಗಳ ದೊಡ್ಡ ಕಾಣಿಕೆ, ಈ ಭ್ರಮೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಇದೆ. ದೊಡ್…

ಮಳೆಗಾಲದ್ದೊಂದು ಕಥೆ

Image
ಹಳ್ಳಿ ಮಲಗಿರೆ ಮೋಡ ಮೊರೆದಿರೆ ಕಣ್ಣ ನೀರನು ಸುರಿಸುತ ತನ್ನ ದುಃಖವ ನೆನೆದು ನೆನೆಯುತ ಹಾಡನಾಗಿಸೆ ಪಯಣಿಗ  ಉಬ್ಬಿರುವ ಗಂಟಲಿನ ದನಿಯನು ಕೇಳಿ ಊರಿನ ಪೆಣ್ಗಳು ಒದ್ದೆ ಕಣ್ಣಲಿ ಪಯಣ ತೆರಳಿಹ ತಮ್ಮಿನಿಯರನು ನೆನೆವರು
ಸಂಸ್ಕೃತ ಮೂಲ ( ಸದುಕ್ತಿಕರ್ಣಾಮೃತ, ಪದ್ಯ ೯೦೬)
सुप्ते ग्रामे नदति जलदे शान्तसंपातरम्यं पान्थेनात्मव्यसनकरुणोदस्रु गीतं निशीथे । स्फीतोत्कण्ठापरिगतधिया प्रोषितस्त्रीजनेन ध्यानावेशस्तिमितनयनं श्रूयते रुद्यते च ॥९०६॥
-ಹಂಸಾನಂದಿ


ಕೊ: ಸುಮಾರು ಸಾವಿರ ವರ್ಷ ಹಿಂದಿನ ಜನಜೀವನವನ್ನ ಈ ಪದ್ಯ ನಮ್ಮ ಕಣ್ಣಮುಂದೆ ತಂದಿಡುತ್ತದೆ. ಅಂದಿನ ದಿನಗಳಲ್ಲಿ ವ್ಯಾಪಾರಿಗಳು ದೇಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಮ್ಮ ಸರಕುಗಳನ್ನು ಮಾರಲು ಹೋಗುತ್ತಿದ್ದಿದುಂಟು. ಸಾಮಾನ್ಯವಾಗಿ, ಇವರು ಮಳೆಗಾಲ ಆರಂಭವಾಗುವ ಮೊದಲು ತಮ್ಮ ತಮ್ಮ ಊರು ಸೇರಿಕೊಳ್ಳುತ್ತಿದ್ದರು. ಮಳೆ ಬರತೊಡಗಿದ ನಂತರ, ನದಿಗಳೆಲ್ಲ ಉಕ್ಕಿ ಹರಿಯತೊಡಗಿ, ಪ್ರಯಾಣ ಅಪಾಯಕಾರಿಯೂ , ಕಷ್ಟವೂ ಆಗುತ್ತಿದ್ದರಿಂದ, ಮಳೆಗಾಲಕ್ಕೆ ಮುನ್ನ ಊರು ಸೇರಿಕೊಳ್ಳದಿದ್ದರೆ ಮತ್ತೆ ಮರಳಿ ಹೋಗಲು ೩-೪ ತಿಂಗಳು ಆಗುತ್ತಿದ್ದಿದುಂಟು. ಹಾಗಾಗಿ ಹಳೆಯ ಸಂಸ್ಕುತ ಪದ್ಯಗಳಲ್ಲಿ ಮಳೆಗಾಲ, ಮತ್ತೆ ಒಬ್ಬರಿಂದೊಬ್ಬರು ದೂರವಿರುವ ಗಂಡಹೆಂಡಿರ ನೋವುಗಳು ಮತ್ತೆ ಮತ್ತೆ ಬರುವುದುಂಟು.
ಕೊ.ಕೊ: ಈ ಪದ್ಯದಲ್ಲಿ ಕವಿ ಅಂತಹ ಎರಡು ಪ್ರಸಂಗಗಳನ್ನು ಜೊತೆಗೂಡಿಸಿದ್ದಾನೆ.  ಮಳೆಗಾಲದ ಒಂದು ರಾತ್…

ಊರಿನಲ್ಲಿ ತೇರು

Image
ಮುಗುಳು ನಗುವನ ಮಿಗದ ಕಣ್ಣನ
ಮುಗಿಲ ಬಣ್ಣನ ಖಗವನೇರ್ದನ
ತಿಗರಿಯಲಸುರ ದುರುಳರನು ತಾ ಮಡುಹಿ ಕೆಡಹಿದನ
ಮಗುವಿನಂತೆಲ್ಲರನು ಕಾಯ್ವನ
ಜಗವ ನಡೆಸುವ ಕೇಶವೇಶನ
ಸುಗುಣಿಜನರೇಂ ಪುಣ್ಯಗೈದರೊ ತೇರನೆಳೆಯಲಿಕೆ ಜಗವ ಕಾಯುವನಿವನು ನಂಬಿರೊ
ಮಿಗೆ ಸಲಹುವನು ನೆಚ್ಚಿದವರನು
ಹೊಗಳುವರಿನಿತು ಕಾಲದಿಂದಲು ಲಕುಮಿ ಕೇಶವನ
ಬಗೆಯುತಿರಲಿವನನ್ನನುದಿನದೊ
ಳಗಣ ಕಲುಷವು ಪೋಪುದಾಕ್ಷಣ
ಸುಗುಣಿಜನಹಿತ ನೋಳ್ಪವನು ಈ ಕೌಶಿಕೇಶ್ವರನು ಚಿಗುರು ತುಳಸೀ ಮಾಲೆ ಧರಿಸಿದ
ಮುಗಿಲ ಕಾಂತಿಯ ಮೀರುವಾತನು
ಮಿಗಿಲು ತಾ ಮೆರೆಯುತಿರುತಿಹನಿವನೂರ ತೇರಿನಲಿ
ಬಗೆಯಗೊಳ್ಳುವ ತನ್ನ ಚೆಲುವಲಿ
ಹಗುರಗೊಳಿಸೈ ಜೀವ ಭಾರವ
ಹಗೆಗಳಿರದಿರುವಂತೆ ಮಾಡುತ ನಮ್ಮ ಬದುಕಿನಲಿ -ಹಂಸಾನಂದಿ  ಕೊ: ಮಿತ್ರ ಕಲಾವಿದ ಲೋಕೇಶ್ ಆಚಾರ್ಯ ಅವರು ಚಿತ್ರಿಸಿದ ಅವರೂರ ತೇರಿನ ವರ್ಣಚಿತ್ರ ನೋಡಿ ನನಗೆ ನಮ್ಮೂರ ತೇರಿನ ನೆನಪಾಯಿತು. ಆ ನೆನಕೆಯಲ್ಲಿ ಈ ಮೂರು ಭಾಮಿನಿ ಷಟ್ಪದಿಗಳು ಕೊ.ಕೊ: ಬಲಭಾಗದಲ್ಲಿರುವುದು ಹಾಸನ  ಜಿಲ್ಲೆಯ ಕೌಶಿಕ ಎಂಬ ಹಳ್ಳಿಯಲ್ಲಿರುವ ಲಕ್ಷ್ಮೀಕೇಶವ ಮೂರ್ತಿ. ಈ ಪದ್ಯಗಳನ್ನು ಬರೆದಾಗ ಆ ಸುಂದರ ಮೂರ್ತಿಯೇ ಮನಸ್ಸಿನಲ್ಲಿತ್ತು.  ಕೊ.ಕೊ.ಕೊ: ಈ ಮೂರ್ತಿ ಹೊಯ್ಸಳ ಶೈಲಿಯಲ್ಲಿದ್ದರೂ ದೇವಾಲಯದಲ್ಲಿ ಹೊಯ್ಸಳರದ್ದೇ ಎಂದು ಗುರುತಿಸಬಲ್ಲಂತಹ ಇತರ ಕಲೆಗಾರಿಕೆ ಇಲ್ಲ.

ದಿನಕ್ಕೊಂದು ನೆಪ!

Image
ನೆನ್ನೆ ಅಂದರೆ ಮಾರ್ಚ್ ೨೦ (ಕೆಲವೊಮ್ಮೆ ಮಾರ್ಚ್ ೨೧ ರಂದೂ ಬರುತ್ತೆಅನ್ನಿ)  ವಸಂತದ ಮೊದಲ ದಿನ ಅಂತ ಲೆಕ್ಕ. ಅಂದರೆ, ಈಗ ನಾವು ಯಾವುದನ್ನ ಮೇಷಾದಿ ಬಿಂದು ಅಂತ ಆಕಾಶದಲ್ಲಿ ಕರೀತೀವೋ ಆ ಜಾಗದಲ್ಲಿ ಸೂರ್ಯ ಇರ್ತಾನೆ ಅಂತ. ಆದರೆ , ತಮಾಷಿ ಅಂದ್ರೆ ಈ ಬಿಂದು ಈಗ ಮೇಷ ರಾಶಿಯಲ್ಲಿ ಇಲ್ಲ , ಬದಲಿಗೆ ಮೀನ ರಾಶಿಯನ್ನೂ ದಾಟಿ ಹೆಚ್ಚು ಕಡಿಮೆ  ಕುಂಭರಾಶಿಗೆ ಸೇರಿ ಹೋಗಿದೆ. ಹೋಗಲಿ ಬಿಡಿ, ಈಗ ನಾನು ಹೇಳೋಕೆ ಹೊರಟಿದ್ದೇ ಬೇರೆ ವಿಷಯ.

ನಾವು ಚಿಕ್ಕವರಿದ್ದಾಗ ವರ್ಷದಲ್ಲಿ ಹನ್ನೆರಡು ತಿಂಗಳು, ಆರು ಋತುಗಳು ಮೂರು ಕಾಲಗಳು ಅಂತೆಲ್ಲ ಬಾಯಿಪಾಠ ಮಾಡಿದ್ದೇ ಮಾಡಿದ್ದು. ನಮ್ಮೂರಲ್ಲಿ ಮೂರು ಕಾಲಗಳಂತೂ ಕಾಣ್ತಿದ್ದವು,  ಆದರೆ ಋತುಗಳು? ವಸಂತ ? ಹೇಮಂತ?  ಶಿಶಿರ? ಹೂವು ಅರಳೋ ಕಾಲ? ಎಲೆ ಉದುರೋ ಕಾಲ?  ಹೂವುಗಳೇನೋ ಅರಳ್ತಿದ್ದವು ಹೆಚ್ಚು ಕಡಿಮೆ ವರ್ಷ ಪೂರ್ತಿ. ಇನ್ನು ಎಲೆ ಉದುರುತ್ತೆ ಅನ್ನೋದನ್ನ ಪುಸ್ತಕದಲ್ಲಿ ಓದಿ ತಿಳಿದಿದ್ದು ಅಷ್ಟೇ ಬಿಡಿ.

ಅದೇ ರೀತಿ ಆಗ ನಮಗೆ ಗೊತ್ತಿದ್ದದ್ದು ಮಕ್ಕಳ ದಿನಾಚರಣೆ ಒಂದೇ. ಆಮೇಲೆ, ಬೇರೆ ಬೇರೆ ದಿನಗಳ ಪರಿಚಯವಾಗ್ತಾ  ಹೋಯ್ತು.  ಅಪ್ಪನ ದಿನ, ಅಮ್ಮನ ದಿನ ಮೊದಲಾದುವುಗಳೆಲ್ಲ ಗ್ರೀಟಿಂಗ್ ಕಾರ್ಡ್ ಕಂಪನಿಗಳ ಲಾಭ ಹೆಚ್ಚಿಸೋಕೆ ಹೆಚ್ಚು ಹೆಚ್ಚು ಪ್ರಚಾರವಾಗ್ತಾ ಇದೆ ಅನ್ನುವ ಆರೋಪ ಇದ್ದೇ ಇದ್ದರೂ, ಪ್ರತಿ ದಿನವೂ ಅಪ್ಪನ ದಿನ, ಅಮ್ಮನ ದಿನ ಯಾಕಾಗಬಾರದು ಅಂತ ಪ್ರಶ್ನೆ ಕೇಳುವವರು ಹೆಚ್ಚೇ ಇದ್ದರೂ, ಹಾಗೊಂದು ದಿವಸ ಇದ್ರೆ…