Posts

Showing posts from October, 2008

ಹಾಳೂರಿಗುಳಿದವನೇ ...

ಅರಿತವರೇ ಇರದೂರಿನಲಿ
ಗೌರವ ದೊರೆತೀತು ಮಡೆಯನಿಗೂ!
ಮರಗಳ ಕಾಣದ ದೇಶದಲಿ
ಹರಳು ಗಿಡವದೇ ಅತಿಶಯವು!!

ಸಂಸ್ಕೃತ ಮೂಲ:

ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ |
ನಿರಸ್ತ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ||

-ಹಂಸಾನಂದಿ

ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ

ಕೊನೆಯ ಕೊಸರು: ಇದೇ ಸುಭಾಷಿತವನ್ನೇ ಪಾವೆಂ ಆಚಾರ್ಯರೋ, ಎಸ್ವಿ ಪರಮೇಶ್ವರ ಭಟ್ಟರೋ( ಯಾರೆಂದು ಮರೆತಿರುವೆ) ಹೀಗೆ ಕನ್ನಡಿಸಿದ್ದಾರೆ ಎಂದು ಬಹಳ ಹಿಂದೆ ಓದಿದ ನೆನಪು:

ಹೆಣ್ಣು ಹೊನ್ನು ಪುಸ್ತಕ
ಆದರೆ ಪರಹಸ್ತಕ
ಹೋಗೇ ಹೋಯ್ತು! ಮರಳಿದರೂ
ಭ್ರಷ್ಟ, ನಷ್ಟ, ಹರುಕ!

-ಹಂಸಾನಂದಿ

ಹೇಮಂತ ಋತುರಾಜ

ಕಾಲೇಜಿನಲ್ಲಿದ್ದಾಗ ಒಬ್ಬ ಸಹಪಾಠಿ ಒಂದು ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ. ಅದರಲ್ಲಿ ಹೇಮಂತ ಋತುರಾಜ ಬಂದಾಗ ಹೇಗೆ "ಹೂವಿಲ್ಲ- ಚಿಗುರಿಲ್ಲ - ಹಸಿರೆಲೆಗಳಿಲ್ಲ" ಎಂದು ವರ್ಣಿಸುತ್ತಿತ್ತು. ಆ ಹಾಡನ್ನು ಸ್ವಲ್ಪ ಶೋಕರಸಪೂರ್ಣವಾದ ಶುಭಪಂತುವರಾಳಿ ರಾಗದಲ್ಲಿ ನಿಯೋಜಿಸಿದ್ದರಿಂದ ಹೇಮಂತದ ಬಗ್ಗೆ ಯಾವುದೇ ಒಳ್ಳೆಯ ಕಲ್ಪನೆ ನನ್ನಲ್ಲಿ ಮೂಡಿರಲಿಲ್ಲ- ಆರು ಋತುಗಳಲ್ಲಿ ಅದೂ ಒಂದು ಅನ್ನುವುದನ್ನು ಬಿಟ್ಟರೆ. ಎಲೆ ಉದುರದ ದಕ್ಷಿಣ ಕರ್ನಾಟಕದಲ್ಲಿ, ಹೂವಿಲ್ಲ ಚಿಗುರಿಲ್ಲ ಅನ್ನುವುದನ್ನು ಮಾತ್ರ ಗಮನಿಸಿದ್ದೆ.

ಕೆಲ ಕಾಲದ ನಂತರ ಹಿಂದೂಸ್ತಾನಿ ಸಂಗೀತದ ಪರಿಚಯವಾಗುತ್ತ ಅದರಲ್ಲಿರುವ ಹೇಮಂತ್ ರಾಗವನ್ನು ಕೇಳಿದಾಗ - ಅದು ಒಂದು ಉತ್ಸಾಹ ತುಂಬುವ ಭಾವನೆಯ ರಾಗ ಅನ್ನುವುದು ಗೊತ್ತಾಯಿತು. ಮುಂಚೆ ಕೇಳಿದ್ದ ’ಹೇಮಂತ ಋತುರಾಜ’ ಎಂಬ ಹಾಡಿನಲ್ಲಿ ರಾಜ ಎಂದು ಬಂದರೂ ಅದೇಕೋ ಮುದಗೊಳ್ಳದೇ ಇದ್ದ ಮನಸ್ಸು ಹೇಮಂತ್ ರಾಗದ ಸ್ವರಗಳಿಗೂ, ಅದರ ಹುರುಪಿಗೂ ಮನಸೋತಿತು!

ಇಷ್ಟೆಲ್ಲ ಹೇಳಿ, ಹೇಮಂತ ರಾಗವನ್ನು ನಿಮಗೆ ಕೇಳಿಸದಿದ್ದರೆ ಹೇಗೆ? ಕೆಳಗೆ ನೋಡಿ-ಕೇಳಿ - ಶ್ರೀನಿವಾಸ್ ರೆಡ್ಡಿ ಅವರ ಸಿತಾರ್ ವಾದನದಲ್ಲಿ ಹೇಮಂತ್ ರಾಗದ ಆಲಾಪ:ಹಿಂದೂಸ್ತಾನಿ ವಾದ್ಯ ಸಂಗೀತದಲ್ಲಿ ರಾಗಗಳಿಗೆ ಆಲಾಪ್-ಜೋಡ್- ಮತ್ತು ಝಾಲಾ ಎನ್ನುವ ಮೂರು ಹಂತಗಳಿರುತ್ತವೆ. ಆಲಾಪವು ನಿದಾನಗತಿಯಲ್ಲಿದ್ದರೆ, ಜೋಡ್ ದುರಿತಗತಿಯಲ್ಲಿರುತ್ತೆ. ಹೇಮಂತ್ ರಾಗದ ನಿಜವಾದ ಹುರುಪು ನಿಮಗೆ ತ…

ಹೂ ಬಾಣ ಹಿಡಿದವಗೆ ಒಂದು ನಮನ

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಪೆ ಹೂ ಬಾಣಗಳ ಹಿಡಿದಿಹಗೆ

ಕೊ.ಕೊ: ಮನ್ಮಥನು ಅರವಿಂದ,ಅಶೋಕ, ನೀಲೋತ್ಪಲ, ಚೂತ, ನವಮಲ್ಲಿಕಾ - ಈ ಐದು ಹೂಗಳ ಬಾಣವನ್ನು ಹಿಡಿದು ವಸಂತ ಋತುವಿನಲ್ಲಿ ಬರುತ್ತಾನೆ ಎನ್ನುವುದು ಒಂದು ಕವಿ ಸಮಯ. ಅಂದಹಾಗೇ ಇವೆಲ್ಲ ನಿಜವಾದ ಹೂಗಳೇ :)

ಸಂಸ್ಕೃತ ಮೂಲ:

ಶಂಭುಃ ಸ್ವಯಂಭು ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕರ್ಮ ದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ

ಇದು ಭರ್ತೃಹರಿಯ ಶೃಂಗಾರಶತಕದ ಮೊದಲ ಪದ್ಯ.

-ಹಂಸಾನಂದಿ

ಜಾತಕ ಫಲ

ಸುಬ್ರಾಯರು ಮೇಜಿನ ಮೇಲೆ ಕುಳಿತು ಯಾರೋ ಕೇಳಿದ್ದ ಮದುವೆ ಮುಹೂರ್ತ ನೋಡುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬೆಳಗ್ಗೆ ಎಂಟರಿಂದ ಹತ್ತರೊಳಗೆ ಮಾಡಿ ಮುಗಿಸಿ ಆಮೇಲೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಕಿಟಕಿಯ ಹೊರಗೆ ಯಾರದೋ ಮಾತು ಕೇಳಿತು. ತಲೆಯೆತ್ತಿ ನೋಡಿದರೆ, ಕಿಟಕಿ ಹೊರಗೆ ಒಂದು ಮಾರು ಆಚೆ ಮೂಲೆಮನೆಯ ನಾಗರಾಜ.

ನಾಗರಾಜನ್ನ ಸುಬ್ರಾಯರು ಹುಟ್ಟಿದಾಗಿಂದ ನೋಡ್ತಾ ಬಂದಿದಾರೆ. ಒಳ್ಳೇ ಹುಡುಗ. ಚೆನ್ನಾಗಿ ಓದಿ ಒಳ್ಳೇ ಕೆಲಸದಲ್ಲಿದಾನೆ. ಯಾವಾಗ್ಲಾದ್ರೂ ಎದುರುಗಡೆ ಸಿಕ್ಕರೆ "ನಮಸ್ಕಾರ ಶಾಸ್ತ್ರಿಗಳೇ" ಅಂತ ಹೇಳೋದು ಮರೆಯೋದಿಲ್ಲ. ಅವರಮ್ಮ ನಾಗಲಕ್ಷ್ಮಿ ಸುಬ್ರಾಯರು ಕೆಲಸ ಮಾಡ್ತಿದ್ದ ಮೈನ್ ಮಿಡಲ್ ಸ್ಕೂಲ್ ನಲ್ಲೇ ಓದಿದ್ದವಳಲ್ಲವೇ! ಅವತ್ತಿಂದ ಗೊತ್ತಿರುವ ಕುಟುಂಬ. ಮೂರು ತಿಂಗಳ ಹಿಂದೆ ಮಗನಿಗೆ ಸಂಬಂಧಗಳು ಬರ್ತಿವೆ. ಯಾವುದಾದರೂ ಕೂಡಿ ಬಂದರೆ ಜಾತಕ ತೋರಿಸೋದಕ್ಕೆ ಬರ್ತೀನಿ ಎಂದು ನಾಗಲಕ್ಷ್ಮಿ ಹೇಳಿದ್ದು ನೆನಪಾಯಿತು ಸುಬ್ರಾಯರಿಗೆ.

ನಾಗರಾಜ ಯಾರ ಜೊತೆಯೋ ಮಾತಾಡ್ತಿದ್ದ ಮೊಬೈಲಲ್ಲಿ. ಅರ್ಧರ್ಧ ಕೇಳಿಸ್ತು ಸುಬ್ರಾಯರಿಗೆ

"ನಮಸ್ಕಾರ. ನಾನು ನಾಗರಾಜ -ಮೊನ್ನೆ ನಾವೆಲ್ಲ ನಿಮ್ಮ ಮನೇಗೆ ಬಂದಿದ್ವಲ್ಲ?"

"..."

ಆ ಕಡೆಯಿಂದ ಏನು ಉತ್ತರ ಬಂತೋ, ಸುಬ್ರಾಯರಿಗೆ ಕೇಳಲಿಲ್ಲ. ಆದ್ರೂ ಕುತೂಹಲದಿಂದ ಗಮನವಿತ್ತರು.

"ನಿಮ್ಮ ಮಗಳು ನನಗೆ ಬಹಳ ಇಷ್ಟವಾಗಿದ್ದಾರೆ. ಅವರಿಗೆ ನಾನು ಹಿಡಿಸಿದೀನಾ?"

&q…

ಹರಿ ಸ್ಮರಣೆ ಮಾಡೋ ನಿರಂತರ!

ರಾಮ ಅಂತೊಬಿದ್ದ. ಹುಂ. ಅವನ ಹೆಂಡತಿ ಸೀತೆ. ಹುಂ. ಹುಂ.
ಅಪ್ಪನ ಮಾತಿಗೆ ಪಂಚವಟೀ ದಡದಲ್ಲಿದ್ದಾಗ ರಾವಣ ಅವಳ ಕದ್ದ.
ನಿದ್ದೆ ಬರಲಮ್ಮನ ಕಥೆಯ ಹುಂಗುಟ್ಟುತಿಂತು ಕೇಳುತಿರುವ ಹರಿಯ
"ಲಕ್ಷ್ಮಣಾ ಬಿಲ್ಲೆಲ್ಲಿ ನನಬಿಲ್ಲು" ಎಂಬಾವೇಶದ ಮಾತೆಮ್ಮ ಕಾಯಲಿಂದುಸಂಸ್ಕೃತ ಮೂಲ:

ರಾಮೋ ನಾಮ ಬಭೂವ ಹುಂ ತದಬಲಾ ಸೀತೇತಿ ಹುಂ ತಾಂ ಪಿತುಃ
ವಾಚಾ ಪಂಚವಟೀ ತಟೇ ವಿಹರತಃ ತಸ್ಯಾಹರದ್ರಾವಣಃ ||
ನಿದ್ರಾರ್ಥಂ ಜನನೀ ಕಥಾಮಿತಿ ಹರೇಃ ಹುಂಕಾರತಃ ಶ್ರುಣ್ವತಃ
ಸೌಮಿತ್ರೇ ಕ್ವ ಧನುರ್ಧನುರಿತಿ ವ್ಯಗ್ರಾ ಗಿರಃ ಪಾತು ವಃ ||

-ಹಂಸಾನಂದಿ

ಪ್ರಾರ್ಥನೆಗೊಂದು ಬೇರೆ ಬಗೆ :)

ಅಯ್ಯೋ ಗಣೇಶ! ಯಾಕೋ ಅಳುವೆ? ನನ್ನ ಕಿವಿಗಳನ್ನ ಎಳೀತಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!


ಸಂಸ್ಕೃತ ಮೂಲ ಹೀಗಿದೆ;

ಹೇ ಹೇರಂಬ ಮದಂಬ ರೋದಿಷಿ ಕಥಂ ಕರ್ಣೌ ಲುಠತ್ಯಗ್ನಿಭೂಃ
ಕಿಂ ತೇ ಸ್ಕಂದ ವಿಚೇಷ್ಟಿತಂ ಮಮ ಪುರಾ ಸಂಖ್ಯಾ ಕೃತಾ ಚಕ್ಷುಷಾಂ
ನೈತತ್ತೇಹ್ಯುಚಿತಂ ಗಜಾಸ್ಯ ಚರಿತಂ ನಾಸಾ ಪ್ರಮೀತಾ ಚ ಮೇ
ತಾವೇವಂ ಸಹಸಾ ವಿಲೋಕ್ಯ ಹಸಿತವ್ಯಗ್ರಾ ಶಿವಾ ಪಾತು ವಃ

ಸಂಗೀತ ನವರಾತ್ರಿ - ವಿಜಯದಶಮಿ

Image
ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಎನ್ನುವ ರಚನೆ ಈ ವರ್ಷದ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.ಮೈಸೂರು ವಾಸುದೇವಾಚಾರ್ಯರು ಅವರ ಸಂಗೀತ ಪರಂಪರೆಯಂತೆ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲೇ ಕೃತಿಗಳನ್ನು ರಚಿಸಿದವರು. ಈ ಬಿಲಹರಿ ರಾಗದ ಕೃತಿಯಂತೂ ಸೊಗಸಾದ ರಚನೆ. ವಾಸುದೇವಾಚಾರ್ಯರ ಅತೀ ಪ್ರಸಿದ್ಧ ರಚನೆಗಲ್ಲಿದೂ ಒಂದು ಎಂದು ಖಂಡಿತ ಹೇಳಬಹುದು. ಈ ಹಾಡಿನ ಸಾಹಿತ್ಯ ಹೀಗಿದೆ.

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ
ಶೃತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರ ಮರ್ದಿನಿ|| ಪಲ್ಲವಿ||

ವಾಚಾಮಗೋಚರ ಮಹಿಮ ವಿರಾಜಿತೇ ವರಗುಣ ಭರಿತೇ
ವಾಕ್ಪತಿಮುಖಸುರವಂದಿತೇ ವಾಸುದೇವ ಸಹಜಾತೇ ||ಶ್ರೀ ಚಾಮುಂಡೇಶ್ವರಿ ಪಾಲಯಮಾಂ||

ರಾಕಾ ನಿಶಾಕರ ಸನ್ನಿಭ ವದನೇ ರಾಜೀವಲೋಚನೇ
ರಮಣೀಯ ಕುಂದರದನೇ ರಕ್ಷಿತಭುವನೇ ಮಣಿಸದನೇ
ಮೂಕವಾಕ್ಪ್ರದಾನವಿಖ್ಯಾತೇ ಮುನಿಗಣನುತ ಸುಪ್ರೀತೇ
ಶ್ರೀಕರ ತಾರಕ ಮಂತ್ರ ತೋಷಿತೆ ಚಿತ್ತೇ ಸದಾ ನಮಸ್ತೇ ||ಶ್ರೀ ಚಾಮುಂಡೇಶ್ವರಿ ಪಾಲಯಮಾಂ||

ಈ ರಚನೆಯನ್ನ ನೀವು ಕೆಳಗಿನ ಕೊಂಡಿಯನ್ನ ಚಿಟುಕಿಸಿ ಕೇಳಬಹುದು:

ಶ್ರೀ ಚಾಮುಂಡೇಶ್ವರಿ ಪಾಲಯಮಾಂ - ಎಂ.ಎಸ್.ಸುಬ್ಬುಲಕ್ಷ್ಮಿ ಅವರ ದನಿಯಲ್ಲಿ

ಈ ಕೃತಿಯ ಬಗ್ಗೆ ಯೋಚಿಸುತ್ತಿದ್ದಾಗಲೇ ಡ…

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು.

ವರ್ಷಕ್ಕೆ ಮುನ್ನೂರರ್ವತ್ತೆರಡು ದಿನ ಮನೆಯಿಲ್ಲದವರ ಮನೆ ಆಗಿತ್ತು ಆ ಮಂಟಪ ಅಂದೆನಲ್ಲ - ಅದು ಹೇಗೋ ವಿಜಯ ದ…

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ Smiling. ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು.

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.

ಈ ನವರಸಕನ್ನಡ ರಾಗದ ಕೃತಿಯ ಸಾಹಿತ್ಯ ಕನ್ನಡದಲ್ಲಿದೆ.

ದುರ್ಗಾದೇವಿ ದುರಿತನಿವಾರಿಣಿ ||ಪಲ್ಲವಿ||

ಸ್ವರ್ಗಾಪವರ್ಗ ಸೌಖ್ಯದಾಯಿನಿ ಸುರೇಶಪಾಲಿನಿ ಸಲಹು ಜನನಿ || ಅನುಪಲ್ಲವಿ||

ಪ್ರಾಣಾಗ್ನಿ ಸಂಯೋಗದಿ ಜನಿಸಿದ ಪ್ರಣವನಾದ ಸಪ್ತ ಸ್ವರ ರೂಪಿಣಿ

ವೀಣಾದಿ ವಾದ್ಯ ನೃತ್ಯ ಗಾನ ವಿನೋದಿನಿ ಹರಿಕೇಶ ಭಾಮಿನಿ || ಚರಣ||

ಅಂದಹಾಗೆ, ಮುತ್ತಯ್ಯ ಭಾಗವತರ ಕನ್ನಡ ರಚನೆಗಳಿಗೆ ಸಾಹಿತ್ಯವನ್ನು ಬರೆದವರು ಮೈಸೂರಿನ ದೇವೋತ್ತಮ ಜೋಯಿಸರು. ಈ ಹಾ…

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

ಇವತ್ತು ನವರಾತ್ರಿಯ ಏಳನೇ ದಿನ. ಮತ್ತೆ ಇವತ್ತೇ ಹೆಚ್ಚು ಜನರ ಮನೆಯಲ್ಲಿ ಸರಸ್ವತೀ ಪೂಜೆ ಕೂಡ. ಕೆಲವರು ಮಹಾನವಮಿಯ ಆಯುಧಪೂಜೆಯ ದಿನ ಸರಸ್ವತೀ ಪೂಜೆ ಮಾಡುವುದೂ ಉಂಟು. ಸರಸ್ವತಿ ಎಂದರೆ ನನಗೆ ನೆನಪಾಗುವುದು ಶೃಂಗೇರಿಯ ಶಾರದೆ. ಅದೆಂತಹ ಪ್ರಶಾಂತ ಸ್ಥಳ? ಅಲ್ಲಿ ದಸರೆಯ ಸಮಯದಲ್ಲಿ ನಡೆಯುವುವ ಪೂಜೆಗಳೂ ಹೆಚ್ಚಾಯದ್ದೇ. ಮಳಗಾಲ ಮುಗಿಯುತ್ತ ಬಂದಿರುವುದರಿಂದ ತಿಳಿಯಾಗಿ ಹರಿಯುವ ತುಂಗೆ. ಅದಕ್ಕೇ ಇರಬೇಕು ಶೃಂಗೇರಿಯ ಶಾರದೆಯ ಮೇಲಿರುವ ಸಂಗೀತ ರಚನೆಗಳಿಗೂ ಕೊರತೆ ಇಲ್ಲ.

ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಕನ್ನಡಕ್ಕೆ(ಭಾವಾನುವಾದದಲ್ಲಿ) ತಂದಿರುವೆ. ಓದಿ, ನಂತರ ಹಾಡು ಕೇಳಬಹುದು. ಅಲ್ಲವೇ?

ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು

(ಮೂಲ:

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ )

ಶಾರದೆಯೆ ನಮಿಸುವೆನು ಕಾಶ್ಮೀರದಲಿ ನೆಲೆಸಿಹಳೆ
ಕೋರುವೆನು ಅನುದಿನವು ಅರಿವು ತಿಳಿವನು ನೀಡು

(ಮೂಲ:

ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ಬುದ್ಧಿಂ ಚ ದೇಹಿಮೇ)

ಮೈಯ ಬಣ್ಣವೋ ಬೆಳ್ಪು ಮಂಜುಮಲ್ಲಿಗೆತಿಂಗಳನಿತು; ಬಿಳಿಯುಟ್ಟು
ಕೈಯಲಿ ಪೊಳೆವ ವರವೀಣೆ ಪಿಡಿದು ನಿಂದಿರುವೆ ಬೆಳ್ದಾವರೆಯಲಿ
ತಾಯೆ! ಆ ಬೊಮ್ಮಹರಿಶಿವರಿಂದಲೂ ಸಲ್ಲುವುದು ಪೂಜೆ ನಿನಗೆ!
ಕಾಯೆ ಸರಸತಿಯೆ ಇಂದೆನ್ನ ಕೈಬಿಡದೆ ಉಳಿಸದೇ ಅಲಸಿಕೆಯನು

(ಮೂಲ:

ಯಾ ಕುಂದೇಂದ…

ಸಂಗೀತ ನವರಾತ್ರಿ : ಆಶ್ವಯುಜ ಶುದ್ಧ ಷಷ್ಟಿ

ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ್ಟೂ ಮುಗಿಯುವಂತಿಲ್ಲವಲ್ಲ ಸಂಗೀತ ಸಾಗರ?

ಚಲಿಸದ ಸಾಗರ ಅಂತೊಂದು ಸಿನೆಮಾ ಬಂದಿತ್ತು - ನಾನು ನೋಡಿರಲಿಲ್ಲ. ಬಹುಶಃ ನದಿಗಳು ಹರಿಯುತ್ತವೆ, ಸಮುದ್ರ ಇದ್ದಲ್ಲೇ ಇರುತ್ತೆ ಎನ್ನುವುದು ಅದರ ಒಳಗಿನ ಭಾವ ಇರಬಹುದು. ಆದರೆ, ಈ ಸಂಗೀತ ಸಾಗರ ನಿಜವಾಗಿ ಬದಲಾಗುತ್ತ ಹೋಗುತ್ತಿರುತ್ತದೆ. ಹಾಗಾಗಿ ನಮ್ಮ ಸಂಗೀತದ ಕೆಲವು ಅಂಶಗಳು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿವೆಯಾದರೂ, ಮತ್ತೆ ಕೆಲವು ವಿಷಯಗಳು ಬದಲಾಗುತ್ತ ಹೋಗಿವೆ ಅನ್ನುವುದು ಬಲ್ಲವರ ಮಾತು.

ಸಂಗೀತದಲ್ಲಿ ಒಂದು ರಾಗ ಕೇಳಲು ಹಿತವಾಗಿರಬೇಕಾದರೆ, ಐದು ಸ್ವರಗಳಾದರೂ ಇರಬೇಕು - ಇಲ್ಲದಿದ್ದರೆ ಅದು ಸೊಗಸುವುದಿಲ್ಲ ಅನ್ನುವ ನಂಬಿಕೆ ಇತ್ತು. ಅದನ್ನು ಬುಡಮೇಲು ಮಾಡಿದವರು ೨೦ ನೇ ಶತಮಾನದ ಒಬ್ಬ ಮಹಾನ್ ಕಲಾವಿದರಾದ ಡಾ.ಬಾಲಮುರಳಿಕೃಷ್ಣ ಅವರು. ಒಮ್ಮೆ ಯಾವುದೋ ಲಹರಿಯಲ್ಲಿ ಹಾಡಿಕೊಳ್ಳುತ್ತಿದ್ದರಂತೆ - ಆಮೇಲೆ ಗಮನಿಸಿ ನೋಡಲು ಅದರಲ್ಲಿ ನಾಕೇ ಸ್ವರಗಳಿದ್ದುದ್ದನ್ನು ಕಂಡು, ಆ ರಾಗಕ್ಕೆ ಲವಂಗಿ ಎನ್ನುವ ಹೆಸರಿಟ್ಟು, ಒಂದು ಕೃತಿಯನ್ನು ರಚಿಸಿದರು. ಆನಂತರ, ಇದೇ ದಾರಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಿ, ಇನ್ನೂ ಕೆಲವು ಅದೇ ಬಗೆಯ ರಾಗಗಳನ್ನೂ, ಅವುಗಳಲ್ಲಿ ರಚನೆಯನ್ನೂ ಮಾಡಿದ್ದ…

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಂಚಮಿ

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ. ಅದರಲ್ಲೂ ದೇವೀ ಸ್ತುತಿಯ ಬಗ್ಗೆ ಹೇಳುವಾಗ ಇನ್ನೊಂದು ಅನುಕೂಲವಿದೆ. ಸ್ತ್ರೀ ಸಮಾನತೆ ಅದು ಇದು ಅಂತ ಯಾರು ಏನಾದರೂ ಹೇಳಿಕೊಂಡರೂ, ಸಂಗೀತವು ಸ್ವಲ್ಪ ಸ್ತ್ರೀ ಪಕ್ಷಪಾತಿ ಅನ್ನುವುದರಲ್ಲೆರಡು ಮಾತಿಲ್ಲ. ಎಲ್ಲ ಕಲೆಗಳಿಗೆ ಆಕರವೆಂದು ನಾವು ನಂಬಿರುವ ಸರಸ್ವತಿ ಹೆಣ್ಣಾಗಿರುವುದೇ ಇದಕ್ಕೆ ಕಾರಣವಿರ್ಬೇಕು. ಅದಿರಲಿ, ನಾನು ಏನು ಹೇಳೋದಕ್ಕೆ ಹೊರಟೆ ಅಂದರೆ ರಾಗಗಳ ಹೆಸರುಗಳಲ್ಲಿ ಹೆಣ್ಣಿನ ಹೆಸರು (ಅಥವಾ ವಿಶೇಷಣಗಳೇ) ಹೆಚ್ಚಿಗೆ ಇವೆ. ಆದ್ದರಿಂದ ದೇವಿಯ ಬಗ್ಗೆ ರಾಗಮಾಲಿಕೆ ಮಾಡಿ, ಅದರಲ್ಲಿ ರಾಗಗಳ ಹೆಸರುಗಳನ್ನು ಸೇರಿಸುವುದಕ್ಕೊಂದು ಒಳ್ಳೇ ಅವಕಾಶವಿದೆ.

ಈ ರೀತಿಯ ರಾಗಮಾಲಿಕೆಗಳಲ್ಲೊಂದಾದ ರಂಜನಿಮಾಲಾ ಬಗ್ಗೆ ಕಳೆದ ನವರಾತ್ರಿಯಲ್ಲಿ ಬರೆದಿದ್ದೆ. ಇದೇ ಅಲ್ಲದೆ ತರಂಗಂಬಾಡಿ ಪಂಚನದ ಅಯ್ಯರ್ ಅವರ ’ಆರಭಿ ರಾಗಪ್ರಿಯೇ ಶಂಕರಿ’ ಎಂಬ ಹದಿನಾರು ರಾಗಗಳ, ಪ್ರತಿಸಾಲಿನಲ್ಲೂ ರಾಗಮುದ್ರೆ ಇರುವ, ತಮಿಳು ಭಾಷೆಯಲ್ಲಿರುವ ರಾಗಮಾಲಿಕೆ ಜನಪ್ರಿಯವಾಗಿದ್ದು, ಇದರ ಕನ್ನಡ ಅನುವಾದವೂ ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತದಲ್ಲಿದೆ. ಮುತ್ತುಸ್ವಾಮಿ ದೀಕ್ಷಿತರ ’ಪೂರ್ಣಚಂದ್ರಬಿಂಬ ವಿಜಯವದನೇ’ ಎಂಬ ಆರು ರಾಗಗಳ ರಾಗಮಾಲಿಕೆಯೂ ಸೊಗಸಾಗಿದ್ದು, ಅ…

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಲಲಿತಾ! ಆ ಹೆಸರೇ ಒಂದು ಇನಿದಾದ ಹೆಸರು. (ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಮಾತಲ್ಲ ಇದು!)

ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈಲಜಾ,ಶಂಕರಿ,ಕಾಳಿ, ದುರ್ಗಾ,ಗೌರಿ ಮೀನಾಕ್ಷಿ,ವಿಶಾಲಾಕ್ಷಿ ಇಂತಹವೆಲ್ಲ ಒಂದೋ ದೇವಿಯು ಪರ್ವತರಾಜನ ಮಗಳು, ಶಿವನ ಹೆಂಡತಿ ಎನ್ನುವುದನ್ನೋ, ಅಥವಾ ಅವಳ ಬಣ್ಣವನ್ನೋ, ಕಣ್ಣನ್ನೋ ವರ್ಣಿಸುತ್ತವೆ. ಆದರೆ ಎಲ್ಲ ಗುಣಗಳನ್ನೂ ಒಟ್ಟುಸೇರಿಸುವಂತಹ ಒಂದು ಹೆಸರಿದ್ದರೆ ಅದು ಲಲಿತಾ ಎಂಬ ಹೆಸರು.

ಲಲಿತೆ ಎಂದರೆ ಚೆಲುವೆ. ಲಲಿತೆ ಎಂದರೆ ಇಂಪು. ಲಲಿತೆ ಎಂದರೆ ಕೋಮಲೆ. ಲಲಿತೆ ಎಂದರೆ ಮನಸ್ಸಿಗೆ ಆಕರ್ಷಣೆ ತರುವವಳು. ಲಲಿತೆ ಎಂದರೆ ವಿನೋದ, ಸರಸ - ಹೀಗೆ ಲಲಿತಾ ಎಂಬ ಪದದ ಅರ್ಥ ಇವೆಲ್ಲವನ್ನೂ ಒಳಗೊಂಡು ಒಂದು ಪೂರ್ಣ ರೂಪವನ್ನು ಕಣ್ಣುಮುಂದೆ ತರುವಂತೆ ಇನ್ನಾವ ಪದವೂ ತರಲಾರದು. ಇದೇ ಕಾರಣಕ್ಕೇ ಇರಬೇಕು - ದೇವಿಯ ಸಾವಿರ ಹೆಸರುಗಳಿಗೆ ’ಲಲಿತಾ ಸಹಸ್ರನಾಮ’ ಎನ್ನುವರೇ ಹೊರತು ಪಾರ್ವತಿ ಸಹಸ್ರನಾಮ ಅಥವಾ ಗೌರಿ ಸಹಸ್ರನಾಮ ಎನ್ನರು!

ಇಷ್ಟೆಲ್ಲರ ಜೊತೆಗೆ ಲಲಿತಾ ಎನ್ನುವುದು ಒಂದು ರಾಗದ ಹೆಸರೂ ಕೂಡ. ಹಾಗಿದ್ದಮೇಲೆ ನವರಾತ್ರಿಯ ನಾಲ್ಕನೇ ದಿನ, ನಾನು ಲಲಿತಾ ರಾಗದ ಒಂದು ರಚನೆಯನ್ನು ಕೇಳಿಸುವುದರಲ್ಲಿ ಆಶ್ಚರ್ಯವೇನಿದೆ, ಅಲ್ಲವೆ?

ಆ ರಚನೆಯ ತಿಳಿವು ಚೆನ್ನಾಗಿ ಆಗಲೆಂದು ಕನ್ನಡಕ್ಕೆ ಹೀಗೆ ಅನುವಾದಿಸಿರುವೆ:

ಪಲ್ಲವಿ:

ಎನ್ನ ಕಾಯೇ ಲಲಿತೇ ತಡಮಾಡದೆ
ನಿನ್ನ ನೆರೆನಂಬಿಹನು ನಾನಲ್ಲವೇನೇ ?
ಮುನ್ನ ಅಣುಗರಾಸೆ ತೀರ್ಪ…