Posts

Showing posts from July, 2008

ಅರಿತವರ ತೆರ

ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಬಂಜೆ ತಾನರಿಯುವಳೆ
ಹೆರುವ ನೋವನ್ನು? (ಸಂಸ್ಕೃತದಿಂದ ಅನುವಾದ) ಮೂಲ ಹೀಗಿದೆ: ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ -ಹಂಸಾನಂದಿ

ರಾಜರಲ್ಲೊಬ್ಬ ರತ್ಬ

Image
ಜುಲೈ ೧೮, ೨೦೦೮. ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು. ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ? ಇದರ ಬಗ್ಗೆ ನಾನು ಹೇಳುವ ಬದಲು, ಮೈಸೂರಿನ ಪ್ರಸಿದ್ಧ ವೈಣಿಕ, ಸಂಗೀತಶಾಸ್ತ್ರಕೋವಿದರಾದ ಮಹಾಮಹೋಪಾಧ್ಯಾಯ ಡಾ. ಆರ್.ಸತ್ಯನಾರಾಯಣ ಅವರ ಮಾತುಗಳನ್ನೋದುವುದು ಇನ್ನೂ ಸೊಗಸು. (ಫೋಟೋ ಕೃಪೆ: ಹಿಂದೂ ಪತ್ರಿಕೆ)

ಒಡೆಯರ ಬಗ್ಗೆಯ ಒಂದು ಭಾಷಣದ ಅನುವಾದವನ್ನ ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ: Remembering Jayachamarajendra Odeyar -ಹಂಸಾನಂದಿ

ಕಂಡೆ ನಾ ಕನಸಿನಲಿ

೧೯೮೦ ಅಥವಾ ೧೯೮೧ರ ವಿಷಯ ಇರಬಹುದು. ನಮ್ಮೂರು ದೊಡ್ಡ ಪೇಟೆ ಅಲ್ಲ. ಬೆಂಗಳೂರು ಮೈಸೂರು ತರಹ ಯಾವಾಗೆಂದರೆ ಆಗ ನಾಟಕ ಸಂಗೀತ ಮೊದಲಾದುವು ಅಲ್ಲಿ ನಡೆಯುತ್ತಿರಲಿಲ್ಲ. ಸಂಗೀತ ಹರಿಕಥೆ ಬೇಕೂಂತಂದ್ರೆ ಗಣಪತಿ ಉತ್ಸವವೋ ರಾಮೋತ್ಸವವೋ ಆಗಬೇಕು. ಇನ್ನು ನಾಟಕ ರಸಮಂಜರಿ ಎಲ್ಲಾ ಬರಬೇಕು ಅಂತಿದ್ರೆ ಡಿಸೆಂಬರ್ ದನದ ಜಾತ್ರೆ ಕಾಲದಲ್ಲೇ. ಅಂತಹದ್ರಲ್ಲಿ ಒಮ್ಮೆ ನಮ್ಮೂರಲ್ಲಿ ಕರ್ನಾಟಕ ರಾಜ್ಯ ಲಾಟರಿಯ ಬಂಪರ್ ಡ್ರಾ ಇತ್ತು. ಆ ನೆವದಲ್ಲಿ, ಎರಡು ಮೂರು ದಿವಸ ಒಳ್ಳೊಳ್ಳೆ ಕಾರ್ಯಕ್ರಮ ನಡೆಸಿದ್ದರು. ಅವುಗಳಲ್ಲೊಂದು ಪ್ರಭಾತ್ ಕಲಾವಿದರು ನಡೆಸಿಕೊಟ್ಟ "ಕರ್ನಾಟಕ ವೈಭವ" ಆಗಿತ್ತು. ಪ್ರಭಾತ್ ಕಲಾವಿದರು ಕರ್ನಾಟಕದಲ್ಲೆಲ್ಲ ಮನೆಮಾತು ತಾನೇ. ಹಾಗಾಗಿ ಅವರ ವಿಷಯ ಏನೂ ಹೇಳೋದೇ ಬೇಕಿಲ್ಲ. ಆ ಕಾರ್ಯಕ್ರಮದಲ್ಲೊಂದು ಭಾಗದಲ್ಲಿ ಪುರಂದರ ದಾಸರು ಕಂಡ ಒಂದು ಕನಸಿನ ಚಿತ್ರಣ. ನಿದ್ದೆಹೋಗಿದ್ದ ದಾಸರು ಕನಸಿಂದ ಎಚ್ಚೆತ್ತು ತಾವು ಕಂಡ ಕನಸನ್ನು ಬಣ್ಣಿಸುವ ಚಿತ್ರ. ರಾಗಮಾಲಿಕೆಯಲ್ಲಿದ್ದ ಆ ಹಾಡೂ, ಆ ಪಾತ್ರ ವಹಿಸಿದ ನಟರ ಕಣ್ಣಿನ ಹೊಳಪೂ ಎಷ್ಟೋ ವರ್ಷವಾದರೂ ಇನ್ನೂ ಕಣ್ಣಲ್ಲೇ ಇದೆ ಅನ್ನಿಸುತ್ತೆ. ಆ ಹಾಡನ್ನ ಇಲ್ಲಿ ಬರೆದಿರುವೆ. ಕಂಡೆ ನಾ ಕನಸಿನಲಿ ಗೋವಿಂದನ! ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ! ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ -
-ನಂದದಿ ಕುಣಿವ…

ಗುರುಗ್ರಹ, ಅತಿ ಹತ್ತಿರದಲ್ಲಿ

ಇವತ್ತು ಜುಲೈ ೯, ೨೦೦೮. ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ). ಹಾಗಾಗಿ, ಗುರುವು ಸೂರ್ಯ ಮುಳುಗುವ ವೇಳೆಗೆ ಹುಟ್ಟುತ್ತಾನೆ, ಹಾಗೂ ಸೂರ್ಯ ಹುಟ್ಟುವ ವೇಳೆಗೆ ಮುಳುಗುತ್ತಾನೆ. ಅಷ್ಟೇ ಅಲ್ಲದೆ, ವರ್ಷದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿಯೂ ಕಾಣುತ್ತಾನೆ. ಸೂರ್ಯ ಮುಳುಗಿದ ನಂತರ, ಪೂರ್ವ ಆಕಾಶದಲ್ಲಿ ಕಾಣುವ ಬಿಳೀ ಕಾಯವೇ ಗುರು. ಈ ಘಟನೆಯ ಬಗ್ಗೆ ಇನ್ನು ಹೆಚ್ಚಿನ ವಿವರಗಳಿಗೆ, ಗುರುತಿಸಲು ಬೇಕಾದ ಆಕಾಶ ನಕ್ಷೆಗೆ, ನನ್ನ ಇಂಗ್ಲಿಷ್ ಬ್ಲಾಗಿನಲ್ಲಿರುವ ಈ ಬರಹವನ್ನು ನೋಡಿ. -ಹಂಸಾನಂದಿ

ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?

Image
ಸೂರ್ಯ ಸಿದ್ಧಾಂತ ಅನ್ನೋದು ಭಾರತದಲ್ಲಿನ ಹಳೆಯ ಖಗೋಳ ಶಾಸ್ತ್ರದ ಬಗ್ಗೆ ಬರೆದಿರುವ ಹೊತ್ತಗೆಗಳಲ್ಲೊಂದು. ಅದರಲ್ಲಿ ಏನು ಹೇಳ್ತಾರೆ ಗೊತ್ತಾ? ಭೂಮಿಯ ಉತ್ತರಾರ್ಧ ಗೋಳ ದೇವತೆಗಳ ಕಡೆ, ದಕ್ಷಿಣಾರ್ಧ ಗೋಳ ಅಸುರರದ್ದಂತೆ. ದೇವತೆಗಳಿಗೆ ಆರುತಿಂಗಳು ಹಗಲಾದಾಗ, ರಾಕ್ಷಸರಿಗೆ ಆರು ತಿಂಗಳು ರಾತ್ರಿ. ಅಂದ್ರೆ ದೇವತೆಗಳು ಆರ್ಕ್ಟಿಕ್ ಪ್ರದೇಶದಲ್ಲೂ, ರಾಕ್ಷಸರು ಅಂಟಾರ್ಕ್ಟಿಕ್ ಪ್ರದೇಶದಲ್ಲೂ ಇದ್ದಿರಬೇಕು :) ಅದಿರ್ಲಿ. ಇದೆಲ್ಲ ಬರೀ ಸಿಂಬಾಲಿಕ್ ಅಷ್ಟೇ. ಸೂರ್ಯ ಸಿದ್ಧಾಂತದಲ್ಲಿ ನಾವು ತಿಳೀಬೇಕಾದ ಎಷ್ಟೋ ಅಂಶಗಳಿವೆ. ಅವುಗಳ ಮೇಲೆ ಆದಾದಹಾಗೆ ಬರೆಯುತ್ತಾ ಹೋಗುವೆ. ಮೊದ್ಲಿಗೆ ಇದು ಕೇಳಿ: ಲಂಕೆ ಅಂದ್ರೆ ರಾವಣನ ಊರು ಅಂತ ನಾವೆಲ್ಲ ಸಾಧಾರಣವಾಗಿ ಅಂದ್ಕೊಳೋದು ಅಲ್ವಾ? ಆದರೆ, ಖಗೋಳ ಶಾಸ್ತ್ರದಲ್ಲಿ ಇನ್ನೊಂದು ಲಂಕೆ ಇದೆ. ಇದು ಲೆಕ್ಕಾಚಾರಕ್ಕೆ ಮಾಡಿಕೊಂಡಿದ್ದ ಒಂದು ಬಿಂದು ಅಷ್ಟೇ. ಉಜ್ಜಯಿನಿಯ ರೇಖಾಂಶ (longitude) ಎಲ್ಲಿ ಭೂಮಧ್ಯ ರೇಖೆಯನ್ನ ಮುಟ್ಟುತ್ತೋ ಅದೇ ಲಂಕೆ.ಎಲ್ಲಾ ಲೆಕ್ಕಾಚಾರಗಳನ್ನೂ ಉಜ್ಜಯಿನಿಯ ರೇಖಾಂಶಕ್ಕೆ ಸಾಪೇಕ್ಷವಾಗಿ ಮಾಡ್ಕೋತಿದ್ರು ಆಗ. ಈಗ ನಾವು ಭಾರತದ standard time ಅನ್ನ ಹೇಗೆ ೮೨.೫ ರೇಖಾಂಶಕ್ಕೆ ಮಾಡ್ಕೊಂಡಿದೀವೋ, ಅಥವಾ ಪ್ರಪಂಚದಲ್ಲೆಲ್ಲ ಗ್ರೀನ್ವಿಚ್ ಅನ್ನ ಸೊನ್ನೆ ಡಿಗ್ರಿ ಅಂದ್ಕೋತೀವೋ, ಹಾಗೆ ಉಜ್ಜಯಿನಿಯಲ್ಲಿ ಹಾದು ಹೋಗುವ ರೇಖಾಂಶ ಅಂದಿನ ಭಾರತಕ್ಕೆ prime meridian ಆಗಿತ್ತು. -ಹಂಸಾನಂದಿ

ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು

ಕಳೆದ ಬರ ಬರೆದ್ಮೇಲೆ ನಂತರ, ಕೆಲವು ಗೆಳೆಯರು ಇ-ಮೆಯ್ಲ್ ಮಾಡಿದ್ದರಿಂದ ನಾನು ಕೊಟ್ಟ ವಿವರ ಸ್ವಲ್ಪ ಕಮ್ಮಿಯಾಗಿತ್ತು ಅಂತ ಅನ್ನಿಸ್ತು. ಮುಖ್ಯವಾಗಿ, ಗ್ರಹಣ ಚಕ್ರವೂ, ರಾಹು ಕೇತು ಬಿಂದುಗಳು ಅಪ್ರದಕ್ಷಿಣವಾಗಿ ಸುತ್ತುವ ಅವಧಿಯೂ ಹದಿನೆಂಟೂ ಚಿಲ್ಲರೆ ವರ್ಷಗಳಾದರೂ, ಅವೆರಡು ಯಾಕೆ ಬೇರೆ ಅನ್ನೋ ಬಗ್ಗೆ ನಾನು ಮಾತಾಡಿರಲಿಲ್ಲ. ಅದಕ್ಕೇ, ಮಹಾಭಾರತದ ಯುದ್ಧದ ವಿಷಯಕ್ಕೆ ಹೋಗೋ ಮೊದಲು ಆ ಬಾಕಿಯನ್ನು ತೀರಿಸಿಬಿಡೋಣ. ಅಲ್ವೇ?

ಮೊದಲೇ ಹೇಳಿದ್ದೆ. ಈ ಗ್ರಹಣ ( ಅದ್ರಲ್ಲೂ ಸೂರ್ಯ ಗ್ರಹಣ) ಆಗೋದು ಭೂಮಿ ಮೇಲಿರೋವರ ಸೌಭಾಗ್ಯ ಅಂತ. ಯಾಕಂದ್ರೆ, ಎಂಟು ಹತ್ತು ಇಪ್ಪತ್ತು ಉಪಗ್ರಹಗಳಿರೋ ಗುರು ಶನಿ ಅಂತಹ ಗ್ರಹಗಳಿಂದ ಈ ರೀತಿ ಸೂರ್ಯ ಗ್ರಹಣ ಆಗೋದಿಲ್ಲ ಅಂತ. ಸೂರ್ಯ ಚಂದ್ರಂಗಿಂತ ಸುಮಾರು ನಾನೂರರಷ್ಟು ದೊಡ್ಡವನು. ಹಾಗೇ ಚಂದ್ರ ಭೂಮಿಗಿರೋ ದೂರ ಲೆಕ್ಕ ಹಾಕ್ಕೊಂಡ್ರೆ, ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲಿದಾನೆ. ಹಾಗಾಗೇ ಭೂಮಿಯಿಂದ ನೋಡಿದಾಗ ಈ ಎರಡೂ ಕಾಯಗಳು ನಮಗೆ ಸುಮಾರು ಒಂದೇ ಅಳತೆಯಲ್ಲಿ ಕಾಣತ್ವೆ. ಅಲ್ಲದೆ, ಅವೆರಡರ ಪಾತಳೀನೂ ಒಂದಕ್ಕೊಂದು ಓರೆಯಾಗಿದ್ರೂ, ಒಂದನ್ನೊಂದು ಅಡ್ಡ ಹಾಯೋ ಸಮಯದಲ್ಲಿ ಎರಡೂ ಒಂದೇ ಕಡೇಲಿದ್ರೆ ಗ್ರಹಣ ಆಗತ್ತೆ ಅಂತ.

ಹಾಗೇ, ಇನ್ನೂ ಒಂದೆರಡು ಇಂತಹ ಅಕಸ್ಮಾತ್ ಆಗಿ ಆಗಿರೋ ವಿಷ್ಯಗಳಿಂದಲೇ ಈ ಹದ್ನೆಂಟು ವರ್ಷ ಹತ್ತು ದಿನದ ಗ್ರಹಣ ಚಕ್ರ (ಸೆರಾಸ್ ಸೈಕಲ್) ಉಂಟಾಗೋದು. ಹೋದಸಲವೇ ಹೇಳ್ದೆ. ರಾಹು ಕೇತು ಬಿಂದುಗಳೂ ಸುಮಾರು ಹ…

ಗಂಡ-ಹೆಂಡಿರು ಮತ್ತು ಪುರಂದರ ದಾಸರು

ನೀವು ಏನು ಬೇಕಾದ್ರೂ ಹೇಳಿ, ಪುರಂದರ ದಾಸರು ಅಂದ್ರೆ ನಂಗಿಷ್ಟ. ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಅನ್ನೋ ಮಾತಿದೆ. ಅಂದ್ರೆ, ವ್ಯಾಸರು ಹೇಳಿ ಬಿಟ್ಟುಳಿದದ್ದೇ ಈ ಜಗತ್ತಲ್ಲಿರೋದೆಲ್ಲ ಅಂತ. ಮಹಾಭಾರತ ಬರೆಯೋದಲ್ದೆ, ವೇದಗಳನ್ನ ನಾಕು ಪಾಲು ಮಾಡಿ ವಿಂಗಡಿಸಿದ್ದೇ ವ್ಯಾಸರು, ಮತ್ತೆ ಹದಿನೆಂಟು ಪುರಾಣಗಳನ್ನೂ ಬರ್ದಿದ್ದೂ ಅವರೇ ಅಂತ ನಂಬಿಕೆ ಇದೆಯಲ್ಲ. ನನಗೆ ಬಿಡಿ - ವೇದ ಓದಿದರೆ ನೇರವಾಗಿ ಅರ್ಥವಾಗೋಲ್ಲ. ಪುರಾಣ ಓದೋದಕ್ಕೆ ವೇಳೆ ಸಾಲದು. ಅದಕ್ಕೇ ನಾನು ’ದಾಸೋಚ್ಛಿಷ್ಟಂ ಜಗತ್ಸರ್ವಂ’ ಅಂದ್ಕೊಂಡ್ಬಿಡ್ತೀನಿ. ಯಾಕೆ ಅಂತೀರಾ? "ದಾಸರೆಂದರೆ ಪುರಂದರ ದಾಸರಯ್ಯ” ಅನ್ನೋ ಮಾತನ್ನ ಅವರ ಗುರುಗಳೇ ಹೇಳಿಬಿಟ್ಟಿರೋದ್ರಿಂದ, ಈ ದಾಸರು ಯಾರು ಅಂತ ನಾನು ಬಿಡಿಸಿ ಹೇಳ್ಬೇಕಿಲ್ಲ. ಅಲ್ವಾ?ಪುರಂದರ ದಾಸರು ಬರ್ದಿರೋದೆಲ್ಲ ಕನ್ನಡದಲ್ಲಿ. ಓದಿದ್ರೆ, ನನಗೆ ಅರ್ಥವಾಗೋದೇನೂ ಕಷ್ಟವಿಲ್ಲ. ಅಲ್ದೆ, ಅವ್ರೇನೂ ಸರ್ಗದ ಮೇಲೆ ಸರ್ಗ ಕವಿತೆ ಹೊಸೆದಂತ ಕಾಳಿದಾಸನ ಹಾಗೆ ದೊಡ್ಡ ದೊಡ್ಡ ಕಾವ್ಯಗಳನ್ನೂ ಬರೆದಿಲ್ಲ. ಅದು ಬಿಡಿ ಕುಮಾರವ್ಯಾಸ ಹರಿಹರ ರಾಘವಾಂಕ ರತ್ನಾಕರವರ್ಣಿಯರ ಹಾಗೆ ಸಾಂಗತ್ಯ ರಗಳೆ ಷಟ್ಪದಿಯ ಗೊಡವೆಗೂ ಅವರು ಹೋಗಿಲ್ಲ. ಏನಿದ್ರೂ ಅವರು ಬರೆದಿರೋದು ಸಣ್ಣ ಸಣ್ಣ ಹಾಡುಗಳು. ಒಂದು ಓದಿದ್ಮೇಲೆ ಇನ್ನೊಂದು ಇದನ್ನೇ ಓದ್ಬೇಕು ಅನ್ನೋದಕ್ಕೆ ಅಲ್ಯಾವ ಕಥೇನೂ ಇರೋದಿಲ್ಲ. ಅಲ್ದೆ ಸರಿಸುಮಾರು ಅರ್ಥವಾಗ್ದಿರೋ ಪದಗಳೂ ಅಲ್ಲೊಂದು ಇಲ್ಲೊಂದು ಹೊರತು ನಾನೇನೂ ಪಕ್ದಲ…