Posts

Showing posts from May, 2008

ಬ್ರೋಚೇವಾರೆವರುರಾ ನಿನುವಿನಾ?

Image
ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು ೮೦ರ ದಶಕದ ಸಂಗತಿ.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.

ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ.

ವಾಸುದೇವಾಚಾರ್ಯರು ಸುಮಾರು ೨೦೦ಕ್ಕೂ ಹೆಚ್ಚು ರಚನೆ…

ದೋಸೆ, ಅನ್ನವ ಮಾರಿಸಿದವರು ಯಾರು?

ಪ್ರಪಂಚದ ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಬ್ಬ ಕಾಕಾ ಟೀ ಅಂಗಡಿ ಇಟ್ಟುಕೊಂಡಿರುತ್ತಾನೆ ಅನ್ನೋದೊಂದು ಹಳೇ ನಗೆಚಟಾಕಿ. ಅರವತ್ತೊಂಬತ್ತರಲ್ಲಿ, ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅಲ್ಲಿಯೂ ಒಬ್ಬ ಪ್ರತ್ಯಕ್ಷ ಆಗಿದ್ದನಂತೆ ಟೀ ಹಿಡ್ಕೊಂಡು ಎನ್ನೋ ಮಟ್ಟಿಗೆ ಇದು ಪ್ರಖ್ಯಾತ. ಇದರ ಹಿಂದೇ ಬರೋದು ಉಡುಪಿ ಹೋಟೆಲ್ ಗಳ ಸಮಾಚಾರ. ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಹಾಗೆ ಉಡುಪಿ ಹೋಟೆಲ್ ಗಳಿಲ್ಲದ ಊರೇ ಇಲ್ಲ. ಮೊದಮೊದಲು ಹೋಟೆಲ್ ನಡೆಸುವ ಆಸೆ, ಅಥವಾ ಯೋಚನೆ ಉಡುಪಿಯವರಿಗೇ ಏಕೆ ಬಂತು? ಅದನ್ನು ಯಾರಾದ್ರೂ ಉಡುಪಿ ಕಡೇವ್ರೇ ಹೇಳಬೇಕು. ಅಥವಾ ತಿಂಡಿಪೋತ ಅನ್ನೋ ಹೆಸರು ಗಳಿಸಿರೋ ಕೃಷ್ಣ ಇರೋ ಊರ್ನೋರಾದ್ರಿಂದ ಹೀಗೇನಾದ್ರೂ ಆಯ್ತಾ? ನನಗೆ ಗೊತ್ತಿಲ್ಲ. ಅಂತೂ, ಭಾರತದ ಸುಮಾರು ಹಲವು ರಾಜ್ಯಗಳಲ್ಲಿ,ಅದ್ರಲ್ಲೂ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ವಿಶೇಷವಾಗಿಯೇ ಉಡುಪಿ ಹೋಟೆಲ್ಗಳನ್ನು ಕಾಣಬಹುದು.

ಈ ಉಡುಪಿ ಹೋಟೆಲ್ ಅನ್ನೋದು ತಮಿಳ್ನಾಡಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಅಂದರೆ, ಅದಕ್ಕೆ ಸಸ್ಯಾಹಾರಿ ಅಂತ ಬೇರೆಯೇ ಅರ್ಥ ಬಂದುಬಿಟ್ಟಿದೆ. ವೆಜಿಟೇರಿಯನ್ ಅಂತ ಹೇಳೋಬದಲು ಅವರು ಉಡುಪಿ ಅಂತಷ್ಟೇ ಹೇಳುತ್ತಾರೆ. ಸರವಣ ಭವನ್ (ಉಡುಪಿ) ಅನ್ನೋ ಬೋರ್ಡ್ ನಿಮಗೆ ಕಂಡ್ರೆ, ಅದು ನಡೆಸ್ತಾಇರೋದು ಉಡುಪಿಯವರಲ್ಲದೇ, ಆಂಧ್ರದವರೇ ಆಗಿದ್ದರೂ, ಅಥವಾ ಅಸ್ಸಾಮ್ ನವರೇ ಆಗಿದ್ರೂ, ಅದಕ್ಕೆ ವೆಜಿಟೇರಿಯನ್ ಅನ್ನೋದೇ ಅರ್ಥ.

ಪರದೇಶಗಳಲ್ಲಿಯೂ ಹೆಚ್ಚು ಭಾರತೀಯರಿರೋ ಕ…

ಕಟಪಯಾದಿ ಸೂತ್ರ

ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.

ಬೇರೆ ದೇಶಗಳಿಗಿಂತ ಮೊದಲು ಭಾರತದಲ್ಲೇ ಭಾರೀ ಅಂಕೆಗಳ ಉಪಯೋಗವಾಗಿದೆ ಅನ್ನೋದು ನಿಚ್ಚಳವಾಗಿರುವ ಸಂಗತಿ. ನಮ್ಮ ಮೂವತ್ತುಮೂರು ಕೋಟಿ ದೇವತೆಗಳಿಂದ ಹಿಡಿದು, ಕೃತ-ತ್ರೇತಾ-ದ್ವಾಪರ-ಕಲಿಗಾಲಗಳಲ್ಲಿ ಬರುವ ವರ್ಷಗಳ ತನಕ ದೊಡ್ಡ ಅಂಕೆಗಳದ್ದೇ ಭರಾಟೆ.

ಆದರೆ, ಹಿಂದೆ ಅಂಕೆಗಳನ್ನು ಅಕ್ಷರಗಳಿಂದ, ಪದಗಳಿಂದ ಗುರುತಿಸುತ್ತಿದ್ದರು ಎನ್ನುವುದು ಗೊತ್ತಿದೆಯೇ ನಿಮಗೆ? ಇಲ್ಲವಾದರೆ ಮುಂದೆ ಓದಿ.

ಇದಕ್ಕೆ ಕಟಪಯಾದಿ ಸೂತ್ರ ಎಂದು ಹೆಸರು. ಈ ಸೂತ್ರದ ಸಹಾಯದಿಂದ, ದೊಡ್ಡ ಸಂಖ್ಯೆಗಳನ್ನು ನೆನಪಿನಲ್ಲಿಡಲು ಸುಲಭವಾದ ಪದಗಳನ್ನೋ, ಶ್ಲೋಕಗಳನ್ನೋ ಮಾಡಿಕೊಳ್ಳುತ್ತಿದ್ದರು. ಉದಾಹರಣೆಗೆ,ಬೆಂಗಳೂರಿನಲ್ಲಿ ೪೮,೪೮,೨೫೮ ಜನ ಕನ್ನಡಿಗರಿದ್ದಾರೆ ಅಂದುಕೊಳ್ಳೋಣ. ಈ ಅಂಕೆಯನ್ನು ನೆನಪಿನಲ್ಲಿಡುವುದು ಸುಲಭವೇ ಅಥವಾ ಸಮರಸವೇಜೀವನ ಎನ್ನುವುದನ್ನು ನೆನಪಿನಲ್ಲಿಡುವುದು ಸುಲಭವೋ? ಈ ಸಂದರ್ಭದಲ್ಲಿ ಹೆಚ್ಚು ವ್ಯತ್ತ್ಯಾಸ ಕಾಣ್ದಿದ್ದರೂ, ಪದವನ್ನು (ಅಥವಾ ವಾಕ್ಯವನ್ನು) ನೆನಪಿನಲ್ಲಿಡುವುದು ಸರಳ ಅನ್ನೋದು ಪುಟ್ಟಮಕ್ಕಳಿಗೂ ಗೊತ್ತಾಗೋ ಮಾತು. ಆದ್ರೆ, ಸಮರಸವೇ ಜೀವನ ಅನ್ನೋದು ಈ ಅಂಕೆಗೆ ಹೇಗೆ ಸಮವಾಗುತ್ತೆ ಅನ್ನೋದನ್ನ ಅರ್ಥ ಮಾಡ್ಕೊಂಡ್ರೆ ವಾಸಿ. ಅಲ್ವಾ?

ಈ ಸೂತ್ರವನ್ನು ಜ್ಯೋತಿಷ್…

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ ....

ಇಂದು ಬಸವ ಜಯಂತಿ. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಲು ಮುಖ್ಯರಾದ ಮೂವರ ಜಯಂತಿಗಳು ಸುಮಾರು ಒಂದೇ ಸಮಯಕ್ಕೆ ಬರುವುದು ( ಬಸವಣ್ಣ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ) ಕಾಕತಾಳೀಯವಾದರೂ, ಗಮನಿಸಬೇಕಾದ ಸಂಗತಿ.

ಇಲ್ಲಿ ಕ್ಲಿಕ್ಕಿಸಿ: ಬಸವ ಜಯಂತಿಯಂದು ನೆನಪಾದ, ನನಗೆ ಇಷ್ಟವಾದ, ಕೆಲವು ವಚನಗಳ ನೆನಪು

ಆಡಿಯೋ ವಿಡಿಯೋ ಸಮೇತ: ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ ....

-ಹಂಸಾನಂದಿ

ಆರು ಹುಸಿ ವಿದ್ಯೆಗಳು

ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || ೧||

ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||೨||

ಬಾಯ್ಮಾತಿನಲಿ ಮಾತ್ರ ಬಳಕೆಯಲಿ ತಾನಿಲ್ಲದೆಲೆ
ಬರಿ ರಂಜಿಸುವುದದು ಗಿಳಿವಿದ್ಯೆಯು! ||೩||

ಬಲ್ಲವರ ಮುಂದೆ ತೋರದೆಲೆ, ಮರುವರ ಮುಂದೆ ಬೆಳಗುತಲಿ
ಬಯಸಿದವರಿಗೆ ಕಲಿಸದಿರಲದುವೆ ದುರುಳವಿದ್ಯೆಯು || ೪||

ಆವ ಕಲಿಕೆಯದು ಕಂಡವರ ಮಚ್ಚರವ ತರಿಸುತಲಿ
ಸುಖನಿದಿರೆಯ ಕೆಡಿಸುವುದದು ಶೂಲವಿದ್ಯೆಯು! || ೫||

ಕಂಡವರೊಳ್ಳೆಯ ಮಾತುಗಳ ತನ್ನದೆಂಬಂತೆ ನುಡಿಯುತಲಿ
ಅಂತೋ ಇಂತೋ ಹೆಸರಗಳಿಸಲದು ತಾ ಕಳ್ಳವಿದ್ಯೆಯು! ||೬||

(ಸಂಸ್ಕೃತದಿಂದ ಭಾವಾನುವಾದ)


ಸಂಸ್ಕೃತ ಮೂಲ ಹೀಗಿದೆ:

ಷಣ್ಮಿಥ್ಯಾವಿದ್ಯಾಃ
ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ|
ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧||
ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ|
ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨||
ಅನುಷ್ಠಾನೇನ ರಹಿತಾ ಪಾಠಮಾತ್ರೇಣ ಕೇವಲಮ್|
ರಞ್ಜಯತ್ಯೇವ ಯಾ ಲೋಕಂ ಕಿಂ ತಯಾ ಶುಕವಿದ್ಯಯಾ||೩||
ಗೋಪ್ಯತೇ ಯಾ ಬುಧಸ್ಯಾಗ್ರೇ ಮೂರ್ಖಸ್ಯಾಗ್ರೇ ಪ್ರಕಾಶ್ಯತೇ|
ನ ದೀಯತೇ ಚ ಶಿಷ್ಯೇಭ್ಯಃ ಕಿಂ ತಯಾ ಶಠವಿದ್ಯಯಾ||೪||
ಪರಮಾತ್ಸರ್ಯಶೂಲಿನ್ಯಾ ವ್ಯಥಾ ಸಞ್ಜಾಯತೇ ಯಯಾ|
ಸುಖನಿದ್ರಾಪಹಾರಿಣ್ಯಾ ಕಿಂ ತಯಾ ಶೂಲವಿದ್ಯಯಾ||೫||
ಪರಸೂಕ್ತಾಪಹಾರೇಣ ಸ…