Posts

Showing posts from June, 2008

ರಾಹು-ಕೇತು ಕಾಟ, ಮತ್ತು ಗ್ರಹಣ ಚಕ್ರ

Image
ಹಿಂದಿನ ಭಾಗದಲ್ಲಿ ರಾಹು ಮತ್ತು ಕೇತು ಅನ್ನೋ ಬಿಂದುಗಳು ಹೇಗೆ ಆಗುತ್ತವೆ ಅನ್ನೋದರ ಬಗ್ಗೆ ಬರೆದಿದ್ದೆ. ಓದಿಲ್ಲದಿದ್ದವರು, ಇಲ್ಲಿ ಚಿಟಕಿಸಿ ನೋಡಿ. ಮತ್ತೆ ಹಾಗೇನೇ ಗ್ರಹಣ ಚಕ್ರ ಅನ್ನೋದರ ಬಗ್ಗೆಯೂ ಸ್ವಲ್ಪ. ಮತ್ತೆ ನವಗ್ರಹ ಸ್ತೋತ್ರದಲ್ಲಿರುವ ರಾಹುವಿನ ಸ್ತುತಿಯ ಬಗ್ಗೆಯೂ ಹೇಳಿದ್ದೆ, ಆದ್ರೆ ವಿವರಗಳನ್ನ ಕೊಟ್ಟಿರ್ಲಿಲ್ಲ. ಅದೆಲ್ಲ ಸ್ವಲ್ಪ ಬರೆದು ವಿವರಿಸೋಣ ಅನ್ನೋ ಯೋಚನೆ ಈಗ ಬಂತು. ಭೂಮಿ ಸೂರ್ಯನ್ನ ಸುತ್ತೋ ಪಾತಳಿಚಂದ್ರಭೂಮಿಯನ್ನು ಸುತ್ತೋ ಪಾತಳಿ (plane) ಎರಡೂ ಬೇರೆ ಬೇರೆಯಾಗಿದ್ದು ಅವೆರಡೂ ಸಂದಿಸೋ ಎರಡು ಬಿಂದುಗಳನ್ನ ರಾಹು-ಕೇತು ಅಂತ ಕರೀತಾರೆ ಅಂತ ಹೇಳಿದ್ದೆ. ಅದನ್ನ ತೋರಿಸೋದಕ್ಕೆ ತಟ್ಟೆ-ನೀರು-ಬಕೆಟ್ ನ ಪ್ರಯೋಗ ಒಂದು ಹೇಳಿದ್ದೆ ಅಲ್ವಾ? ಈಗ ಈ ರಾಹು ಕೇತು ಎರಡೂ ತಟ್ಟೆಯ ಎರಡು ವಿರುದ್ಧ ದಿಕ್ಕಿನಲ್ಲಿರುತ್ತೆ ಅನ್ನೋದನ್ನ ಗಮನಿಸಿ. ಅಂದ್ರೆ ಅವರ್ರಡೂ ಆಕಾಶದಲ್ಲಿ ೧೮೦ ಡಿಗ್ರಿ ಅಂತರದಲ್ಲಿ ಇರುತ್ತವೆ. ಇದು ಗೊತ್ತಾಯ್ತಲ್ಲ? ಈಗ, ಆ ಪ್ರಯೋಗವನ್ನೇ ಮುಂದುವರಿಸೋಣ. ನೀವು ಇಟ್ಕೊಂಡಿರೋ ತಟ್ಟೇನ ಇದ್ದಹಾಗೆ ಅದರ ಸುತ್ತ ಅದನ್ನೇ ತಿರುಗಿಸ್ತಾ ಇರಿ. ಇದು ಚಂದ್ರನ ಚಲನೆಯನ್ನ ಸೂಚಿಸುತ್ತೆ. ಆದ್ರೆ ಒಂದು ತಮಾಷಿ ವಿಷಯ ಏನಂದ್ರೆ, ಈ ಚಂದ್ರನ ಹಾದಿಯ ಪಾತಳಿ ಬಿಟ್ಟೂಬಿಡದೆ (continuously), ನಿದಾನವಾಗಿ, ಭೂಮಿ-ಸೂರ್ಯನ ಪಾತಳಿಗೆ ಹೋಲಿಸಿದರೆ ತಿರುಗ್ತಾ ಇರುತ್ತೆ.ಓಹೋ! ಇದ್ಯಾಕೋ ಕಷ್ಟಕ್ಕಿಟ್ಕೋತೂ ಅಂದ್ರಾ? ಪರ್ವಾಗಿಲ್ಲ.ಒಂ…

ದಕ್ಷಿಣಾಯನ

Image
ಇವತ್ತಿಂದ ದಕ್ಷಿಣಾಯನ ಶುರು. ಸೂರ್ಯ ಆಕಾಶದಲ್ಲಿ ವರ್ಷೇ ವರ್ಷೇ ಮಾಡೋ ಪ್ರಯಾಣದಲ್ಲಿ ಇವತ್ತು ಯುನಿವರ್ಸಲ್ ಟೈಮ್ 23:59 ಕ್ಕೆ (ಅಂದರೆ ಜೂನ್ 20ರ ಗ್ರೀನ್ ವಿಚ್ ಸಮಯ ರಾತ್ರಿ 11 ಗಂಟೆ, 59 ನಿಮಿಷದಲ್ಲಿ, ತನ್ನ ದಾರಿಯ ಅತೀ ಉತ್ತರದ ಭಾಗದಲ್ಲಿರುತ್ತಾನೆ. ನೀವೆಲ್ಲಿದ್ದೀರೋ ಅದರ ಮೇಲೆ ಕೆಲ್ವು ಘಂಟೆ ಸೇರಿಸ್ಕೊಂಡೋ, ಕಳ್ಕೊಂಡೋ ಮಾಡಿದ್ರೆ, ನಿಮ್ಮೂರಲ್ಲಿ ಇದು ಎಷ್ಟು ಹೊತ್ತಿಗೆ ಅಂತ ಗೊತ್ತಾಗತ್ತೆ. ಇಲ್ಲಿಂದ ಸೂರ್ಯ ಪ್ರತಿ ಕ್ಷಣವೂ ದಕ್ಷಿಣಕ್ಕೆ ಸರಿಯೋದ್ರಿಂದ ಇವತ್ತಿಂದ ದಕ್ಷಿಣಾಯನ, ಇನ್ನು ಆರು ತಿಂಗಳು. http://www.google.com/logos/summersolstice08.gif ಇವತ್ತೇ ಉತ್ತರಾರ್ಧ ಗೋಳದಲ್ಲಿ ಅತಿ ಹೆಚ್ಚು ಹಗಲು,ಮತ್ತೆ ಅತಿ ಕಡಿಮೆ ರಾತ್ರಿಯ ಅವಧಿ. ನಾನಿರೋ ಕಡೆ 14 ಗಂಟೆ, 45 ನಿಮಿಷ ಹಗಲಿರತ್ತೆ ಇವತ್ತು. ಇನ್ನು ಇವತ್ತಿಂದ ಆರ್ಕ್ಟಿಕ್ ಸರ್ಕಲ್ ಒಳಗಿರೋ ಭಾಗದಲ್ಲಿ ಮುಳುಗದ ಸೂರ್ಯನ ಆರುತಿಂಗಳ ಮುಗಿಯದ ಹಗಲು! ಅದೇ ದಕ್ಷಿಣಾರ್ಧ ಗೋಳದಲ್ಲೋ ಇವತ್ತು ಅತೀ ಉದ್ದದ ರಾತ್ರಿ. ಅಂಟಾರ್ಕ್ಟಿಕಾದಲ್ಲಿ, ಆರು ತಿಂಗಳ ಕಾಲ ಸೂರ್ಯನ ಮುಖವೂ ಕಾಣದು.
--ಹಂಸಾನಂದಿ

ಸೀತೆಯ ಭೂಮಿ ಜಾತೆಯ

ಹಿಂದಿನ ಕಾವ್ಯನಾಟಕಗಳಲ್ಲಿ ಹೆಚ್ಚು ನಾಯಕ ಪಾತ್ರ ಪ್ರಧಾನವೇ. ಮೂಲದ ವ್ಯಾಸ ಭಾರತದಲ್ಲಿ ಹೇಗೋ ಗೊತ್ತಿಲ್ಲ, ಆದರೆ ಕುಮಾರವ್ಯಾಸನ ಕನ್ನಡ ಭಾರತದಲ್ಲಂತೂ ಅಂತಹ ಮುಖ್ಯವಾದ ದ್ರೌಪದಿಯ ಪಾತ್ರಕ್ಕೇ ಹೆಚ್ಚಿ ನ್ಯಾಯ ದೊರೆತಿಲ್ಲ ಎಂದು ನನ್ನ ಅಭಿಪ್ರಾಯ. ಸೀತೆ ದ್ರೌಪದಿಯರಂತಹ ಪಾತ್ರಗಳು ದು:ಖವನ್ನು ಅನುಭವಿಸಲೇ ಹುಟ್ಟಿದ ಹಾಗೆ ಕಾಣುತ್ತವೆ. ಈ ಇಬ್ಬರಿಗೂ ಉದ್ದನೆ ಕೂದಲಿತ್ತೆಂಬ ನಂಬಿಕೆ ಇರುವುದರಿಂದ, ಜಡೆಗೆ ಕತ್ತರಿ ಹಾಕದ ಹಿಂದಿನ ಕಾಲದವರು ಹೆಣ್ಣುಮಕ್ಕಳಿಗೆ ಉದ್ದ ಕೂದಲಿದ್ದರೆ ಸೀತೆಯಂತೆ, ದ್ರೌಪದಿಯಂತೆ ಕಷ್ಟ ಅನುಭವಿಸುವಳೋ ಎಂದು ಯೋಚನೆ ಮಾಡುತ್ತಿದ್ದರು. ಅದಿರಲಿ. ಮೊನ್ನೆ ಸೀತೆಯ ಮೇಲೆ ವಿಜಯದಾಸರು ಬರೆದ ಒಂದು ರಚನೆಯನ್ನು ಮೊದಲಬಾರಿಗೆ ಕೇಳಿದೆ. ಹೆಚ್ಚಾಗಿ ಹರಿದಾಸರು ವಿಠಲನ ಮೇಲೆ, ಇಲ್ಲದಿದ್ದರೆ ರಾಮ ಕೃಷ್ಣನ ಮೇಲೆ ಬರೆದವರು. ಸೀತೆಯನ್ನು ಕೇಂದ್ರವಾಗಿಟ್ಟುಕೊಳ್ಳುವಂತಹ ಹಾಡುಗಳು ಕಡಿಮೆಯೇ. ಸರಳವಾಗಿದ್ದೂ ಸುಂದರವಾದ ಈ ಹಾಡು ನನಗೆ ಬಹಳ ಹಿಡಿಸಿತು. ಅದಕ್ಕೇ ಇಲ್ಲಿ ಬರೆಯುತ್ತಿದ್ದೇನೆ. ಸೀತೆಯ ಭೂಮಿ ಜಾತೆಯ
ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ||ಕ್ಷೀರವಾರಿಧಿಯ ಕುಮಾರಿಯ ತನ್ನ
ಸೇರಿದವರ ಭಯಹಾರೆಯ
ತೋರುವಳು ಮುಕ್ತಿದಾರಿಯ
ಸರ್ವಸಾರ ಸುಂದರ ಶ್ರೀ ನಾರಿಯ ||ಸೀತೆಯ||ವಿಜಯ ವಿಠಲನ ರಾಣಿಯ
ಪಂಕಜ ಮಾಲೆ ಪಿಡಿದ ಪಾಣಿಯ
ವಿಜಯಲಕ್ಷ್ಮಿ ಗಜಗಮನೆಯ
ಸುಜನ ವಂದಿತೆ ಅಳಿವೇಣಿಯ ||ಸೀತೆಯ|| ಈ ಹಾಡಿನಲ್ಲೂ ಕೂಡ ಸೀತೆಯ ದುಂಬಿಗಳಂತೆ ಕಪ್ಪಾದ ಜಡೆಯ…

ರಾಹು-ಕೇತು ಕಾಟ, ಮತ್ತು ನವಗ್ರಹ ಸ್ತೋತ್ರ

Image
ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ ಅನ್ನೋದು ಸಂಸ್ಕೃತದ ಪ್ರಸಿದ್ಧ ಮಾತು. ಅಂದರೆ, ಸೋವು ನಲಿವುಗಳೆರಡೂ ಚಕ್ರದಂತೆ ಮತ್ತೆ ಮತ್ತೆ ತಿರುಗಿ ತಿರುಗಿ ಮರಳಿ ಮರಳಿ ಬರುತ್ತಿರುತ್ತವೆ ಎಂದರ್ಥ. ಚಕ್ರದಂತೆ ಬರೋದು ಬರೀ ಸುಖದು:ಖಗಳು ಮಾತ್ರ ಅಲ್ಲ ಅನ್ನೋದು ಮಾತ್ರ, ಚಿಕ್ಕ ಮಕ್ಕಳಿಗೂ ಗೊತ್ತಿರೋ ಸಂಗತಿ. ಹಗಲು ರಾತ್ರಿಯ ಚಕ್ರಕ್ಕಿಂತ ಬೇಕೇ ಮರಳಿ ಮರಳಿ ಸುತ್ತುವ ಚಕ್ರ? ಅದೇ ರೀತಿ ಆಕಾಶದಲ್ಲಿ ಇನ್ನೊಂದು ಕಾಲಕಾಲಕ್ಕೆ ಮರಳಿ ಬರೋ ಚಕ್ರ ಇದೆ - ಆದರೆ ಇದು ಸಾಧಾರಣವಾಗಿ ಎಲ್ಲರಿಗೂ ತಿಳಿದಿರಲ್ಲ, ಅಷ್ಟೇ. ಇದೇ ಗ್ರಹಣ ಚಕ್ರ (Saros cycle- ಸೆರಾಸ್ ಚಕ್ರ. ಇದಕ್ಕೆ ನಮ್ಮ ದೇಶದಲ್ಲಿ, ನಮ್ಮ ಭಾಷೇಲಿ ಬೇರೆ ಹೆಸರಿದೆಯೋ ಇಲ್ಲವೋ ತಿಳಿಯದು. ಅದಕ್ಕೆ ಅರ್ಥ ಗೊತ್ತಾಗೋ ಹಾಗೆ ಗ್ರಹಣಚಕ್ರ ಅನ್ನೋ ಭಾವಾನುವಾದವನ್ನು ಮಾಡಿದೀನಿ. ತಪ್ಪಿದ್ದ್ರೆ ತಿದ್ದಿ! ತಿದ್ಕೋತೀನಿ.) ಕೆಲವು ದಿನದ ಮೊದಲು ರಾಹು-ಕೇತು ಕಾಟ ಅಂತ ಸ್ವಲ್ಪ ಗಳಹಿದ್ದೆ.ಮತ್ತೆ ಇವತ್ತು ಅದನ್ನ ಮುಂದುವರ್ಸೋಣ ಅಂತ ..ಅಲ್ಲದೆ, ಗ್ರಹಣಚಕ್ರ ಅರ್ಥ ಆಗ್ಬೇಕಾರೆ ರಾಹು ಕೇತು ವಿಷ್ಯ ಸ್ಪಷ್ಟ ಆಗ್ಬೇಕು ಮೊದಲು ನಮಗೆಲ್ಲ ಸೂರ್ಯನ ಸುತ್ತ ಭೂಮಿ ಸುತ್ತೋದೂ, ಭೂಮಿ ಸುತ್ತ ಚಂದ್ರ ಸುತ್ತೋದೂ ಗೊತ್ತೇ ಇದೆ. ಆ ಮೇಲೆ, ಒಂದು ಕಾಕತಾಳೀಯವಾದ ಒಂದು ವಿಚಾರದಿಂದ ಗ್ರಹಣಗಳನ್ನು ನಾವು ನೋಡ್ತೀವಿ. ಅದೇನಂದ್ರೆ, ನಮಗೆ ಭೂಮಿಯಿಂದ ನೋಡೋವಾಗ ಸೂರ್ಯನ ಗಾತ್ರವೂ, ಚಂದ್ರನ ಗಾತ್ರವೂ ಸರಿಸುಮಾರು ಒಂದೇ. ಚಂದ್…

ಶುಕ್ರವಾರ, ಹದಿಮೂರನೇ ತೇದಿ...

ಇವತ್ತು ಬೆಳಗ್ಗೆ ಕೆಲಸಕ್ಕೆ ಬರ್ತಾ ರೇಡಿಯೋ ಕೇಳೋ ತನಕ ನನಗೆ ಇದು ನೆನಪಾಗಿರಲಿಲ್ಲ. ಇವತ್ತು ಹದಿಮೂರನೇ ತಾರೀಕು, ಶುಕ್ರವಾರ! ಪಶ್ಚಿಮಾರ್ಧ ಗೋಳದಲ್ಲಿ ಶುಕ್ರವಾರ ಒಳ್ಳೆಯದಿನವಲ್ಲವೆಂದೂ (ಯೇಸುವನ್ನು ಶಿಲುಬೆಗೇರಿಸಿದ್ದು ಶುಕ್ರವಾರವೇ) ಮತ್ತು ಹದಿಮೂರು ಅನ್ನೋದು ಒಳ್ಳೇ ಸಂಖ್ಯೆ ಅಲ್ಲ ( ಯಾಕಂದ್ರೆ, ಯೇಸು ಕೊನೆಯ ಸಲ ಊಟ ಮಾಡ್ದಾಗ ಅವನ ಜೊತೆ ಹನ್ನೆರಡು ಜನ ಶಿಷ್ಯರಿದ್ದರು - ಅಂದ್ರೆ, ಊಟಕ್ಕೆ ಕೂತವರು ಹದಿಮೂರು ಮಂದಿ) ಅನ್ನೋ ನಂಬಿಕೆ ಇದೆ. ಇನ್ನು ಎರಡೂ ಒಟ್ಟಿಗೆ ಸೇರಿದ್ರೆ ಕೇಳ್ಬೇಕಾ? ಡಬಲ್ ಟ್ರಬಲ್ ಅಲ್ವೇ?

ಇವತ್ತು ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಇರುವ ಎ಼ಕ಼್ಪ್ಲೊರೆಟೋರಿಯಮ್ ನಲ್ಲಿ ಇದರ ಮೇಲೆ ಒಂದು ಹೊಸ ಎಕ್ಸಿಬಿಟ್ ಶುರುವಾಗ್ತಿದೆಯಂತೆ. ನೋಡಲು ಹೋದವರು ಅಲ್ಲಿ ಏಣಿ ಅಡಿಯಲ್ಲಿ ನಡೀಬೇಕಾಗ್ಬಹುದಂತೆ, ಕನ್ನಡಿ ಒಡೀಬಹುದಂತೆ - ಒಟ್ಟ್ಟಿನಲ್ಲ್ಲಿ ಕೆಟ್ಟ ಅದೃಷ್ಟ ತರತ್ತೆ ಅಂತ ನಂಬಿಕೆ ಇರೋ ಒಟ್ಟು ಹದಿಮೂರು (!)ಕೆಲಸಗಳನ್ನ ಅಲ್ಲಿ ಮಾಡ್ಬೋದಂತೆ. ಈ ನಂಬಿಕೆಗಳಿಗೆ ಸರಿಯಾದ ಕಾರಣಗಳು ಇಲ್ಲ ಅನ್ನೋದನ್ನ ಮನದಟ್ಟು ಮಾಡೋಕ್ಕೇ ಇದನ್ನ ಮಾಡಿದಾರಂತೆ. ಇನ್ನು ಅದರ ಶುಭಾರಂಭ Smiling ಮಾಡೋದಕ್ಕೆ, ಹದಿಮೂರನೇ ತಾರೀಖು, ಶುಕ್ರವಾರವನ್ನ ಆಯ್ಕೆ ಮಾಡ್ಕೊಂಡಿರೋದು ತಕ್ದಾಗೇ ಇದೆ ಅನ್ನಿಸ್ತು ನಂಗೆ.

ಸರಿಯಾಗಿ ಗಟ್ಟಿ ಕಾರಣಗಳನ್ನು ಹೇಳಲಾಗದ ಇಂತಹ ನಂಬಿಕೆ ಗಳನ್ನ ಕುರುಡು ನಂಬಿಕೆ ಅನ್ನೋದೇ ರೂಢಿ. ಈ ನಂಬಿಕೆಗಳಲ್ಲಿ ಮನಸ್ಸಿನ ವ್ಯಾಪಾರವೇ ಹ…

ದೆಹಲಿ ದೂದ ಹಾಗೂ ನೆನಪುಗಳು!

ಕಾಡಬೆಳದಿಂಗಳಿಗೆ ಪ್ರಶಸ್ತಿ ಬಂದ ವಿಷಯ ಹರಿ ಬರೆದಿದ್ರು. ಅದನ್ನ ಓದ್ದೆ. ಅದ್ರಲ್ಲಿ ದಟ್ಸ್ ಕನ್ನಡದಲ್ಲಿದ್ದ ವರದಿಗೂ ಕೊಂಡಿ ಹಾಕಿದ್ರು. ನಾನೂ ಹಿನ್ನಲೆ ಗಾಯನಕ್ಕೆ ಯಾರಿಗೆ ಬಂದಿದೆ ಈ ಸರ್ತಿ ಪ್ರಶಸ್ತಿ ಅಂತ ನೋಡ್ದೆ. ಪಂಜಾಬಿ ಸಿನೆಮಾದಲ್ಲಿ ಗುರುದಾಸ್ ಮಾನ್ ಗೆ ಪ್ರಶಸ್ತಿ ಬಂದಿದೆ! ಆಗ ಹಿಂದೆ ನಮಗೆಲ್ಲ ಟಿ.ವಿ. ಅಂದ್ರೆ ಬರೀ ಹಿಂದಿ ದೂರದರ್ಶನ ಆಗಿದ್ದ ಕಾಲ ನೆನಪಾಯ್ತು. ನಮ್ಮೂರಲ್ಲಿ ಟಿ.ವಿ. ಸ್ಟೇಷನ್ ಶುರುವಾದ ಹೊಸತು. ದಿನಾ ಬೆಳಗೂ ಸಂಜೆ ಬರೀ ಹಿಂದಿ ಅಷ್ಟೆ. ಭಾನುವಾರ ಮಧ್ಯಾಹ್ನ ಒಂದು ಪ್ರಾದೇಶಿಕ ಚಿತ್ರ ಅಂತ ಹಾಕೋರು. ಕನ್ನಡದ ಸರತಿ ಎರಡೋ ಮೂರೋ ತಿಂಗಳಿಗೆ ಒಮ್ಮೆ. ಆದ್ರೆ, ಅದು ಹೇಗೋ ನಮ್ಮ ಮನೆಗೆ ಟಿ.ವಿ.ತಂದ ದಿನವೇ ಕನ್ನಡ ಚಿತ್ರ ಸಂಧ್ಯಾರಾಗ ಬಂದಿತ್ತು. ಅದ್ದ್ಯಾವ್ದೋ ಶ್ರೀವಾಸ್ತವ ಅನ್ನೋ ನಿರ್ವಾಹಕಿ "ಅಬ್ ದೇಖಿಯೇ ಕನ್ನಡ್ ಚಿತ್ರ್ ಸಾಂಧ್ಯ್ ರಾಗ್" ಅಂತ ತಪ್ಪು ತಪ್ಪಾಗಿ ಉಲಿದಿದ್ದಳು. ಈ ಪ್ರಾದೇಶಿಕ ಚಿತ್ರದ ಸಾಲಿನಲ್ಲೇ ಎಷ್ಟೋ ಒಳ್ಳೆ ಮಲೆಯಾಳಮ್, ತಮಿಳು ಚಿತ್ರಗಳನ್ನೂ ನೋಡಿದ ನೆನಪಿದೆ.

ಇದಲ್ಲದೆ, ಟಿ.ವಿ.ಯಲ್ಲಿ ಕನ್ನಡ ಏನಾರೂ ಕೇಳ್ಬೇಕಂತಿದ್ರೆ, ಎರಡುವಾರಕ್ಕೊಂದು ಸಲ ರಾತ್ರಿ ೧೦:೧೦ ಕ್ಕೋ ಏನೋ ( ಅದ್ಯಾಕೆ ಈ ಸಮಯ ಇಟ್ಕೊಂಡಿದ್ರೋ ಗೊತ್ತಿಲ್ಲ, ಬೇರೆ ಭಾಷೆಯವರಿಗೆ ತಾನೇ, ತಡ ಆದ್ರೂ ಕಾಯ್ತಾರೆ ಅಂತಿರ್ಬೋದು), ಚಿತ್ರಮಾಲಾ ಅಂತ ಒಂದು ಕಾರ್ಯಕ್ರಮ. ಅದರಲ್ಲಿ ಹಿಂದಿ ಬಿಟ್ಟು ಬೇರೆಬೇರೆ ಭಾಷೆಯ ಚಿತ್ರಗೀತ…

ರಾಹು ಕೇತು ಕಾಟ - ಭಾಗ ೧

ನಮ್ಮಲ್ಲಿ ಅನೇಕರಿಗೆ, ಈ ಗ್ರಹಣಗಳು ಬಂತು ಅಂದ್ರೆ, ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು. ಇನ್ನು, ಮನೆಯಲ್ಲಾರಾದರು ಬಸುರಿ ಹೆಂಗಸಿದ್ದರಂತೂ ಸರಿಯೇ ಸರಿ. ಕಿಟಕಿ ಬಾಗಿಲು ಎಲ್ಲ ಹಾಕಿ, ಒಂಚೂರೂ ಬೆಳಕು ಮನೇ ಒಳಗೇ ಬರದೇ ಇರೋ ಹಾಗೆ ಕೂತ್ಕೊಳೋ ಸ್ಥಿತಿ. ಈಗ್ಲೇನಾರೂ ಬದ್ಲಾಗಿದ್ರೆ ನಾಕಾಣೆ. ನನ್ನ ನೆನಪುಗಳೇ ಔಟ್ ಡೇಟೆಡ್ ಅಂದ್ಕೊಂಡು ಸುಮ್ನಾಗಬೇಕಷ್ಟೆ.ಅದನಾದ್ರೂ ಇರಲಿ, ಸುಮ್ನೆ ವಿಷಯಕ್ಕೆ ಬರೋದಕ್ಕೆ ಮೊದಲೆ ನೆನಪಾದದ್ದನ್ನ ಹೇಳಿದೆ ಅಷ್ಟೆ.

೧೯೮೦, ಫೆಬ್ರವರಿ ಹದಿನಾರನೇ ತಾರೀಖು ಒಂದು ಸೂರ್ಯಗ್ರಹಣ ಆಗಿತ್ತು. ಸೂರ್ಯ ಗ್ರಹಣ ಅನ್ನೋದೇನೂ ಅಂತಹ ಅಪರೂಪದ ವಿಷಯ ಅಲ್ಲ ಆ ಸಲ. ಆದ್ರೆ, ಆ ಗ್ರಹಣ ಕರ್ನಾಟಕಕ್ಕೆ ವಿಶೇಷವಾಗಿತ್ತು. ಅಂದ್ರೆ, ಅದೊಂದು ಪೂರ್ಣಗ್ರಹಣ - ಮತ್ತೆ ಪೂರ್ಣತೆಯ ಹಾದಿ ಕರ್ನಾಟಕದಲ್ಲಿ ಹಾದುಹೋಗಿತ್ತು. ಕಾರವಾರದಿಂದ ರಾಯಚೂರಿನವರೆಗೆ ಮಧ್ಯಾಹ್ನ ಮೂರು ಗಂಟೇ ಹೊತ್ಗೆ ಸೂರ್ಯ ಪೂರ್ತಿ ಕಾಣೆಯಾಗಿದ್ದ ಒಂದು ಎರಡುಮೂರು ನಿಮಿಷ. ನನ್ನ ದುರದೃಷ್ಟ ಅಂದ್ರೆ, ನಾನು ಈ ದಾರಿಲಿ ಬರೋ ಯಾವ ಊರಲ್ಲೂ ಇರಲಿಲ್ಲ. ಆದ್ರೆ ನಮ್ಮೂರಲ್ಲೂ ಸುಮಾರು ೯೩% ಗ್ರಹಣ ಆಗಿತ್ತು. ಅದಕ್ಕೇ ಸಂತೋಷ ಪಡ್ಬೇಕಾಯ್ತು ನಾನು. ಆದ್ರೆ, ಅಲ್ಲಿಂದ ಇಪ್ಪತ್ತೆಂಟು ವರ್ಷ ಆದ್ರೂ, ೯೩% ಆಗಿರೋ ಇನ್ನೊಂದು ಗ್ರಹಣ ನನಗೆ ಸಿಕ್ಕಿಲ್ಲ ಅಂದ್ರೆ, ನಿಮಗ್ಗೊತ್ತಾಗತ್ತೆ ಈ ಗ್ರಹಣಗಳನ್ನ ಅಷ್ಟ…