Posts

Showing posts from December, 2007

ವರ್ಷದ ಕೊನೆಯ ಕೊಸರು

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ ಹಾಗೆ ಮಾಡ್ಬಿಟ್ಟಿವೆ. ಈಚೀಚೆಗೆ, ಈ ಕೊಸರಿಗೆ ಅಡಿಟಿಪ್ಪಣಿ, ಅನ್ನೋ ಹೊಸ ಅರ್ಥ ಬಂದು ಸ್ವಲ್ಪ ಅದು ಕೆಲವೆಡೆಲ ನಲಿದಾಡ್ತಿದೆ ಅನ್ನಿ. ವರ್ಷದ ಕೊನೆಯ ಈ ದಿವಸ ಏನಾದ್ರೂ ಬರೀಬೇಕು ಅಂದ್ರೆ, ಸರಕು-ಸಮಯು ಎರಡೂ ಇರ್ಬೇಕಲ್ವ? ಇಲ್ದೇ ಇದ್ರೆ? ತೊಂದ್ರೆ ಏನಿಲ್ಲ. ಮಿಕ್ಕಿದ್-ಹಕ್ಕಿದ್ದೆಲ್ಲ ಅಕ್ಕಮ್ಮನ ಪಾಲು ಅನ್ನೋ ಗಾದೆ ಹಾಗೆ, ಏನಾದ್ರೂ ಉಳ್ದಿದೆಯಾ ನೋಡ್ಬೇಕು. ಅಷ್ಟೆ.

ಅಕ್ಕಮ್ಮ ಹಾಗಿರ್ಲಿ. ಈ ೨೦೦೭ ನೇ ವರ್ಷ ಮುಗಿಯೋ ಈ ದಿವಸ ಒಂದು ವಿಷಯ ಹೇಳ್ಬಿಡ್ತೀನಿ. ನಮ್ಮಲ್ಲಿ ಹಲವಾರು ಪಂಚಾಂಗಗಳಿವೆ (calendar). ಸೌರಮಾನ -ಚಾಂದ್ರಮಾನ-ಮುಸ್ಲಿಮ್ - ಚೈನೀಸ್ ಅಂತ. ಎಲ್ಲಾ ಪಂಚಾಂಗಗಳೂ ಆಕಾಶದ್ ಜೊತೆ ಒಂದಲ್ಲ ಒಂದ್ರೀತಿ ತಾಳೆ ಹಾಕ್ಬಿಟ್ಟೇ ಹೊಸ ವರ್ಷ ಶುರು ಮಾಡತ್ತ್ವೆ. ಆದ್ರೆ, ಈ ಜನವರಿ ಒಂದಕ್ಕೆ ಶುರುವಾಗೋ ಈ ಗ್ರಿಗೋರಿಯನ್ ಪಂಚಾಂಗ ಮಾತ್ರ, ಆ ತರಹ ಯಾವ ಕಟ್ಟೂ ಇಲ್ದೆ, ಸುಮ್ಮನೆ ಯಾವ್ದೋ ಒಂದು ದಿನದಿಂದ ಶುರುವಾಗಿಬಿಡತ್ತೆ ಹಾಳಾದ್ದು! ಇಲ್ದೇ ಇದ್ರೆ, ಹತ್ತನೆ ತಿಂಗ್ಳು ಅನ್ನೋ ಅರ್ಥ ಡಿಸೆಂಬರ್ ಅನ್ನೋ ಹೆಸರಲ್ಲೇ ಬರೋವಾಗ, ಅದು ಮುಗಿದ್ಮೇಲೆ ಬರೋ ಜನವರಿ ಮೊದಲ್ ತಿಂಗ್ಳಾಗಕ್ಕೆ ಹೇಗಾಗ್ತಿತ್ತು ಹೇಳಿ?

ವರ್ಷ ಮುಗ್ಯೋವಾಗ ಹಿಂತಿರುಗಿ ನೋಡೋರು ಕೆಲವ್ರು; ನಾಳೆ ಹೊಸ ವರ್ಷ …

ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ

ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ ಬಂಗಾರ ಶಾರದೆಯ ಶ್ರೀದಿವ್ಯವಾಣಿ ಅಚ್ಚ ಕನ್ನಡಜಾಣೆ ಗಾಯತ್ರಿ ಗೀರ್ವಾಣಿ ವ್ಯಾಸ ಲಕ್ಷ್ಮೀಶರ ಕುಸುಮಕೋಕಿಲವಾಣಿ ಕರುನಾಡ ಕವಿಕುಲದ ಕನ್ನಡದ ರಸವಾಣಿ ಸಿರಿಗನ್ನಡಂ ಗೆಲ್ಗೆ ಶ್ರೀಮಂತ ವಾಣಿ
ಈ ಹಾಡನ್ನು ಚಿಕ್ಕವನಾಗಿದ್ದಾಗಿನಿಂದ ನಾನು ಕೇಳುತ್ತ ಬಂದಿದ್ದೇನೆ. ಈ ಹಾಡನ್ನು ಕೇಳುತ್ತಲೆ, ನಮ್ಮ ಸಂಗೀತದಲ್ಲಿ ಶತಮಾನಗಳು ಉರುಳಿದಂತೆ ಬೇರೆಬೇರೆ ರಾಗಗಳು ಚಾಲ್ತಿಗೆ ಬರುವುದೂ ಹೋಗುವುದೂ ನನ್ನ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಆಯಾ ಕಾಲಕ್ಕೆ ತಕ್ಕಂತೆ, ಹೊರಗಿನ ಪ್ರಭಾವಗಳು ಶಾಸ್ತ್ರ್ರೀಯ ಸಂಗೀತದ ಮೇಲೆ ಪ್ರಭಾವ ಬೀರುವುದೂ, ನಿದಾನವಾಗಿ ಶಾಸ್ತ್ರೀಯವಾದ್ದು ಯಾವುದು ಎನ್ನುವುದರ ವಿವರಣೆಯೇ ಬದಲಾಗಿ ಹೋಗಿರುವುದೂ ಉಂಟು.

ಮುಸಲ್ಮಾನರು ವಾಯುವ್ಯ ಭಾಗದಿಂದ ನಮ್ಮ ದೇಶದ ಮೇಲೆ ದಂಡೆತ್ತಿ ಬಂದಾಗ ಅವರೊಡನೆ ಬಂದ ಅವರ ಸಂಗೀತ ಆವತ್ತು ಭಾರತದಲ್ಲಿದ್ದ ಸಂಗೀತದ ಮೇಲೆ ತನ್ನ ಪ್ರಭಾವವನ್ನು ಬೀರಿತು. ಇದರಿಂದಲೇ, ನಮ್ಮಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದೂ ಸ್ತಾನಿ ಸಂಗೀತ ಎಂಬ ಎರಡು ಪ್ರಕಾರಗಳುಂಟಾಗಿರುವುದೂ ತಿಳಿದ ವಿಷಯವೇ. ಹೆಜ್ಜುಜ್ಜಿ, ನವರೋಜು ಮೊದಲಾದ ರಾಗಗಳಲ್ಲಿ, ನಮ್ಮಲ್ಲಿಗೆ ಬಂದಮೇಲೂ ಮೊದಲಿನ ಹೆಸರನ್ನೇ ಅಥವ ಮೊದಲ ಹೆಸರನ್ನೇ ಹೋಲುವ ಹೆಸರನ್ನು ಇಡಲಾಯಿತು.

ಹಾಗೆ ಬಂದ ರಾಗಗಳಲ್ಲೊಂದು ಇಮನ್. ಅಥವ, ಎಮನ್, ನಮ್ಮ ದೇಶದ ಸಂಗೀತದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಎಮನ್, ಇಮನ್ ಎಂದರೆ blessed ಎಂಬ ಅರ್ಥವನ್ನು …

ಶೃಂಗಾರ ರಸಮಂಜರಿ

ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ಚೆಲ್ಲಿದೆ ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ. ಆದರೆ, ಅವುಗಳಲ್ಲಿ ಸಾಹಿತ್ಯ ಗೌಣ. ಸಂಗೀತ ಮುಖ್ಯ.

ಹಿಂದಿನಿಂದಲೂ ರಸಗಳ ಪಟ್ಟಿ ಮಾಡುವಾಗ ಶೃಂಗಾರವೇ ಮೊದಲಿನದು. ಅಮರಕೋಶ ರಸಗಳನ್ನು "ಶೃಂಗಾರ ವೀರ ಕರುಣಾ ಅಧ್ಬುತ ಹಾಸ್ಯ ಭಯಾನಕಾ: ಭೀಭತ್ಸ ರೌದ್ರೋ ಚ ರಸಾ:" ಎಂದು ಎಂಟು ರಸಗಳನ್ನು ಪಟ್ಟಿಮಾಡುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ, ಈ ಎಂಟರ ಜೊತೆಗೆ ಒಂಬತ್ತನೆಯದಾದ ’ಶಾಂತ’ವೆಂಬ ರಸವೂ ದೊರೆಯುತ್ತೆ. ಒಟ್ಟಿನಲ್ಲಿ ಶೃಂಗಾರವೇ ಮೊದಲ ರಸವಾಗಿತ್ತು ಎಂದು ನಾವಂದುಕೊಳ್ಳುವುದರಲ್ಲಿ ತಪ್ಪಿಲ್ಲ.

ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ. ೧೭೭೫- ೧೮೩೫) ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಅಪರಿಮಿತ ಮೇಧಾವಿ. ವೆಂಕಟಮಖಿಯ ಶಿಷ್ಯ ಪರಂಪರೆಯಲ್ಲಿ ಬಂದ ಇವರು, ವೆಂಕಟಮಖಿ ಪ್ರತಿಪಾದಿಸಿದ ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿ, ಆ ಮೊದಲು ಯಾವ ರಚನೆಗಳೂ ಇರದ ರಾಗಗಳಲ್ಲೂ ಕೃತಿಗಳನ್ನು ರಚಿಸ…

Someಕ್ರಮಣದ ಪುರಾಣ - ಭಾಗ ಎರಡು

Image
(ಭಾಗ ಒಂದರಿಂದ ಮುಂದುವರೆದಿದೆ ....; ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ)

ನಮ್ಮ ದೇಶದಲ್ಲಿ ಮೊದಲು ಆಕಾಶಾನ ಹನ್ನೆರಡು ರಾಶಿಗಳಾಗಿ ವಿಂಗಡಿಸೋ ಪದ್ಧತಿ ಇರಲಿಲ್ಲ. ಅದರ ಬದಲು, ಆಕಾಶವನ್ನು ಇಪ್ಪತ್ತೆಂಟು ನಕ್ಷತ್ರಗಳಾಗಿ ವಿಂಗಡಿದಿದ್ರು. ಗಮನಿಸಿ: ಇಪ್ಪತೇಳು ಅಲ್ಲ, ಇಪ್ಪತ್ತೆಂಟು. ಇದು ಚಂದ್ರನ ಆಕಾಶದಲ್ಲಿ ಹೊರಟ ಸ್ಥಳಕ್ಕೇ ಮತ್ತೆ ಬರಲು ಸುಮಾರು ಇಪ್ಪ್ಪತ್ತೆಂಟು ದಿವಸಗಳಾಗೋದ್ರಿಂದ. ಸೂರ್ಯನ ಎಲ್ಲಿದೆ ಅಂತ ತೋರ್ಸಕ್ಕೂ ಇದೇ ನಕ್ಷತ್ರಗಳನ್ನೆ ಬಳಸ್ತಿದ್ರು. ಪ್ರತಿ ನಕ್ಷತ್ರವನ್ನು ನಾಕು ಭಾಗ ಮಾಡಿ, ಒಂದೊಂದಕ್ಕೂ ಒಂದು ಪಾದವೆಂದು ಕರ್ರೀತಿದ್ರು. ವಸಂತದ ಮೊದಲ ದಿನ - ಎಂದರೆ, ಚಳಿಗಾಲ ಮುಗಿಯುತ್ತಾ ಹಗಲು ಹೆಚ್ಚಲಾರಂಭಿಸಿದಾಗ ಹಗಲೂ ರಾತ್ರಿ ಸರಿಸಮಾನವಾಗಿ ಬರುವ ವಸಂತ ವಿಷುವ (vernal equinox) ದ ಸಮಯದಲ್ಲಿ ಸೂರ್ಯ ಮೃಗಶಿರಾ ನಕ್ಷತ್ರದಲ್ಲಿರುತ್ತಾನೆಂದು ಋಗ್ವೇದದಲ್ಲಿ ಬರುತ್ತೆ (ಇದು ಸುಮಾರು ಕ್ರಿ.ಪೂ. ೪೦೦೦ ರ ಸುಮಾರಿನ ಸಮಾಚಾರ. ನಂತರ ಬಂದ ಬ್ರಾಹ್ಮಣಗಳಲ್ಲ್ಲಿ ವಸಂತಾದಿ - ಇದೇ ವರ್ಷದಾದಿ - ಯುಗಾದಿಯ ದಿವ್ಸ ಸೂರ್ಯ ಕೃತ್ತಿಕಾ ನಕ್ಷತ್ರದಲ್ಲಿರ್ತಾನೆ ಅಂತ ಹೇಳದೆ. ಮತ್ತೆ ಸುಮಾರು ಕ್ರಿಸ್ತನ ಆಸುಪಾಸಿನ ಪುರಾಣಗಳು, ವಸಂತ ವಿಷುವದ ದಿನ ಸೂರ್ಯ ಅಶ್ವಿನಿ ನಕ್ಷತ್ರ ವನ್ನು ಪ್ರವೇಶಿಸ್ತಾನೆ ಅನ್ನತ್ವೆ. ಇದೇನಿದು? ಈ ರೀತಿ ನಂಬಲಾದಂತ ಬೇರೆಬೇರೆ ಮಾತನ್ನ ಹೇಳ್ತಾರಲ್ಲ ಅಂತ ಅನ್ಕೋಬೇಡಿ. ಇದ್ಯಾಕೆ ಹೀಗೆ ಅನ್ನೋದನ್ನ ಮುಂದೆ ನೋಡೋಣ. ಸು…

Someಕ್ರಮಣದ ಪುರಾಣ - ಭಾಗ ಒಂದು

Image
ಇತ್ತೀಚೆಗೆ ಸಂಪದದಲ್ಲಿ ಡಾನಾ.ಸೋಮೇಶ್ವರ ಅವರು ಈಗ ಸಂಕ್ರಾಂತಿಯ ಆಚರಣೆಯಲ್ಲಿ Someಕ್ರಾಂತಿ ತರುವ ಕಾಲವಾಗಿದೆ ಎಂದು ಕರೆ ಕೊಟ್ಟರು. ಅದಾದ ಮೇಲೆ ಸ್ವಲ್ಪ ವಿಚಾರ ವಿನಿಮಯವೂ ಆಯಿತು. ಅದಕ್ಕೆ Someಕ್ರಮಣದ ಬಗ್ಗೆ ಸ್ವಲ್ಪ Someಗೀತ ಹಾಡೋಣ ಎನ್ನಿಸಿತು. ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ ಅಂತ ಗಾದೆ ಇರೋದನ್ನ ಮರೀಬೇಡಿ. ಹಾಗಾಗಿ ಓದಿದ್ದು ಹಿಡೀದಿದ್ರೆ, ಇನ್ನೊಂದು ಸಲ ಓದಿ. ಇನ್ನೂ ಸರಿ ಇಲ್ಲ ಅಂದ್ರೆ ಮತ್ತೊಂದು ಸಲ ಓದಿ. ಆಗ, ಸರಾಗ ವಾಗಿಬಿಡತ್ತೆ. ರಾಗದ ರುಚಿ ತಿಳಿಯತ್ತೆ.

ಸ್ವಲ್ಪ ದಿನದ ಕೆಳಗೆ ನಾನು ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆ ಬಗ್ಗೆ ಸ್ವಲ್ಪ ಹರಟಿದ್ದೆ. ನೆನಪಿಲ್ದೇ ಇದ್ರೆ, ಅದನ್ನ ಇಲ್ಲಿ ನೀವು ಓದ್ಬಹುದು. ನಮಗೆಲ್ಲ ಗೊತ್ತಿರೋ ಹಾಗೆ, ಮುಕ್ಕಾಲುವಾಸಿ ಹಬ್ಬಗಳು ಪ್ರತೀ ವರ್ಷ ಬಂದ ದಿನವೇ ಬರೋಲ್ಲ. ಯುಗಾದಿ ದೀಪಾವಳಿ ಗೌರಿ ಗಣೇಶ ಇವೆಲ್ಲ ಹಾಗೆ. ಒಂದೇ ಹಬ್ಬ ಯಾವಾಗಲೂ ಸುಮಾರಾಗಿ ಒಂದೇ ದಿನ ಬರುತ್ತೆ. ಅದು ಜನವರಿ ೧೪ರ ದಿನ (ಒಂದೊಂದ್ಸಲ ೧೫ಕ್ಕೋ ೧೬ಕ್ಕೋ ಬಂದ್ರೆ, ನನ್ನ ಕ್ಷಮಿಸಿಬಿಡಿ ಸ್ವಾಮೀ , ನನ್ ತಪ್ಪಲ್ಲ ಅದು!) ಸಂಕ್ರಾಂತಿ. ಇದರ ಜೊತೆಗೆ ಕರಾವಳಿಯವ್ರು ಯುಗಾದಿನೂ ಹೀಗೇ ಏಪ್ರಿಲ್ ಹದ್ನಾಕರ ದಿನವೇ ಮಾಡ್ತಾರೆ. ಆದ್ರೆ, ನಮ್ಮ ಹಳೇ ಮೈಸೂರಲ್ಲಿ ಯುಗಾದಿ ಅಂದ್ರೆ ಚಾಂದ್ರಮಾನದ್ದೇ. ಮತ್ತೆ ಘಟ್ಟದ ಕೆಳಗ್ನೋರು ಬೇಜಾರು ಮಾಡ್ಕೋಬೇಡಿ ನೋಡಿ ಮತ್ತೆ.

ಸರಿ. ಎಲ್ಲೆಲ್ಲೋ ಹೋಗೋದು ಬಿಟ್ಟು ವಿಷ್ಯಕ್ಕೆ ಬರ್ತೀನ…

ಅಂಗಳದೊಳಗೆ ಬೆಳದಿಂಗಳು ತುಂಬಿತು

ಕೆಲವು ದಿನಗಳ ಹಿಂದೆ ಸಂಪದದ ಗೆಳೆಯರೊಬ್ಬರು ಜಾವಳಿ ಅಂದರೇನು ಅಂತ ಕೇಳಿದ್ದರು . ಮೊದಲೆ ಹೇಳಿಬಿಡುವೆ - ಜಾವಳಿಗೂ ಜವಳಿಗೂ ಅರ್ಥಾತ್ ಸಂಬಂಧ ಇಲ್ಲ ಅಂತ. ಜಾವಳಿ ಜವಳಿ ಏನೂ ಅವಳಿ-ಜವಳಿ ಪದಗಳಲ್ಲ. ಆದರೆ ಪದ ಜಾವಳಿ ಸುಮಾರು ಅವಳಿ ಜವಳಿ ಅಂದ್ರೂ ತಪ್ಪಿಲ್ಲ.

ಇದೇನಪ್ಪ ಜಾವಳಿ ಅನ್ನೋ ಪದದ ಅರ್ಥವನ್ನೇ ಹೇಳದೆ ಪದ ಹಾಡ್ತಿದಾನೆ ಅಂದ್ಕೋಬೇಡಿ. ಇಲ್ಲಿ ಪದ ಅಂದರೆ, ಒಂದು ವಾಕ್ಯದಲ್ಲಿ ಬರುವ ಮಾತುಗಳು ಅನ್ನೋ ಅರ್ಥವಲ್ಲ. ಬದಲಿಗೆ ಪದ ಅನ್ನೋದು ಒಂದು ರೀತಿಯ ಸಂಗೀತ ರಚನೆ. ಇದೇನಪ್ಪ ಹೀಗೆ ಅಂತೀರಾ? ಪದ ಹಾಡಬೇಡ ಸುಮ್ಮನೆ ನೀನು ಅಂತ ಹೇಳೋದು ಕೇಳಿಲ್ಲ್ವಾ-ಮತ್ತೆ ಮತ್ತೆ ಹೇಳಿದ್ದನ್ನೇ ಹೇಳೋರ್ಗೆ? ಅದಕ್ಕೆ ಕಾರಣ ಇದೆ. ಹರಿದಾಸರು ರಚಿಸಿರೋ ರಚನೆಗಳಲ್ಲಿ ಬಹುಪಾಲು ಕೃತಿಗಳಿಗೆ ಪದ ಅನ್ನೋ ಹೆಸರೇ ಸಲ್ಲತ್ತೆ. ಅವರ ರಚನೆಗಳನ್ನ ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳು ಮೊದಲಾಗಿ ವಿಂಗಡನೆ ಮಾಡಬಹುದು. ಪದ ಅನ್ನೋದು ಈ ಎಲ್ಲ ರಚನೆಗಳನ್ನೂ ಒಟ್ಟಿಗೆ ಸೂಚಿಸಲು ಇರೋ ಒಂದು ಸಾಮಾನ್ಯ ಹೆಸರು.

ಈ ಪದಗಳನ್ನು ಮೊದಲು ರಚಿಸಿದ್ದು ಯಾರು ಎಂದರೆ ನಾವು ನಮ್ಮ ಹರಿದಾಸರನ್ನೇ ಬೊಟ್ಟು ಮಾಡಿತೋರಿಸ್ಬೇಕಾಗುತ್ತೆ. ಹರಿದಾಸರ ಹಾಡುಗಳ ಕೇಂದ್ರಬಿಂದು ಹರಿಯೇ. ಹರಿಯ ಮೇಲೆ ಬರೆದ ರಚನೆಗಳಲ್ಲಿ ವೈವಿಧ್ಯಮಯವಾದ ಪದಗಳು ಇವೆ. ದೇವಸ್ತುತಿ, ಭಕ್ತಿಯನ್ನು ಸೂಚಿಸುವ ಪದಗಳು - ಇವನ್ನೇ ಕೀರ್ತನೆ, ದೇವರನಾಮ ಎನ್ನುವುದು. ಮತ್ತೆ ದೇವರನ್ನೇ ಮಗುವಿನಂತೆ ಭಾವಿಸಿ ಲಾಲಿಸುವ ತಾಯೀಭಾವದ ವ…

ಕನ್ನಡಕ್ಕೆ ಕೈ ಎತ್ತಿ - ದಾಸಸಾಹಿತ್ಯವನ್ನು ವಿಕಿಯಲ್ಲಿ ಸೇರಿಸಲು ನೆರವಾಗಿ

ಪುರಂದರದಾಸರ ಪದಗಳನ್ನು ರಸಿಕ ಫೋರಮ್ ನ ( http://http://www.rasikas.org// ) ವಿಕಿಯಲ್ಲಿ (http://www.rasikas.org/wiki/purandara-compositions) ಹಾಕುವ ಕೆಲಸವನ್ನು ಕೈಗೊಳ್ಳಲಾಗಿದೆ. ಈ ಜಾಲತಾಣ ಸಂಗೀತಾಸಕ್ತರ ತಾಣ. ಹಲವು ಭಾಷೆಗಳನ್ನಾಡುವ ಜನರಿಗೆ ಉಪಯೋಗವಾಗಲೆಂದು, ಹಾಡುಗಳನ್ನು ಇಂಗ್ಲಿಷ್, ಕನ್ನಡ, ದೇವನಾಗರಿ ಮತ್ತು ಇತರ ದಕ್ಷಿಣ ಭಾರತದ ಲಿಪಿಗಳಲ್ಲಿ ಕೊಡುವ ಮತ್ತು ಅರ್ಥವನ್ನೂ ಇಂಗ್ಲಿಷಿನಲ್ಲಿ ಕೊಡುವ ಉದ್ದೇಶವಿದೆ (ಉದಾಹರಣೆಗೆ ಈ ಪುಟ ನೋಡಿ: http://www.rasikas.org/wiki/mullu-koneya .) ಸದ್ಯಕ್ಕೆ ಈಗ ಕೆಲವು ಹಾಡುಗಳು ಇಲ್ಲಿ ಲಭ್ಯವಿದೆ. ಒಂದೇ ಸಲಕ್ಕೆ ಒಂದು ಲಿಪಿಯಿಂದ (ಉದಾಹರಣೆಗೆ ಕನ್ನಡ, ಇಂಗ್ಲಿಷ್) ಉಳಿದೆಲ್ಲ ಲಿಪಿಗಳಿಗೆ ( ಉದಾ: ತಮಿಳು, ದೇವನಾಗರಿ, ತೆಲುಗು, ಮಲೆಯಾಳಂ) ಪರಿವರ್ತಿಸಲು ಹಲವು ಸೌಲಭ್ಯಗಳಿವೆ.

ನಿಮಗೆ ಈ ಕೆಲಸದಲ್ಲಿ ಪಾಲ್ಗೊಳ್ಳಲು ಆಸಕ್ತಿ (ಇದು ಬಹಳ ಮುಖ್ಯ) , ಸಮಯ (ಇದು ಎಷ್ಟೇ ಕಡಿಮೆ ಇದ್ದರೂ, ಪರವಾಗಿಲ್ಲ! ಹನಿ-ಹನಿಗೂಡಿದರೆ ಹಳ್ಳ ಎಂಬ ಮಾತು ಕೇಳಿಲ್ಲವೇ?) ಇರುವವರು ದಯವಿಟ್ಟು ನನ್ನನ್ನು ಇ-ಮೆಯ್ಲ್ ಮೂಲಕ ಸಂಪರ್ಕಿಸಿ (hamsanandi_ಎಟ್_ಜಿಮೆಯ್ಲ್.com) .. ಹಾಡುಗಳನ್ನು ಓದಿ, ತಿದ್ದಿ, ಬೇರೆ ಲಿಪಿಗಳಿಗೆ (ಸಾಫ್ಟ್ವೇರ್ ಸಹಾಯದಿಂದ) ಪರಿವರ್ತಿಸಿ, ಅದನ್ನು ವಿಕಿಗೆ ಎತ್ತೇರಿಸಬೇಕಾದ್ದು ನಮ್ಮ ಮುಂದಿರುವ ಕೆಲಸ. ಇದನ್ನು ಕನ್ನಡ ಅರ್ಥವಾಗುವವರು ಮಾತ್ರ ಮಾಡಲು ಸಾಧ್ಯ.

ಸಾಧಾರಣ…