Posts

Showing posts from September, 2008

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತಡೆಯಲಾರದ ದುರಂತಗಳಾದರೆ, ಕೆಲವು ಸ್ವಯಂಕೃತಾಪರಾಧಗಳು. ಈಗ ಗಾಂಧೀಜಿಯವರು ಹೇಳುವಂತೆ ’ಸಬ್ ಕೋ ಸನ್ಮತಿ ದೇ ಭಗವಾನ್’ ಎಂದು ಹೇಳಿಕೊಳ್ಳುತ್ತ ಮುನ್ನಡೆವುದೊಂದೇ ದಾರಿಯೋ ಏನೋ ಎನ್ನಿಸುತ್ತೆ. ಕಾಲದ ಪ್ರವಾಹದಲ್ಲಿ ತಡೆದು ನಿಲ್ಲಬಲ್ಲವರಾರು?

ಅದೇ ರೀತಿ, ಸಂಗೀತ ಅನ್ನುವುದೂ ನಿಂತ ನೀರಲ್ಲ. ಅದರಲ್ಲಿಯೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೇಗೆ ಒಂದು ಕಲಾಪ್ರಕಾರವೋ, ಅದೇ ರೀತಿ ಒಂದು ಗಣಿತದ ಬುನಾದಿಯಮೇಲೂ ನಿಂತಿದೆ. ಹೇಗೆ ಹೊಸ ಹೊಸ ರಸಾಯನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಾಗುತ್ತಿರುತ್ತವೋ, ಅದೇ ರೀತಿ ಹೊಸ ಹೊಸರಾಗಗಳೂ ಸಂಗೀತ ಪ್ರಪಂಚಕ್ಕೆ ಸೇರುತ್ತಲೇ ಹೋಗುತ್ತವೆ. ಅದರಲ್ಲಿ ಜಳ್ಳು ಯಾವುದು, ಒಳ್ಳೆಯದು ಯಾವುದು ಎನ್ನುವುದನ್ನು ಕಾಲವೇ ಹೇಳುತ್ತೆ.

ಪೀರಿಯಾಡಿಕ್ ಟೇಬಲ್ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅಣು ಪರಮಾಣುಗಳನ್ನು ಒಂದು ಕ್ರಮದಲ್ಲಿ ಇಡುತ್ತಾ ಹೋದಾಗ, ಅದರಲ್ಲಿ ಹೋಲಿಕೆ ಇರುವಂತಹ ಮೂಲವಸ್ತುಗಳೆಲ್ಲ ಒಂದು ಪಟ್ಟಿಯಲ್ಲಿ ಇರುವಂತೆ ಮಾಡುವ ಸಲಕರಣೆ ಇದು. ಒಂದು ನೇರಸಾಲಿನಲ್ಲಿರುವ ಮೂಲವಸ್ತುಗಳು ಸ್ವಭಾವಗಳಲ್ಲಿ ಹೋಲಿಕೆ ಇರುತ್ತೆ ಎನ್ನುತ್ತೆ ರಸಾಯನ ಶಾಸ್ತ್ರ. ಈ ವಿಂಗಡಣೆ ಮಾಡಿಟ್ಟಾಗ, ಕೆಲವು ಖಾಲಿ ಜಾ…

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಬಿದಿಗೆ

ನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ. ಆದಕ್ಕೆ ಹೊರಬಂದ ತಕ್ಷಣ ಗಾಳಿ ಕುಡಿದು ಕಳೆಕಳೆಯಾಗಿಬಿಡುತ್ತವೆ!

ನವರಾತ್ರಿ ಎಂದರೆ ಅಲ್ಲಲ್ಲಿ ಸಂಗೀತೋತ್ಸವಗಳು ನಡೆಯುವುದು ರೂಢಿ. ಅದೇ ಕಾರಣಕ್ಕೆ ಹೋದಬಾರಿಯಂತೆ ನಾನೂ ಸಂಗೀತದ ಬಗ್ಗೆಯೇ ಬರೆಯತೊಡಗಿದ್ದೇನೆ. ಇವತ್ತು ನನ್ನ ಮನಸ್ಸಿಗೆ ಬಂದ ಕೃತಿ ತ್ಯಾಗರಾಜರ ’ಗತಿ ನೀವನಿ’ ಎನ್ನುವ ತೋಡಿ ರಾಗದ ರಚನೆ.

ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು ಬಹಳ ಪ್ರಖ್ಯಾತ ರಚನೆಗಳು - ಅದರಲ್ಲೂ ಕೊನೆಯ ಪಂಚರತ್ನ ಕೃತಿಯಾದ ಎಂದರೋ ಮಹಾನುಭಾವುಲು ಎನ್ನುವುದಂತೂ ಸಂಗೀತವನ್ನು ಅಷ್ಟಾಗಿ ಕೇಳಿ ತಿಳಿಯದವರಿಗೂ ಗೊತ್ತಿರುವುದುಂಟು. ಆದರೆ, ಈ ಪಂಚರತ್ನ ಕೃತಿಗಳಲ್ಲದೇ, ಇನ್ನೂ ಕೆಲವು ಗುಂಪು-ರಚನೆಗಳನ್ನೂ ತ್ಯಾಗರಾಜರು ರಚಿಸಿದ್ದಾರೆ. ಆವುಗಳಲ್ಲಿ ಲಾಲ್ಗುಡಿ ಪಂಚರತ್ನ ಎಂಬ ಗುಂಪೂ ಒಂದು.

ಲಾಲ್ಗುಡಿ ತಮಿಳುನಾಡಿನಲ್ಲಿ ಕಾವೇರಿ ತೀರದಲ್ಲಿರುವ ಒಂದು ಊರು. ತ್ಯಾಗರಾಜರ ತಿರುವೈಯ್ಯಾರಿನಿಂದ ಪಶ್ಚಿಮಕ್ಕೆ ಒಂದು ಮೂವತ್ತು ಮೈಲಿ ದೂರವಿರಬಹುದು ಅಷ್ಟೇ. ಲಾಲ್ಗುಡಿಯ ರಾಮ ಅಯ್ಯರ್ ತ್ಯಾಗರಾಜರ ಶಿಷ್ಯರು. ಒಮ್ಮೆ ತಮ್ಮ ಗುರುಗಳನ್ನು ತಮ್ಮೂರಿಗೆ ಕರೆದು, ಸತ್ಕರಿಸಿ ಕೆಲವು ದಿನ ಉಪಚರಿಸಿ ಕಳಿಸಿದರು. ಲಾಲ್ಗುಡಿಯಲ್ಲಿ ಶಿವನ …

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಮೊನ್ನೆ ಶನಿವಾರ ಒಂದು ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು ಪ್ರಮುಖ ಕೇಂದ್ರವಾದ್ದರಿಂದ ಮೈಸೂರಿನ ವಾಗ್ಗೇಯಕಾರರ ರಚನೆಗಳೇ ಅದರಲ್ಲಿ ಹೆಚ್ಚಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಅವರು ಹಾಡಿದ ರಚನೆಗಳಲ್ಲಿ ಮೊದಲ ರಚನೆಯನ್ನು ನವರಾತ್ರಿಯ ಮೊದಲ ದಿನವಾದ ಇಂದು ನಿಮಗೆ ಕೇಳಿಸೋಣ ಎನ್ನಿಸಿತು. ಅದಕ್ಕೆ ಎರಡು ಮೂರು ಕಾರಣಗಳಿವೆ. ಒಂದು ದಸರ ಅಂದರೆ ಮೈಸೂರು, ಮೈಸೂರು ಅಂದರೆ ದಸರಾ ಅನ್ನಿಸುವ ಈ ನವರಾತ್ರಿ ಹಬ್ಬದಲ್ಲಿ ಮೈಸೂರಿನಲ್ಲಿ ರಚನೆಯಾದ ಇದು ಒಳ್ಳೇ ಆರಂಭವನ್ನು ತರುತ್ತೆ ಎನ್ನುವುದು. ಎರಡನೆಯದು, ಸಂಗೀತ ಕಚೇರಿಯನ್ನು ವರ್ಣದೊಂದಿಗೆ ಆರಂಭಿಸಿದಾಗ ಅದು ಸೊಗಸುತ್ತೆಂಬ ನಂಬಿಕೆಯಂತೆ, ಈ ಹಾಡನ್ನು ಕೇಳುತ್ತ ನವರಾತ್ರಿ ಎಲ್ಲರಿಗೂ ಸೊಗಸಲಿ ಎನ್ನುವುದು. ಮೂರನೆಯ ವಿಷಯಕ್ಕೆ ಮತ್ತೆ ಬರುವೆ.

ಈ ರಚನೆ ಒಂದು ದರು ವರ್ಣ. ವರ್ಣ ಎನ್ನುವುದು ಸಂಗೀತದಲ್ಲಿ ಒಂದು ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವಂತಹ ರಚನೆ. ಅಂದರೆ ಸಾಹಿತ್ಯದ ಅಂಶ ಕಡಿಮೆ ಇದ್ದು, ರಾಗಗಳ ವಿವಿಧ ಸಂಚಾರಗಳನ್ನು ಚೆನ್ನಾಗಿ ತೋರಿಸಿಕೊಡಲು ಇರುವಂತಹ ರಚನೆ ಇದು. ಪಲ್ಲವಿ ಅನುಪಲ್ಲವಿ ಆದನಂತರ ಚಿಟ್ಟೆಸ್ವರವೂ, ಮತ್ತೆ ಚರಣವಾದ ನಂತರ ಹಲವಾರು ಎತ್ತುಗಡೆ ಸ್ವರಗಳು ಇರುವುದೂ ಇದರ ಲಕ್ಷಣ.ವರ್ಣಗಳಲ್ಲಿ ದರು ಎನ್ನುವುದು ಒಂದ…

ಏನೀ ಮಹಾನಂದವೇ? ಓ ಭಾಮಿನೀ!!

ಕೆಲವು ದಿನಗಳ ಹಿಂದೆ ’ಭಾಮೆಯ ನೋಡಲು ತಾ ಬಂದ’ ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?

ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.

ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ.

ಆರೋಹಣ: ಸ ಗ೨ ಮ೧ ದ೧ ನಿ೨ ಸ
ಅವರೋಹಣ: ಸ ನಿ೨ ದ೧ ಮ೧ ಗ೨ ಸ

ಹಿಂದೂಸ್ತಾನಿಯಲ್ಲಾದರೆ, ಗಾಂಧಾರ, ಧೈವತ, ನಿಷಾದಗಳನ್ನು ಕೋಮಲವೆಂದೂ, ಮಧ್ಯಮವನ್ನು ಶುದ್ಧವೆಂದೂ ಕರೆಯುತ್ತಾರೆ. ಹಿಂದೂಸ್ತಾನಿಯ ಮಾಲಕೌಂಸ್ ರಾಗವೂ, ಕರ್ನಾಟಕ ಸಂಗೀತದ ಹಿಂದೋಳವೂ ಒಂದೇ ನಾಣ್ಯದ ಎರಡು ಮುಖಗಳು ಎನ್ನಬಹುದು. ಅಲ್ಲದೇ, ಆರೋಹಣ ಅವರೋಹಣಗಳನ್ನು ನೀರವಾಗಿ ಸೂಚಿಸಿದ್ದರೂ, ಸ-ಮ, ಗ-ದ, ಮ-ನ…

ಹಲ್ಲು ಕಿತ್ತ ಹಾವು

ನಂಜಿರುವ ಹಾವಿನಲಿ
ತಾಳ್ಮೆ ಮನ್ನಿಪೆಂಬುದು
ಅಗ್ಗಳವು ಅದಕೆ ನೀ
ಕಟ್ಟಲಾಗದು ಬೆಲೆಯ! ಹಲ್ಲಳಿದು ವಿಷವುಡುಗಿ
ಪಳಗಿಸಿದ ಹಾವಿಗಿಹ
ತಾಳುಮೆ ಔದಾರಿಯಕೆ
ಇಹುದೇನು ಬೆಲೆಯು? (ಮೂಲ: ಹಿಂದಿಯ ಪ್ರಸಿದ್ಧ ಕವಿ ರಾಮಧಾರಿ ಸಿಂಗ್ "ದಿನಕರ್" ರವರ ಕವನ .

"ಕ್ಷಮಾ ಶೋಭ್ತಿ ಉಸ್ ಭುಜಂಗ್ ಕೋ ಜಿಸ್ ಕೆ ಪಾಸ್ ಗರಲ್ ಹೋ.
ಉಸ್ ಕಾ ಕ್ಯಾ ಜೋ ದಂತ್ ಹೀನ, ವಿಶ್ ರಹಿತ್, ವಿನೀತ್, ಸರಲ್ ಹೋ
)
ಹೆಚ್ಚು ಕಡಿಮೆ ಇದೇ ತಿಳಿವು ಬರುವ ಸಂಸ್ಕೃತ ಪದ್ಯವೊಂದನ್ನೂ ಓದಿದ ಅನಿಸಿಕೆ ನನಗೆ. ಆದರೆ ಸರಿಯಾಗಿ ನೆನಪಾಗುತ್ತಿಲ್ಲ.
-ಹಂಸಾನಂದಿ

ಧರ್ಮವೆ ಜಯವೆಂಬ ದಿವ್ಯ ಮಂತ್ರ

Image
ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ ಮಾಡುವವನ ಹೆಸರ ಮಗನಿಗಿಡಬೇಕು !
ಎಂತಹ ಸಾಲುಗಳು ಅಲ್ಲವೇ? ಧರ್ಮದ ಹೆಸರಲ್ಲಿ ಕಚ್ಚಾಡುವವರಿಗೆ, ಕರುಣೆ , ಕ್ಷಮೆ ಅನ್ನುವುದನನ್ನು ನಾವು ಎಂದೂ ಮರೆಯಬಾರದೆಂದು ಎತ್ತಿ ಹೇಳುವ ಸಾಲುಗಳಿವು. ಜೊತೆಗೆ ಇಂತಹ ಯೋಚನಗಳು ನಮ್ಮಲ್ಲಿ ಎಂದಿಗೂ ಇದ್ದವು, ಇಂದೂ ಇರಬೇಕು ಎಂದು ಕನ್ನಡಿ ಇಟ್ಟು ತೋರುವ ಸಾಲುಗಳಿವು. ಆದರೆ ನಿಜವಾಗಿ ನಾನು ಹೇಳಹೊರಟದ್ದೇ ಬೇರೆ ವಿಷಯ - ವಿಷಯಾಂತ ಸಾಕು. ಕಳೆದ ವಾರ ಇಲ್ಲಿ ಒಂದು ಒಳ್ಳೇ ಸಂಗೀತ ಕಚೇರಿ ಕೇಳಿದೆ. ಅದು ನಡೆದದ್ದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ನಡೆಸಿದ ಕನ್ನಡೋತ್ಸವ-೨೦೦೮ ರಲ್ಲಿ. ಹಾಡುಗಾರರು ರಾಘವನ್ ಮಣಿಯನ್. ಡಾ|ಬಾಲಮುರಳಿಕೃಷ್ಣ ಅವರ ಶಿಷ್ಯ. ಅವರು ಕನ್ನಡಿಗರಲ್ಲದಿದ್ದರೂ, ಕನ್ನಡಕೂಟದಲ್ಲಿ ನಡೆಯುವ ಕಚೇರಿಯೆಂದು, ಪೂರ್ತಿ ಕಾರ್ಯಕ್ರಮವನ್ನು ಕನ್ನಡದಲ್ಲಿರುವ ರಚನೆಗಳಿಂದಲೇ ಕಳೆಕಟ್ಟಿಸಿದರು. ಅವರು ಹಾಡಿ ಹಾಡುಗಳಲ್ಲಿ ಧರ್ಮವೆ ಜಯವೆಂಬ ದಿವ್ಯ ಮಂತ್ರ ಕೂಡ ಒಂದಾಗಿತ್ತು. ಇದರ ಜೊತೆಗೆ, ಈ ಕಚೇರಿ ಇನ್ನೊಂದು ನಿಟ್ಟಿನಿಂದ ನನ್ನ ಮಟ್ಟಿಗೆ ವಿಶೇಷವಾಗಿತ್ತು. ಸಾಧಾರಣವಾಗಿ, ಕರ್ನಾಟಕ ಸಂಗೀತ ಕಚೇರಿಯೆಂದರೆ ತ್ಯಾಗರಾಜರ ರಚನೆಗಳು ಒಂದೆರಡಾದರೂ ಇರುವುದು ರೂಢಿ. ಆದರೆ ತ್ಯಾಗರಾಜರು ಕನ್ನಡದಲ್ಲಿ ರಚಿಸಿಲ್ಲವಲ್ಲ! ಹಾಗ…

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

ಯಾವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನೀತನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ,
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**

ಸಂಸ್ಕೃತ ಮೂಲ: ಬೇಲೂರು ಚೆನ್ನಕೇಶವ ದೇವಾಲಯದ ಗೋಡೆಯಲ್ಲಿರುವ ಶಾಸನ

ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾ:
ಅರ್ಹನ್ನಿತ್ಯಥ ಜೈನಶಾಸನರತಾ: ಕರ್ಮೇತಿ ಮೀಮಾಂಸಕಾ:
ಸೋಯಂ ವೋ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ವಿಭು: **

(*: ಕಡೆಯ ಸಾಲಿಗೆ, "ಸೋಯಂ ವೋ ವಿದಧಾತು ವಾಂಚಿತಫಲಂ ಶ್ರೀಕೇಶವೇಶಸ್ಸದಾ" ಅನ್ನುವ ಪಾಠವನ್ನೂ ಓದಿದ್ದೇನೆ; ಅದಕ್ಕೇ ಅನುವಾದದಲ್ಲಿ ಎರಡೂ ಅರ್ಥಗಳು ಬರುವಂತೆ ಸೇರಿಸಿರುವೆ)

ಕೊನೆಯ ಕೊಸರು: ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ

- ಹಂಸಾನಂದಿ

ಸಮಹಗಲಿರುಳು

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ - "ಇವತ್ತು ಈಕ್ವಿನಾಕ್ಸ್" ಅಂತ. "ಹಂಗಂದ್ರೇನು" ಅಂದರು ಅವರು. ಮತ್ತೆ ಶುದ್ಧ ಸಂಸ್ಕೃತದಲ್ಲಿ "ಇವತ್ತು ಶರದ್ ವಿಷುವ" ಅಂತ ಹೇಳ್ಬಹುದಿತ್ತು - ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ "ಸಮಹಗಲಿರುಳು" ಅಂದೆ. ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ. ಜೂನ್ ೨೧ (ಅಥವಾ ಅಕ್ಕ ಪಕ್ಕದ ದಿನ) ಅತೀ ಹೆಚ್ಚಿನ ಹಗಲು ಇರುತ್ತೆ. ಹಾಗೇ ಡಿಸೆಂಬರ್ ೨೧(ಅಥವಾ ಒಂದು ದಿನ ಆಚೀಚೆ) ಅತಿ ಕಡಿಮೆ ಹಗಲಿರುತ್ತೆ. ಅತಿ ಹೆಚ್ಚು ಹಗಲಿರುವ ದಿನದಿಂದ ಪ್ರತಿ ದಿನ ಹಗಲಿನ ಅವಧಿ ಸ್ವಲ್ಪ್ಸ್ ಸ್ವಲ್ಪ ಕಡಿಮೆಯಾಗ್ತಾ ಹೋಗ್ತಿದ್ದಹಾಗೆ, ಒಂದು ದಿನ ಹಗಲು ರಾತ್ರಿ ಎರಡೂ ಒಂದು ಸಮ ಆಗ್ಬೇಕಲ್ಲ? ಅದು ಇವತ್ತು ಆಗತ್ತೆ. ಈಕ್ವಿನಾಕ್ಸ್ - ಅಂದರೂ ಅದೇ ಅರ್ಥ. ಈಕ್ವಲ್ ನೈಟ್ಸ್ ಅನ್ನೋ ಅರ್ಥ ಬರುವ ಗ್ರೀಕ್ ಪದ ಅದು. ಇದರಲ್ಲಿ ಇ…

ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"

ಪುತಿನ ಅವರು ಕನ್ನಡದಲ್ಲಿ ಹಲವು ಗೀತನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಶ್ರೀರಾಮ ಪಟ್ಟಾಭಿಷೇಕ ಒಂದು. ಇದರ ರಂಗ ಪ್ರಯೋಗವೊಂದರಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿತ್ತು. ಬಹಳ ಒಳ್ಳೇ ಸಂಗೀತವಿರುವುದರಿಂದ ಕೆಲವೊಮ್ಮೆ ಹಾಡುಗಳ ಸಾಹಿತ್ಯಕ್ಕೆ ಬೇಕಾದಷ್ಟು ಗಮನ ಹರಿಸಲಿಲ್ಲವೇನೋ ಎನ್ನಿಸಿ, ನಂತರ ಒಮ್ಮೆ ಕುಳಿತು ಓದಿದೆ. ಗಾತ್ರದಲ್ಲಿ ಅಂತಹ ದೊಡ್ಡ ರಚನೆಯೇನೂ ಅಲ್ಲ -ಆದರೆ ಶೈಲಿಯಲ್ಲಿ ಸಂಸ್ಕೃತಭೂಯಿಷ್ಟವಾದ ಕನ್ನಡದಿಂದ ಹಿಡಿದು ಒಂದೇ ಒಂದೂ ಸಂಸ್ಕೃತ ಪದಗಳಿಲ್ಲದ ಪದ್ಯಗಳವರೆಗೆ ಎಲ್ಲಾ ತರಹದ ಪದ್ಯಗಳೂ ಇದರಲ್ಲಿವೆ. ಇದರ ಸೊಗಸನ್ನು ಹಂಚಿಕೊಳ್ಳಲು ಒಂದು ಬರಹ ಬರೆದೆ.ಆ ಬರಹವನ್ನು ಓದಲು ಕೆಳಗೆ ಚಿಟುಕಿಸಿ: ಪುತಿನ ಅವರ ಶ್ರೀರಾಮ ಪಟ್ಟಾಭಿಷೇಕ -ಹಂಸಾನಂದಿ

ಭಾಮೆಯ ನೋಡಲು ತಾ ಬಂದ

Image
ಎಷ್ಟೋ ದಿನಗಳಿಂದ ಯಾವುದಾದರೂ ರಾಗದ ವಿಷಯ ಬರೆಯಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಯಾಕೋ ಮುಂದೆ ಹೋಗುತ್ತಲೇ ಹೋಗುತ್ತಿತ್ತು. ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡುತ್ತ ಇದ್ದಕ್ಕಿದ್ದ ಹಾಗೆ ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಅನ್ನುವ ಹಾಡು ನೆನಪಿಗೆ ಬಂತು. ಈ ಚಿತ್ರವನ್ನು ನಾನು ನೋಡಿರಲಿಲ್ಲ. ಆದರೆ ಬರೀ ಹಾಡುಗಳನ್ನ ಕೇಳಿದ್ದೆ. ಆ ಕಾಲಕ್ಕೆ ತಕ್ಕ ಹಾಗೆ ಒಳ್ಳೇ ಶಾಸ್ತ್ರೀಯ ಧಾಟಿಯ ಹಾಡುಗಳಿವೆ ಅಂತ ಗೊತ್ತಿತ್ತು. ಆದರೆ ಈಗ ಬೇಕಾದ್ದು ತೋರಿಸಲು ಸಪ್ತಾಕ್ಷರೀ ಮಂತ್ರವಿದೆಯಲ್ಲ (youtube), ಅದನ್ನೇ ಜಪಿಸಿಸಿದೆ. ಸಿಕ್ಕೇಬಿಡ್ತು ಬೇಕಾದ್ದ ಹಾಡು. ಮೊದಲಿಗೆ ಹಾಡು ಕೇಳಿ, ಮತ್ತೆ ಈ ಹಾಡನ್ನು ಏಕೆ ತೆಗೆದುಕೊಂಡೆ ಅಂತ ಹೇಳುವೆ.
ಸೂಲಮಂಗಲಂ ರಾಜಲಕ್ಷ್ಮಿ ಅವರು ಹಾಡಿರೋ ಈ ಹಾಡು ಹಿಂದೋಳ ರಾಗದಲ್ಲಿದೆ. ಈ ಹಿಂದೆ ಕಲ್ಯಾಣಿ, ಮೋಹನ, ಸಿಂಧೂಬೈರವಿ ಮೊದಲಾದ ರಾಗಗಳ ಬಗ್ಗೆ ಬರೆದಿದ್ದೆ. ಹೀಗಾಗಿ, ಇನ್ನೊಂದು ಒಳ್ಳೇ ರಾಗದ ಬಗ್ಗೆ ಬರೀಬೇಕು ಅನ್ನಿಸಿದಾಗ ಹಿಂದೋಳ ರಾಗ ಸಹಜವಾದ ಒಂದು ಆಯ್ಕೆ. ಕರ್ನಾಟಕ ಸಂಗೀತದಲ್ಲಿ ಹಿಂದೋಳ ಎನ್ನುವ ಹೆಸರಲ್ಲಿ ಮತ್ತೆ ಹಿಂದೂಸ್ತಾನಿಯಲ್ಲಿ ಮಾಲ್‍ಕೌಂಸ್ ಅನ್ನುವ ಹೆಸರಲ್ಲಿ ಬಹಳವೇ ಪ್ರಖ್ಯಾತವಾದ ರಾಗ. ಇದು ಒಂದು ಔಡುವ ರಾಗ - ಅಂದರೆ ಇದರಲ್ಲಿ ಐದು ಸ್ವರಗಳು ಮಾತ್ರ ಬರುತ್ತವೆ. ಸ ಗ ಮ ದ ನಿ ಸ - ಸ ನಿ ದ ಮ ಗ ಸ ಎನ್ನುವ ಆರೋಹಣ ಅವರೋಹಣಗಳನ್ನು ಈ ರಾಗಕ್ಕೆ ಬರುತ್ತವೆ. ಸಾಧಾರಣ ಗಾಂಧಾರ, ಶುದ್ಧ…

ಹೊಸ ತಾಣ: ಹರಿದಾಸ ಸಂಪದ

ನಮಿಪೆ ಶ್ರೀಪಾದರಾಜರಿಗೆ ಮಣಿವೆ ವ್ಯಾಸಯೋಗಿಗೆ
ಶ್ರೀಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ


ಕನ್ನಡ ನಾಡಿನ, ನುಡಿಯ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದಾಗ ಅದರಲ್ಲಿ ಹರಿದಾಸರು ಮುನ್ನೆಲೆಯಲ್ಲಿ ನಿಲ್ಲುತ್ತಾರೆ. ಬಸವಣ್ಣ ಮೊದಲಾದ ಶಿವಶರಣರು ೧೧-೧೨ನೇ ಶತಮಾನದಲ್ಲಿ ಶಿವಭಕ್ತಿಯ ಹಾದಿಯೊಡನೆ ಸಮಾಜಸುಧಾರಣೆಯ ಬೀಜವನ್ನೂ ಬಿತ್ತಿದರು. ಅದಕ್ಕೆ ಸ್ವಲ್ಪವೇ ಕಾಲದ ನಂತರ ಮೊದಲಾದ ಹರಿದಾಸ ಸಂಪ್ರದಾಯ, ಹರಿಭಕ್ತಿಯ ಬೇರಿನಲ್ಲಿ ಹುಟ್ಟಿದರೂ, ಅದು ನಂತರ ಸಂಗೀತ, ಸಮಾಜ ಸುಧಾರಣೆಯೇ ಮೊದಲಾದ ಹಲವು ಹಾದಿಗಳಲ್ಲಿ ಹೊರಹೊಮ್ಮಿ, ಚಿಗುರಿ ಹೂಬಿಟ್ಟಿತು.

ಹರಿದಾಸರು ಸಂಸಾರದಲ್ಲೇ ಇದ್ದು ಈಸಬೇಕು, ಇದ್ದು ಜಯಿಸಬೇಕು ಎನ್ನುತ್ತಾ, ಭಕ್ತಿಯನ್ನು ಸಂಸಾರದಲ್ಲಿದ್ದೂ ನಡೆಸಿ ತೋರಿಸಿ ಗೆದ್ದವರು. ಸಾಲಮಾಡೆನು, ಸಾಲದೆನೆನು, ನಾಳೆಗಿಡೆನು ಮೊದಲಾದ ಆಣೆಗಳನ್ನಿಟ್ಟು ಅದರಂತೇ ನಡೆದವರು. ಬೀದಿ ಬೀದಿ ತಿರುಗುತ್ತಾ ಹಾಡುತ್ತಾ ತಮ್ಮ ನಲ್ಮೆಯ ಮಾತುಗಳನ್ನು ಮನೆಮನೆಗೆ ತಲುಪಿಸಿದರು. ಈ ಮಾದರಿಯಲ್ಲೇ ನಮ್ಮ ಸಮಾಜದ ಓರೆಕೋರೆಗಳನ್ನು ತಮ್ಮ ಕೈಲಾದ ಮಟ್ಟಿಗೆ ತಿದ್ದುತ್ತ ಹೋದವರು.

ತಾವು ನೆಚ್ಚಿನ ದೇವನನ್ನೊಲಿಸುವ ಭಾಷೆ ತಮ್ಮ ಆಡುಮಾತಾಗಿರಬೇಕೆಂಬುದು ದಾಸ ಸಂಪ್ರದಾಯದವರ ಗುರಿಯಾಗಿತ್ತು. ಅಂತಹ ಮಾತೇ ಮನಮುಟ್ಟುವಂತಹದು ಎಂದು ಅವರು ಅರಿತಿದ್ದರು. ಅದಕ್ಕೆಂದೇ, ಎಲ್ಲ ಹರಿದಾಸರೂ ಕನ್ನಡದಲ್ಲಿಯೇ ತಮ್ಮ ರಚನೆಗಳನ್ನು ಮಾಡಿದ್ದಾರೆ. ಪದ, ಸುಳಾದಿ, ಉಗಾಭೋಗ ಮೊದಲಾಗಿ ಬೇರೆಬೇರೆ ಪ್ರಕಾ…

ಕೌಮಾರೀ ಗೌರೀ ವೇಳಾವಳಿ

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದ್ದೂ, ನಮ್ಮಲ್ಲಿ ಇರುವುದೂ ಏಕೆ ಎನ್ನುವುದು ನನಗೆ ಗೊತ್ತಿಲ್ಲ.

ನಾನು ಚಿಕ್ಕವನಾಗಿದ್ದಾಗ, ಮಳೆಗಾಲದ, ಅದರಲ್ಲೂ ಸೋನೆಮಳೆಗಾಲದಲ್ಲಿ ಬರುವ ಈ ಹಬ್ಬಗಳ ಮುನ್ನಾದಿನ, ಅಷ್ಟಾಗಿ ದುರಸ್ತಿಯಲ್ಲ ರಸ್ತೆಯ ಆಚೀಚೆ ಕುಳಿತ ವ್ಯಾಪಾರಸ್ಥರ ನಡುವೆ ಹೋಗಿ ಪೇಟೆ ಬೀದಿಯಲ್ಲಿ ಸುತ್ತಿ ಹೂವು ಹಣ್ಣು ಖರೀದಿಸುವ ಆ ಅನುಭವ ಮಾತ್ರ ಇನ್ನೂ ಮರೆತಿಲ್ಲ!

ಅದೆಲ್ಲಾ ಇರಲಿ; ಹಬ್ಬಗಳು ಚೆನ್ನಾಗಿ ಕಳೆಯಲಿ ಎನ್ನುವ ಹಾರೈಕೆಗಳೊಂದಿಗೆ ಒಂದು ಒಳ್ಳೆ ಹಾಡನ್ನು ಕೇಳಿಸಹುದು ಎನ್ನಿಸಿತು.

ಮುತ್ತುಸ್ವಾಮಿ ದೀಕ್ಷಿತರು ಅವರ ಕಾಲದಲ್ಲಿ ಪ್ರಸಿದ್ಧವಿಲ್ಲದ ರಾಗಗಳಲ್ಲಿಯೂ ಒಂದೊಂದು ಚಿಕ್ಕ ರಚನೆಗಳನ್ನು ಮಾಡಿ ರಾಗಗಳ ಸಾಧ್ಯತೆಯನ್ನು ತೋರಿಸಿಕೊಟ್ಟವರು. ಅವರು ತಂಜಾವೂರಲ್ಲಿ ಕೆಲವು ವರ್ಷ ಕಳೆದಾಗ, ಅವರಲ್ಲಿ ಸಂಗೀತ ಕಲಿಯುವವರಿಗೆ ಅನುಕೂಲವಾಗಲೆಂದು ಈ ರೀತಿಯ ರಚನೆಗಳನ್ನು ತಂಜಾವೂರಿನ ಬೃಹದೀಶ್ವರ/ಬೃಹದಂಬಿಕೆಯರ ಮೇಲೆ, ಅಥವಾ ಆಲ್ಲೇ ಇರುವ ಬೇರೆ ಯಾವುದಾದರೂ ದೇವಾಲಯದಲ್ಲಿರುವ ದೇವತೆಯ ಮೇಲೆ ರಚಿಸಿದರಂತೆ. ಅಂತಹ ಕೃತಿಗಳಲ್ಲಿ ಒಂದು ಈ ಗೌರಿ ಹಬ್ಬದ ದಿನ ಕೇಳಲು ಬಲು ತಕ್ಕುದಾದ್ದು: ಅದೇ "ಕೌಮಾರೀ ಗೌರೀ ವೇಳಾವಳಿ" ಎಂಬ ರಚನೆ. ಇದರಲ್ಲಿ ದೀ…