Posts

Showing posts from February, 2008

ಪುಣ್ಯದ ಫಲ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗಿರುವ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

ಇದರ ಬಗ್ಗೆ ಒಂದು ಸಂಸ್ಕೃತ ಸುಭಾಷಿತ ಏನು ಹೇಳುತ್ತೆ ನೋಡಿ - ಅನುವಾದ ನನ್ನದು:

ಕಾಡಿನಲಿ ಕಾಳಗದಿ ವೈರಿಗಳ ನಡುವಲ್ಲಿ
ನೀರಿನಲಿ ಬೆಂಕಿಯಲಿ ಕಡಲಲ್ಲಿ ಬೆಟ್ಟದಾ-
ನೆತ್ತಿಯಲಿ ನಿದ್ದೆಯಲಿ ಮತ್ತಿನಲಿ ಮತ್ತಾಯ-
ತಪ್ಪಿದಲಿ ಕಾವವು ಪುಣ್ಯಗಳು ಮುನ್ನಮಾಡಿದವು!

ಮೂಲ:

ವನೇ ರಣೇ ಶತ್ರು ಜಲಾಗ್ನಿಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

-ಹಂಸಾನಂದಿ

ಹೆಸರಿಲ್ಲದ್ದು !

ಯಾರನ್ನಾದರೂ ಬೆಟ್ಟುಮಾಡಿ ತೋರುವುದು ಸಭ್ಯತೆಯಲ್ಲ ಅನ್ನುವುದು ಹಲವರ ಅಂಬೋಣ. ಅದನ್ನು ನೀವು ಒಪ್ಪುವಿರೋ, ಬಿಡುವಿರೋ, ಆದರೆ, ’ತೋರು’ವ ಕೆಲಸ ಮಾಡುವ ಬೆರಳಿಗೆ ತೋರುಬೆರಳು ಎಂಬ ಹೆಸರೇನೋ ಸಾರ್ಥಕ ಅನ್ನಿಸುತ್ತೆ. ಅಲ್ಲವೆ? ಅದಲ್ಲದೆ, ಎಲ್ಲಕ್ಕಿಂತ ಚಿಕ್ಕ ಬೆರಳಿಕೆ ಕಿರುಬೆರಳು ಎನ್ನುವುದೂ, ಎಲ್ಲಕ್ಕೂ ದಪ್ಪದ ಬೆರೆಳಿಗೆ ಹೆಬ್ಬೆರಳು ಎನ್ನುವುದೂ, ಅಷ್ಟೇ ಅರ್ಥಪೂರ್ಣ. ಇನ್ನು ನಡು ಬೆರಳು- ಅದೂ ಕೂಡ ಸ್ಥಾನಸೂಚಕ. ಉಳಿದದ್ಯಾವುದು?

ಆ ಬೆರಳಿಗೆ ಆಗಾಗ ಉಂಗುರ ತೊಡಿಸುವುದರಿಂದ, ಅದಕ್ಕೆ ಉಂಗುರದ ಬೆರಳು ಎನ್ನುವ ರೂಢಿ ಇದೆ. ಸಂಸ್ಕೃತದಲ್ಲಿ, ಈ ಬೆರಳಿಗೆ ಏನು ಹೆಸರು ಗೊತ್ತೇ?

’ಹೆಸರಿಲ್ಲದ್ದು’ !

ಹೌದು. ಈ ಬೆರಳಿಗೆ ’ಅನಾಮಿಕಾ’ ಅಥವ ಹೆಸರಿಲ್ಲದ್ದು ಎನ್ನುವುದೇ ಸರಿಯಾದ ಹೆಸರು ಸಂಸ್ಕೃತದಲ್ಲಿ. ಉಂಗುರದ ಬೆರಳು ಎಂಬರ್ಥ ಬರುವ ಹೆಸರಿದೆಯೋ ಇಲ್ಲವೋ ನಾನರಿಯೆ.

ಆದರೆ, ಈ ಹೆಸರು ಹೇಗೆ ಬಂತೆಂಬುದರ ಬಗ್ಗೆ ಮಾತ್ರ ಕುತೂಹಲಕಾರಿ ಕಥೆಯೊಂದಿದೆ. ಕೇಳಿ.

ಪುರಾ ಕವೀನಾಂ ಗಣನಾ ಪ್ರಸಂಗೇ ಕನಿಷ್ಟಕಾದಿಷ್ಟಿತ ಕಾಲಿದಾಸಃ
ಅದ್ಯಾಪಿ ತತ್ತುಲ್ಯ ಕವೇರಭಾವಾತ್ ಅನಾಮಿಕಾ ಸಾರ್ಥವತೀ ಬಭೂವ

ಇದನ್ನೇ ಕನ್ನಡದಲ್ಲಿ ನಾನು ಹೀಗೆ ಹೇಳುವೆ:

(ಇದು ಕನ್ನಡವೇ? ಎಂದು ಕೇಳದಿರಿ :-) )

ಹಿಂದೊಮ್ಮೆ ವರಕವಿಗಳನು ಎಣಿಸುತಿರಲು
ಕಿರುಬೆರಳಲಿ ಇಟ್ಟರು ಆ ಕಾಳಿದಾಸನನು
ಇಂದಿಗೂ ಅವನ ಸಮ ಕವಿ ಬರದೆ ಇರಲು
ಹೆಸರಿಲ್ಲದ್ದು ಆಯಿತದು ಅರ್ಥಪೂರಿತವು

ಕವಿಗಳನ್ನು ಎಣಿಕೆ ಮಾಡುವಾಗ, ಕಾಳಿದಾಸ ಎಂದು ಹ…

ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!

ಕನ್ನಡಕ್ಕೆ ಕೆಲಸ ಮಾಡಿರುವವರಲ್ಲಿ, ಕನ್ನಡ ಮನೆ ಮಾತಲ್ಲದವರು ಹಲವರು ಸೇರಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪುತಿನ ಮತ್ತೆ ದ.ರಾ.ಬೇಂದ್ರೆಯಂತಹವರ ಮನೆಮಾತು ಕನ್ನಡವಾಗಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಹಾಗೇ, ಹೊರನಾಡಿನಿಂದ ವಲಸೆ ಬಂದು, ಕನ್ನಡದ ನೆಲದಲ್ಲಿ ನೆಲೆ ನಿಂತು, ಕನ್ನಡಿಗರೇ ಆಗಿಹೋಗಿರುವ ಗುಂಪುಗಳಲ್ಲಿ, ಸಂಕೇತಿಗಳನ್ನು ಎಣಿಸಬೇಕಾಗುತ್ತೆ. ಹೆಚ್ಚಿಗೆ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಊರಿದ ಸಂಕೇತಿಗಳು, ಈಗ ಎಲ್ಲ ಕನ್ನಡಿಗರಂತೆ, ಸರ್ವವ್ಯಾಪಿಗಳಾಗಿದ್ದಾರೆ!

ಪ್ರಖ್ಯಾತ ಸಂಕೇತಿ-ಕನ್ನಡಿಗರ ಸಾಲಿನಲ್ಲಿ, ಸಂಗೀತ ಕಲಾನಿಧಿ ಆರ್.ಕೆ.ಶ್ರೀಕಂಠನ್, ವೈಣಿಕ ಆರ್.ಕೆ.ಸೂರ್ಯನಾರಾಯಣ, ಹಾಡುಗಾರ ಆರ್.ಕೆ. ಪದ್ಮನಾಭ, ಕೊಳಲಿನ ಮಾಂತ್ರಿಕ ಎಸ್.ಶಶಾಂಕ್, ಇಂದಿನ ಯಶಸ್ವಿ ಚಲನಚಿತ್ರ ಸಂಗೀತ ನಿರ್ದೇಶಕ ಮನೋಮೂರ್ತಿ ಮೊದಲಾದವರನ್ನು ಗುರುತಿಸಬಹುದು.

ಸಂಕೇತಿಗಳು ಎಂಬ ಗುಂಪು ತನ್ನ ಮೂಲ ಸ್ಥಾನವನ್ನು ತೊರೆದು, ಕರ್ನಾಟಕಕ್ಕೆ ಬಂದು ನೆಲೆ ನಿಂತಿದ್ದರ ಹಿಂದೆ ಪರಂಪರೆಯಿಂದ ಬಂದ ಕಥೆಯೊಂದಿದೆ.

ತಿಳಿಯುವ ಕುತೂಹಲವಿದೆಯೇ?

ಹಾಗಿದ್ದರೆ ಈ ಕೊಂಡಿಯಲ್ಲಿ ಅದನ್ನು ಕಥೆಯೊಂದರ ರೂಪದಲ್ಲಿ ಓದಬಹುದು : ಹೀಗೊಬ್ಬಳು ಹೆಂಗಸು

ಓದಿ. ಏನನ್ನಿಸಿತು ಎಂದು ಬರೆಯುವುದನ್ನು ಮರೆಯಬೇಡಿ.

-ಹಂಸಾನಂದಿ

ಪ್ರಾಸದ ವರಸೆ

ಸಂಪದದಲ್ಲಿ, ಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಅಲ್ಲೇ ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊಡನೆ ಇಲ್ಲಿ ಮತ್ತೊಮ್ಮೆ ಹಾಕೋಣ ಅನ್ನಿಸಿತು!

ಈಗ ಓದಿ ಈ ಪದ್ಯ - ಆಸೆಯ ದೋಸೆ ಅಥವ ಪ್ರಾಸದ ವರಸೆ - ನಿಮಗಿದು ಪ್ರಯಾಸದ ವರಸೆಯಾಗಿ ಕಂಡರೆ, ನಾನೇ ಜವಾಬ್ದಾರಿ!

ದೋಸೆ ದೋಸೆ ತಿನ್ನಲು ಆಸೆ

ಅಯ್ಯೋ ಮನಸೇ!
ಇರೋದ್ ಸ್ಯಾನ್ ಹೋಸೆ
ಅಂತ್ಯಾಕ್ ನಿರಾಸೆ?

ದೋಸೆಮೇಲಾದ್ರೆ
ತಡೀಲಾರ್ದಾಸೆ
ಮೆಂತ್ಯ ಅಕ್ಕಿ
ಮೇಲುದ್ದಿನ್ಬೇಳೇ
ಹಾಕಿ ನೆನೆಸೇ!

ನಾಕು ಗಂಟೆ ಬಿಟ್ಟು
ರುಬ್ಬು ಗುಂಡಲ್ಹಾಕಿ
ಚೆನ್ನಾಗ್ ತಿರುವಿಟ್ಟು
ತಯಾರ್ಸು ದೋಸೆಹಿಟ್ಟು!

ಮಾರ್ನೆ ದಿನವೆ
ನಾನ್-ಸ್ಟಿಕ್ ಕಾವ್ಲೆ
ಒಲೆಮೇಲಿಟ್ರೆ
ಶುರು ನೋಡಾಗ್ಲೆ
ಸೌಟಿಗೊಂದು ದೋಸೆ

ಅಜ್ಜಿಯು ಮಾಡಿದ
ಮೆಂತ್ಯದ ದೋಸೆ
ಅಮ್ಮನು ಮಾಡಿದ
ರಾಗಿಯ ದೋಸೆ
ಮುದ್ದಿನ ಮಡದಿಯ
ಉದ್ದಿನ ದೋಸೆ
ವಿದ್ಯಾರ್ಥಿ ಭವನದ
ಮಸಾಲೆ ದೋಸೆ
ನಿಂತೇ ಮುಗಿಸುವ
ದರ್ಶಿನಿ ದೋಸೆ
(ಗತಿ ಬೇರೆ ಇರದೆ)
ನಾನೇ ಮಾಡಿದ
ಧಿಡೀರು ದೋಸೆ

ಯಾವ್ದಾದ್ರೂ ದೋಸೆ
ಯಾರ್ಮಾಡಿದ್ರು ದೋಸೆ
ತಿನ್ನಲು ಸೊಗಸೇ!

-ಹಂಸಾನಂದಿ

ಶಂಖನಾದ - ಭಾಗ ಎರಡು :)

ಈ ಹಿಂದೆ ಸಂಪದದಲ್ಲಿ ನಾನು ಬರೆದಿದ್ದ ಬರಹವೊಂದು, ಸ್ವಲ್ಪ ವಿಸ್ತಾರದೊಂದಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ:

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... :

http://thatskannada.oneindia.in/nri/article/2008/0802-my-wife-my-valentine.html

-ಹಂಸಾನಂದಿ

ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ

Image
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು.ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ.

ಆದರೆ ಸ್ವಲ್ಪ ದಿನಗಳ ಹಿಂದೆ, ಷಡಕ್ಷರಿ ಮಂತ್ರವನ್ನು ಉಪಯೋಗಿಸಿದಾಗ :) ಈ ಕ್ಷೇಮಪುರ ಗೇರುಸೊಪ್ಪೆ ಎಂದು ತಿಳಿದುಬಂತು. ಜೈ ಗೂಗಲ್! GOOGLE - ಷಡಕ್ಷರಿ ಮಂತ್ರ ಯಾವುದೆಂದು ತಿಳಿಯಿತಲ್ಲ ;) ?

ಪುರಂದರ ದಾಸರು ಗೇರುಸೊಪ್ಪೆಯವರಿರಬೇಕೆಂಬುದು ನಂಬಬಲ್ಲ ಮಾತೇ. ಅದು ಆ ಕಾಲದಲ್ಲಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತಂತೆ. ಪರದೇಶಗಳಿಗೆ ಸಂಬಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಗೇರುಸೊಪ್ಪೆಯವರಲ್ಲಿ ಹಣವಿದ್ದುದ್ದೂ, ಅದಕ್ಕೆ ತಕ್ಕಂತೆ ಅಲ್ಲಿ ರತ್ನಪಡಿ ವ್ಯಾಪಾರಿಗಳಿದ್ದಿರಬಹುದಾದ್ದೂ ಒಂದಕ್ಕೊಂದು ತಾಳೆಯಾಗುತ್ತೆ. ಈ ವಿಷಯಕ್ಕೆ ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾ ನೋಡಿ.

ಪುರಂದರ ದಾಸರ ಆರಾಧನೆಯಂದು, ಅವರಿಗೊಂದು ನುಡಿನಮನ ಈ ಕೆಳಗಿನ ಕೊಂಡಿಯಲ್ಲಿದೆ. ಆಸಕ್ತರು ಕೇಳಬಹುದು

ದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ :
http://hamsanandi.mypodcast.com/

ದಾಸಶ್ರೇಷ…

ಬಿಂದಿಗೆಯ ಸದ್ದು

raamaabhishEke jalamaaharanthyaH
hasthaachchyutho hEmaghaTo yuvathyaaH
sOpaanamAsAdya karOthi Sabdam
ThA Tham Tha Tham Tham Tha Tha Tham Tha Tam ThaH

रामाभिषेके जलमाहरान्त्याः
हस्ताच्य्तो हेमघटो युवत्याः
सोपानमासाद्य करोति शब्दम्
ठा ठं ठ ठं ठं ठ ठ ठं ठ ठं ठः

ರಾಮನಭಿಷೇಕಕ್ಕೆ ನೀರನ್ನು ತರುತಿರುವ
ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ
ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು
ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು

(ಕಾಳಿದಾಸನದೆಂದು ಹೇಳಲಾದ ಒಂದು ಸಂಸ್ಕೃತ ಶ್ಲೋಕ - ಅನುವಾದ ನನ್ನದು)

-ಹಂಸಾನಂದಿ

ಶಂಖ ವಾದ್ಯ :-)

ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಅದೇ ತಾನೇ ಹೆಸರು?

http://thatskannada.oneindia.in/literature/music/2008/2801-saint-tyagaraja-aradhana-mahotsava.html

ಮೊದಲು ಸಂಪದದಲ್ಲಿ ಬರೆದಿದ್ದ ಈ ಬರಹ, ಈಗ ದಟ್ಸ್ ಕನ್ನಡದಲ್ಲಿ ಬೆಳಕು ಕಂಡಿದೆ.

(ಮೂರು ದಿನದ ಹಿಂದೆಯೇ ಹಾಕಿದ್ದರೆಂದು ಕಾಣುತ್ತೆ - ನನಗೆ ಇವತ್ತು ತಾನೇ ಕಂಡಿತು)

-ಹಂಸಾನಂದಿ

ಎರಡು ವಜ್ರಗಳು ಮತ್ತು ಯೇಸುಕ್ರಿಸ್ತ

ಇಂದು ಬೆಳಗ್ಗೆ ಎರಡು ವಜ್ರಗಳು ದೊರಕಿದ್ದವು ನನಗೆ. ಒಂದು ನಾಕು ಕ್ಯಾರಟ್, ಒಂದು ಎರಡು ಕ್ಯಾರಟ್. ಹೋಗಿ ಎತ್ತಿಕೊಳ್ಳುವಷ್ಟರಲ್ಲಿ, ಹಾಳು ಸೂರ್ಯ ಮೇಲೆ ಬರತೊಡಗಿದ

ಹೌದು. ನಾನು ಮಾತಾಡತೊಡಗಿದ್ದು ಇಂದು ನಡೆದ ಗುರು-ಶುಕ್ರ ಗಳ ಗ್ರಹಕೂಟವನ್ನ ! ೨೦೦೮ರ ಮೊದಲ ಗ್ರಹಕೂಟ (conjunction) ಇಂದು ಇತ್ತು. ಅದರ ಬಗ್ಗೆ ಮೊದಲೇ ಬರೆಯಬೇಕೆಂದಿದ್ದೆ. ಆದರೆ, ಏಕೋ, ಸಂಪದಿಗರಿಗೆ ಆಕಾಶವೀಕ್ಷಣೆ ಬಗ್ಗೆ ಹೆಚ್ಚು ಅಕ್ಕರೆ ಇದೆಯೋ ಇಲ್ಲವೋ ಎಂಬ ಹಿಂಜರಿಕೆ ಒಂದುಕಡೆ ಆದರೆ, ಮತ್ತೊಂದೆಡೆ ಹೋದ ತಿಂಗಳು ಕ್ವಾಡ್ರಾಂಟಿಡ್ಸ್ ಉಲ್ಕಾವರ್ಷದ ದಿನ ಆದ ಗತಿಯೇ ಇಂದೂ ಆಗಿ, ಮೋಡ ಕವಿದು (ನನಗೆ) ನಿರಾಸೆಯಾದರೆ ಎನ್ನುವ ಯೋಚನೆ ಇನ್ನೊಂದು ಕಡೆ. ಅಂತೂ ಇಂತೂ ಮೊದಲು ಬರೆಯದೇ ಹೋದೆ.

ಆದರೆ, ಅದು ಹೇಗೋ ವಾರದಿಂದ ಹಿಡಿದ ಮಳೆರಾಯ, ಈ ಮುಂಜಾವು ನಾನೆದ್ದಾಗ ಬಿಡುಗಡೆ ಕೊಟ್ಟಿದ್ದ. ಹೊರ ಹೋಗಿ ನೋಡಿದರೆ, ಗುರು-ಶುಕ್ರ ಇಬ್ಬರೂ ಪಕ್ಕ ಪಕ್ಕ ಕೈ ಹಿಡಿದು ನಲಿಯುತ್ತಿದ್ದಾರೆ ನನಗಂತೂ ಬಹಳ ಖುಷಿಯಾಯಿತು.

ಶುಕ್ರ, ಈಗ ಭೂಮಿಗೆ ಹತ್ತಿರವಾಗಿರುವುದರಿಂದ ಸುಮಾರು -೪ ರ ಕಾಂತಿಯಿಂದ ಹೊಳೆಯುತ್ತಿದೆ. ಗುರುವೂ -೨ರ ಕಾಂತಿಯಿಂದ ಹೊಳೆಯುತ್ತಿದೆ. ಆಕಾಶಕಾಯಗಳ ಕಾಂತಿಯನ್ನು ಅಂಕೆಯಲ್ಲಿ ಹೇಳುವಾಗ, ಅದು ಕಡಿಮೆ ಇದ್ದಷ್ಟೂ, ಪ್ರಕಾಶ ಹೆಚ್ಚು. ( -೪ , -೨ ಕ್ಕಿಂತ ಸಣ್ಣ ಅಂಕೆ ಎನ್ನುವುದನ್ನು ಮರೆಯಬೇಡಿ). ಬರಿಗಣ್ಣಿಗೆ ಕಾಣುವ ಅತಿ ಪ್ರಕಾಶಮಾನವಾದ ತಾರೆ -೧.೫ರ ಕಾಂತಿ ಹೊಂದಿದೆ.

ಈ ವಿಷ…