Posts

Showing posts from January, 2009

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

Image
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅನ್ನೋದು ನಿಜ ಹೇಳ್ಬೇಕಾದ್ರೆ, ಯಾವ ರೀತಿಯಲ್ಲೂ ವಾದ ಮಾಡೋ, ಪ್ರಶ್ನೆ ಮಾಡೋ ಅಂತಹ ಸಂಗತಿ ಅಲ್ವೇ ಅಲ್ಲ. ಯಾಕಂದ್ರೆ, ಎಲ್ಲ ಭಾಷೆಗಳಿಗೂ ಅವವುಗಳ ವ್ಯಾಕರಣ, ವಾಕ್ಯಗಳನ್ನ ಮಾಡುವ ಶೈಲಿ ಇದ್ದೇ ಇರುತ್ತೆ. ಇರಬೇಕು. ಇಲ್ದೇ ಹೋದ್ರೆ, ಏನಾಗುತ್ತೆ? ನಮ್ಮ ಮಾತೆಲ್ಲ ಹೋಪ್ ಲೆಸ್ ಕನ್ನಡ ಚಾನಲ್ ಗಳಲ್ಲಿ ಬರೋ ಇನ್ನೂ ಹೋಪ್ ಲೆಸ್ ಜಾಹೀರಾತುಗಳ ತರಹ ಆಗುತ್ತೆ ಅಷ್ಟೇ. ಶಂಕರಭಟ್ಟರ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎನ್ನುವ ಪುಸ್ತಕದ ಬಗ್ಗೆ ಬಹಳ ಓದಿದ್ದರೂ, ಈ ಪುಸ್ತಕ ಓದಲು ಸಿಕ್ಕಿದ್ದು ಈಚೆಗೆ. ಇಲ್ಲಿರುವ ಹಲವು ವಿಚಾರಗಳನ್ನು ಮೊದಲೇ ಆಲ್ಲಿಲ್ಲಿ ಓದಿದ್ದುಂಟು - ಆದರೆ ಒಟ್ಟಿಗೆ ಓದುವ ಅನುಭವವೇ ಬೇರೆ. ಇದರಲ್ಲಿ ನನಗೆ ಹಿಡಿದಿದ್ದು ಈ ಕೆಳಗಿನ ಅಂಶಗಳು - ನೆನಪಿಗೆ ಬಂದಷ್ಟನ್ನು ಮಾತ್ರ ಬರೆದಿರುವೆ: ೧. ಕನ್ನಡ ವಿಭಕ್ತಿಗಳ ಬಗ್ಗೆ ಚರ್ಚೆ - ಹೇಗೆ ಕನ್ನಡದಲ್ಲಿ ಏಳು ವಿಭಕ್ತಿಗಳು ಇಲ್ಲ (ಅಥವಾ ಬೇಕಾಗಿಲ್ಲ) ಅನ್ನುವುದನ್ನು ಅವರು ಉದಾಹರಣೆಗಳ ಸಮೇತ ಬರೆದಿರುವ ರೀತಿ. ಹಿಂದಿನವರ ವಾದದಂತೆ ಕನ್ನಡದಲ್ಲಿ ಐದನೇ ವಿಭಕ್ತಿ ಇಲ್ಲ, ಮೂರನೇ ವಿಭಕ್ತಿ ಮಾತ್ರ ಇದೆ - ಅನ್ನುವುದರ ಬದಲಿಗೆ ಶಂಕರ ಭಟ್ಟರು ಕನ್ಡಡದಲ್ಲಿರುವ ಬಳಕೆಯನ್ನು ಐದನೇ ವಿಭಕ್ತಿ ಎಂದು ಹೇಳುವುದೇ ಒಳಿತೆಂದಿದ್ದಾರೆ. (ಅವರು ಇದಕ್ಕೆ ಒಂದನೇ, ಎರಡನೇ, ಇತ್ಯಾದಿ ಹೆಸರು ಬಳಸಿಲ್ಲ - ಅದು ಬೇರೆ ವಿಚಾರ) ೨. ಕನ್ನಡದ ಸಮಾಸಗಳ ಮತ್ತು ಪದಕ…

ಚೆಂಬೆಳಗಿನಲ್ಲೊಂದು ಸ್ವಗತ

Image
ಎಲ್ಲರೂ ಹೇಳುವರು
ಬರುತಲಿದೆ ಪ್ರತಿದಿನವು
ರವಿಯ ಉದಯದ ಒಡನೆ
ಭರವಸೆಯ ಮುಂಜಾವು.

ನಂಬಬಹುದೇ? ಇದನು?
ಓ ಗೆಳೆಯ*?
ಬಾನಿನಲಿ ಅನುದಿನವು
ಸುತ್ತಿಯೂ ಸುತ್ತುತಿಹೆ?
ದಿನವೂ ನನ್ನ ಮೊಗ
ನೋಡಿಯೂ ನೋಡದೆಲೆ
ಮುಂದೆ ಸರಿಯುವ ನಿನಗೆ
ಮುಗುಳು ನಗೆ ಈಗೇಕೆ?
ಚಿತ್ರ: ಹರಿಪ್ರಸಾದ್ ನಾಡಿಗ್
ಹೇಳಬಲ್ಲೆಯ ನೀನು
ಬರುತಿರುವ ಈ ದಿನವು
ಹಳೆಯದನು ಮರೆಸುವುದೆ?
ಹೊಸತನ್ನು ತೆರೆಸುವುದೆ?
ಕಹಿಗಳ ಕರಗಿಸುವುದೆ?
ಸಿಹಿಯನ್ನು ಉಣಿಸುವುದೆ?ಕಂಡವರು ಯಾರೋ?
ಪ್ರಶ್ನೆಗಳೆ ಇಲ್ಲೆಲ್ಲ!
ನಗಲೆ? ಅಳಲೆ? ಇಲ್ಲ
ಬಿಟ್ಟುಬಿಡಲೆ ಎಲ್ಲ?
ಕಣ್ಣ ಮುಚ್ಚಲು ಒಮ್ಮೆ
ಒಳಗೆಲ್ಲ ಕತ್ತಲೆ.ಅರೇ! ಕಣ್ಣ ಬಿಟ್ಟೊಡನೆ
ಕತ್ತಲೆಯಿಂದ ಬೆಳಕಿಗೆ.
ಒಣಗಿರುವ ಮರದಲ್ಲೆ
ಚಿಗುರು ಕಾಣುವುದಲ್ಲ?
ಚಿಗುರು ಹೂವಾಗಿ
ಕಾಯಿ ಹಣ್ಣಾಗಿ
ಹಣ್ಣು ಬೀಜದಿ ಮತ್ತೆ
ಮೊಳಕೆ ಹುಟ್ಟಿದರೆ
ಗಿಡವಾಗಿ ಚಿಗುರುಮತ್ತೆ ಹೊಸ ಹುಟ್ಟು
ಮತ್ತೆ ಜೀವನ ಚಕ್ರ
ಸುತ್ತಿದರೆ ಏನಂತೆ?
ಕಳೆದದ್ದೂ ಕಳೆದಿರಲಿ
ಮುನ್ನಡೆವ ಛಲವಿರಲಿ!ಈಗ ನನಗನಿಸುತಿದೆ
ಬರುತಿಹುದು ಪ್ರತಿದಿನವು
ರವಿಯ ಉದಯದ ಒಡನೆ
ಚೆಂಬೆಳಗು ಮುಂಜಾವು
ಭರವಸೆಯ ಮುಂಜಾವು-ಹಂಸಾನಂದಿ

ಇಂದಿನ ದಿನವೇ ಶುಭದಿನವು

Image
ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವರನ್ನು ನೆನೆಯೋದಕ್ಕೆ ಪಂಚಾಂಗ ನೋಡ್ಬೇಕಿಲ್ಲ. ಯಾಕಂದ್ರೆ, ಎಂದು ನಾವು ಹರಿಯನ್ನು ನೆನ್ನೆಯುತ್ತೇವೋ ಅವತ್ತಿನ ದಿನ ಚೆನ್ನಾಗೇ ಆಗುತ್ತೆ ಅನ್ನೋದು ಪುರಂದರದಾಸರ ಅಭಿಪ್ರಾಯ. ಹಾಗೇ, ಪುರಂದರದಾಸರಂತಹ ಮಹನೀಯರನ್ನ ನೆನೆಯೋದಕ್ಕೆ ಕೂಡ, ಯಾವ ದಿನವಾದರೂ ಒಳ್ಳೇದೇ. ಆದರೂ, ಅಂಥವರನ್ನ ಅವರು ಹುಟ್ಟಿದ ದಿನದಂದೋ, ಅಥವಾ ಅವರ ಜೀವನದ ಯಾವುದಾದರೂ ಮಹತ್ವದ ಘಟನೆ ನಡೆದ ದಿನ ನೆನೆಸಿಕೊಳ್ಳೋದು ಸಂಪ್ರದಾಯವಾಗಿ ಬಂದಿದೆ. ಅಂತಹ ದಿನಗಳು ನಮಗೆ ಇಂಥಾ ಹಿರಿಯ ಜೀವಗಳು ತಮ್ಮ ಬಾಳಿನಲ್ಲಿ ನಡೆದು ತೋರಿದ ದಾರಿಯನ್ನೊಮ್ಮೆ ಮತ್ತೊಮ್ಮೆ ವಿವರವಾಗಿ ನೋಡೋದಕ್ಕೆ ಒಂದು ಅವಕಾಶ ಕೊಡುತ್ತವೆ. ಇವತ್ತು ಪುರಂದರ ದಾಸರ ಆರಾಧನೆ ( ಜನವರಿ ೨೫, ೨೦೦೯, ಪುಷ್ಯ ಬಹುಳ ಅಮಾವಾಸ್ಯೆ) ಆಗಿರೋದ್ರಿಂದ, ಅವರ ಕೆಲವು ಮಾತುಗಳನ್ನೋ ಓದೋದು, ಅಥವಾ ಕೇಳೋದು ಮಾಡೋದು ಒಳ್ಳೇದು ಅಂತ ನನ್ನನಿಸಿಕೆ.

ಪುರಂದರ ದಾಸರನ್ನು ಕರ್ನಾಟಕದ ಹರಿದಾಸ ಪರಂಪರೆಯ ನಾಲ್ಕು ಆಧಾರ ಸ್ತಂಭಗಳಲ್ಲೊಬ್ಬರು ಎಂದು ಕರೆಯುವ ವಾಡಿಕೆ. ಒಂದು ಸಂಸ್ಕೃತ ಶ್ಲೋಕ ಈ ನಾಲ್ಕು ದಾಸ ವರೇಣ್ಯರನ್ನು ಹೀಗೆ ಸ್ಮರಿಸುತ್ತದೆ:

ನಮ: ಶ್ರೀಪಾದರಾಜಾಯ ನಮಸ್ತೇ ವ್ಯಾಸ ಯೋಗಿನೇ |
ನಮ: ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮ…

ಮೈಕಲ್ ವುಡ್ ನ ’ದ ಸ್ತೋರಿ ಆಫ್ ಇಂಡಿಯಾ’ ದ ತಪ್ಪು ಚಿತ್ರಣಗಳು

ಇತ್ತೀಚೆಗೆ ಪಿ.ಬಿ.ಎಸ್ ದಲ್ಲಿ ಮೈಕಲ್ ವುಡ್ ಎಂಬಾತನ ’The Story of India' ಎನ್ನುವ ಸಾಕ್ಷ್ಯ ಚಿತ್ರ ಪ್ರಸಾರವಾಯಿತು.

ಒಂದು ಗಂಟೆಯ ಆರು ಪ್ರಕರಣಗಳಲ್ಲಿ, ಭಾರತದ ೬೦೦೦ ವರ್ಷಗಳ ಚರಿತ್ರೆಯನ್ನು ತೋರಿಸುವ ಪ್ರಯತ್ನ ಇದಾಗಿತ್ತು. ಇಂಟರ್ನೆಟ್ ನಲ್ಲಿ ಈ ಪುಸ್ತದ ಮೇಲೆ, ಚಿತ್ರದ ಬಗ್ಗೆ ಒಳ್ಳೇ ಅಭಿಪ್ರಾಯಗಳನ್ನು ಓದಿದ್ದ ನಾನು ಇದನ್ನು ನೋಡಲು ಕಾತುರನಾಗಿದ್ದಂತೂ ಹೌದು.

ಆದರೆ, ನೋಡಿದ ಮೇಲೆ ನಿರಾಸೆಯಾಗಿದ್ದಂತೂ ನಿಜ.

ಹಿಂದೆ ಇರುತ್ತಿದ್ದಿದ್ದಕ್ಕಿಂತ ಸ್ವಲ್ವ ದನಿಯ ಬದಲಾವಣೆ ಇರುವುದಾದರೂ (ಉದಾಹರಣೆಗೆ ವಿಜ್ಞಾನಕ್ಕೆ ಭಾರತದ ಕೊಡುಗೆ ಗಳನ್ನು ಗುರುತಿಸಿರುವುದು), ಇಂತಹ ಮಟ್ಟದಲ್ಲಿ ತೆಗೆಯಬೇಕಾದ ಚಿತ್ರವೊಂದರಲ್ಲಿ ಇರಬಾರದಷ್ಟು ತಪ್ಪುಗಳು ತುಂಬಿವೆ.

ಮೇಲುನೋಟಕ್ಕೇ ಕಂಡ ಕೆಲವನ್ನು ನನ್ನ ಇಂಗ್ಲಿಷ್ ಬ್ಲಾಗಿನಲ್ಲಿ ಹಾಕಿರುವೆ - ಆಸಕ್ತರಿಗೆ ಕೊಂಡಿ ಇಲ್ಲಿದೆ:

What's Wrong With Michael Wood's 'The Story of India'-ಹಂಸಾನಂದಿ

ನಕ್ಷತ್ರಗಳಿಗೆ ಹೆಸರು ಕೊಟ್ಟಿರೋದು ಹೇಗೆ?

Image
ನಾನು ಹೇಳ್ತಿರೋದು ಬಾಲಿವುಡ್, ಹಾಲಿವುಡ್ ಅಥ್ವಾ ಸ್ಯಾಂಡಲ್ವುಡ್ ನಕ್ಷತ್ರಗಳ ಬಗ್ಗೆ ಅಲ್ಲ ಸ್ವಾಮಿ. ಆದ್ರೂ ನಮ್ಗೆಂತಹ ಕಾಪೀಕ್ಯಾಟ್ ಮನೋಭಾವ ಅಲ್ವಾ? ಹಾಲಿವುಡ್ ನ ಕಾಪಿ ಮಾಡಿ ಬಾಂಬೇನವರು ಬಾಲಿವುಡ್ ಅಂದ್ರೆ, ನಮ್ಮೋರು ಅದನ್ನೂ ಕಾಪಿ ಮಾಡ್ಬೇಕಾ? ಈ ರೀತಿ ಕಾಪೀ ಮಾಡಿದ್ದನ್ನ ಕಾಪೀ ಮಾಡಿ, ಆಮೇಲೆ ನಮ್ಮ ಚಿತ್ರಗಳನ್ನ ಕನ್ನಡಿಗರು ಪ್ರೋತ್ಸಾಹಿಸಲ್ಲ ಅಂತಾರಲ್ಲ ಸಿನಿಮಾ ಮಂದಿ, ಅದಕ್ಕೇನು ಹೇಳೋಣ?(ಚಿತ್ರ: ಮಹಾವ್ಯಾಧ (ಒರೈಯನ್) ತಾರಾಪುಂಜ. ಇದಕ್ಕೆ ಅಜ್ಜಿ ಮಂಚದಡೀಲಿ ಮೂರು ಜನ ಕಳ್ಳರು ಅಂತಲೂ ನಮ್ಮ ಹಳ್ಳೀ ಕಡೆ ಹೇಳ್ತಾರಂತೆ)

ಅದಿರ್ಲಿ. ಏನೋ ಹೇಳಕ್‍ಹೊರಟು ಇನ್ನೇನೋ ಹೇಳೋದು ನನಗೊಂದು ಚಟವೋ ಕಾಯಿಲೆನೋ ಗೊತ್ತಾಗ್ತಿಲ್ಲ. ಬಿಟ್‍ಹಾಕಿ ಅದನ್ನ. ಈಗ ನಾನು ಮಾತಾಡ್ತಿರೋದು ನಿಜವಾಗಿ, ಅಂದ್ರೆ ಆಕಾಶ್ದಲ್ಲಿ ಹೊಳೆಯೋ ನಕ್ಷತ್ರಗಳ ಬಗ್ಗೆ. ಒಂದು ದಿನ ಚಂದ್ರ ಇಲ್ದೇ ಇರೋವಾಗ ಒಂದು ಕತ್ತಲಾಗಿರೋ ಜಾಗಕ್ಕೆ ಹೋಗಿ ತಲೆ ಎತ್ತಿ ನೋಡಿ. ಎಷ್ಟೋ ನಕ್ಷತ್ರಗಳು ಹೊಳೀತಾ ಇರುತ್ತವೆ. ಒಂದೊಂದೂ ಒಂದೊಂದು ಬಣ್ಣ! ಒಂದೊಂದು ವಿಧ. ಮುಖ್ಯವಾಗಿ ನೀವು, ನೀಲಿ (ಅಥವಾ ನೀಲಿಬಿಳಿ), ಬಿಳಿ, ಹಳದಿ (ಅಥವಾ ಮಾಸಲು ಹಳದಿ ಅನ್ನೋಣ), ಕೇಸರಿ, ತಿಳಿಗೆಂಪು ಮತ್ತೆ ಕಡುಗೆಂಪು ಬಣ್ಣದ ನಕ್ಷತ್ರಗಳನ್ನ ಸುಲಭವಾಗಿ ಗುರ್ತಿಸಬಹುದು. ಕೆಲವು ಹೆಚ್ಚು ಬೆಳಗ್ತಿದ್ರೆ ಕೆಲವು ಕಡಿಮೆ. ಆದ್ರೆ, ಎಲ್ಲಾ ತಾರೆಗಳಿಗೂ ಹೆಸರುಗಳಿವೆಯೇ ಅಂತ ನೀವು ಯಾವತ್ತಾದ್ರೂ ಯೋಚಿಸಿದ್ರಾ?

ಬಹಳ ಪ್ರಕಾಶಮ…

ಆರ್ ಕೆ ಶ್ರೀಕಂಠನ್ ಅವರೊಂದಿಗೊಂದು ಮಾತುಕತೆ - ತ್ಯಾಗರಾಜ ಆರಾಧನೆಯ ವಿಶೇಷ

Image
( ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ ಅವರನ್ನು ಸುಲಭವಾಗಿ ಭೇಟಿ ಮಾಡಬಹುದು. ಮಾತಾಡಬಹುದು. ನಮ್ಮೂರಲ್ಲೇ ಇದ್ದರೆ ಅದು, ಅಸಾಧ್ಯವಲ್ಲದಿದ್ದರೂ ಸ್ವಲ್ಪ ಕಷ್ಟವೇನೋ ಅನ್ನಿಸುತ್ತೆ. ಅದೇ ಕಾರಣಕ್ಕೋ ಏನೋ, ನನಗೂ ಎಷ್ಟೋ ಹೆಸರುವಾಸಿಯಾದವರನ್ನು ನೋಡಿ ಮಾತಾಡಿಸೋ, ಇನ್ನೂ ಹೆಚ್ಚು ಅಂದ್ರೆ ಅವರನ್ನೊಮ್ಮೆ ಮನೆಗೆ ಕರೆದು ಸತ್ಕರಿಸುವ ಭಾಗ್ಯವೂ ಕಳೆದ ಕೆಲವು ವರ್ಷಗಳಲ್ಲಿ ದಕ್ಕಿದೆ .

ಜನವರಿ ೧೫, ೨೦೦೯ ರಂದು ಪುಷ್ಯ ಬಹುಳ ಪಂಚಮಿ. ತ್ಯಾಗರಾಜರ ಆರಾಧನೆ. ಅವತ್ತಿಗೆ ಸರಿಯಾಗಿ, ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರಿದ, ಹಿರಿಯ ವಿದ್ವಾಂಸರಾದ ಸಂಗೀತ ಕಲಾನಿಧಿ ಡಾ.ಆರ್.ಕೆ. ಶ್ರೀಕಂಠನ್ ಮತ್ತು ಅವರ ಮಗ ಸಂಗೀತ ವಿದ್ವಾಂಸರಾದ ಆರ್.ಕೆ. ರಮಾಕಾಂತ್ ಅವರೊಡನೆ (ಮೇ ೨೦೦೮ ರಲ್ಲಿ ಅವರು ಕ್ಯಾಲಿಫೋರ್ನಿಯಾಗೆ ಭೇಟಿ ಕೊಟ್ಟಿದ್ದಾಗ) ನಾನು ಗೆಳೆಯರೊಬ್ಬರೊಡನೆ ಕೂಡಿ ನಡೆಸಿದ ಸಂದರ್ಶನದ ಸಾರಾಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳಸಂತೋಷವಾಗುತ್ತಿದೆ.

ಅಂದ ಹಾಗೆ, ಜನವರಿ ೧೪ ಶ್ರೀಕಂಠನ್ ಅವರ ಹುಟ್ಟಿದ ದಿನ ಕೂಡ.

ಈ ಸಂದರ್ಶನವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸ್ವರ್ಣಸೇತು-೨೦೦೮ ಸಂಚಿಕೆಯಲ್ಲಿ ಪ್ರಕಟವಾಗಿದೆ.
-ಹಂಸಾನಂದಿ
)

ಸಂದರ್ಶಕರು:ನಮಸ್ಕಾರ ಶ್ರೀಕಂಠನ್ ಮ…

ತಿರುವೈಯ್ಯಾರು, ಮಿಶನ್ ಸ್ಯಾನ್ ಹೋಸೆ ಮತ್ತು ಚಾರಿತ್ರಿಕ ತಿಳಿವು

Image
ಈ ವರ್ಷ ಜನವರಿ ೧೫ರಂದು ಪುಷ್ಯ ಬಹುಳ ಪಂಚಮಿ - ತ್ಯಾಗರಾಜರ ಆರಾಧನೆಯ ದಿನ. ಅದಕ್ಕಾಗಿ, ಜೂನ್ ೨೦೦೭ ರಲ್ಲಿ ಸಂಪದದಲ್ಲಿ ಹಾಕಿದ್ದ ಬರಹವೊಂದನ್ನು, ಸಣ್ಣಪುಟ್ಟ ಬದಲಾವಣೆಗಳೊಡನೆ ಮತ್ತೆ ಇಲ್ಲಿ ಹಾಕುತ್ತಿರುವೆ.

-----------------------------------------------------------------------------------------------------

ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ಕರ್ನಾಟಕದಲ್ಲಾದರೋ ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.

ಎಲ್ಲ ನದಿಗಳೂ ಸಾಮಾನ್ಯ ಸಮುದ್ರ ಸೇರುವ ಬಳಿ ಕವಲೊಡೆದು, ಹಲವು ಭಾಗಗಳಾಗುತ್ತವೆ. ಕಾವೇರಿಯೂ ಇದಕ್ಕೆ ಹೊರತಲ್ಲ. ತಮಿಳುನಾಡಿನ ತಿರುಚ್ಚಿರಾಪಳ್ಳಿಯ ಬಳಿ ಕಾವೇರಿ ಐದು ಭಾಗಗಳಾಗಿ ಒಡೆಯುತ್ತಾಳೆ. ಈ ಶಾಖೆಗಳಿಗೆ ಕಾವೇರಿ, ವೆಣ್ಣಾರ್, ವೆಟ್ಟಾರ್, ಕೊಡಮುರುಟಿ ಮತ್ತು ಕೊಲ್ಲಿಡಮ್ ಎಂದು ಹೆಸರಾಗುತ್ತದೆ. ಇಲ್ಲಿ ಒಂದು ವಿಷಯ ಹೇಳಬೇಕು. ವೆಣ್ಣಾರ್, ವೆಟ್ಟಾರ್ ಎಂಬಲ್ಲಿ ಬರುವ ರ ಕಾರ, ಹಳೆಗನ್ನಡದ ಶಕಟರೇಫ (ಱ್); ಮತ್ತೆ, ಈ ಪದಗಳು ರ್ ಎನ್ನುವ ವ್ಯಂಜನದಿಂದ ಕೊನೆಯಾಗಿಲ್ಲ. ಬದಲಿಗೆ, ಅರ್ಧ ಉಕಾರದಲ್ಲಿ ಮುಗಿಯುತ್ತ…

ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?

ಅಂಗಡೀಗೆ ಹೋದಾಗ ಪ್ರತೀಸಲ ಈ ಪ್ರಶ್ನೆಗೆ ಪೇಪರ್ ಅಂತ ಹೇಳಿ ಏನೋ ಘನಾಂದಾರಿ ಕೆಲಸ ಮಾಡ್ತೀನಿ ಅಂದ್ಕೋತಿದ್ದೆ. ಎಷ್ಟೇ ಅಂದ್ರೂ ಪ್ಲಾಸ್ಟಿಕ್ ಗಿಂತ ಪೇಪರ್ ವಾಸಿ ಅಂತ.

ಆದ್ರೆ ಈಗನ್ನಿಸ್ತಿದೆ - ನಾವು ಚಿಕ್ಕೋರಾಗಿದ್ದಾಗ ಬಳಸ್ತಿದ್ದ ಹಾಗೆ ಮರುಬಳಕೆ ಮಾಡೋಕಾಗೋ ಅಂತಹ ಬಟ್ಟೆಯ ಚೀಲವನ್ನೋ ಅಥವಾ ಪ್ಲಾಸ್ಟಿಕ್ ಬುಟ್ಟಿಯನ್ನೋ ಉಪಯೋಗಿಸ್ಬೇಕು ಅಂತ. ನೋಡ್ಬೇಕು ಎಷ್ಟು ಪಾಲಿಸಕ್ಕಾಗುತ್ತೋ ಅಂತ.

ಒಂದು ಸಲ ಈ ಬರಹ ಓದಿ - ಪೇಪರ್ ಚೀಲಗಳ ಅನಾಹುತ ತಿಳಿಯೋಕೆ.

ಸಾಧ್ಯವಾದರೆ ಮರುಬಳಕೆ ಮಾಡೋಕಾಗೋ ಚೀಲಗಳನ್ ಬಳಸೋದಕ್ಕೆ ಶುರು ಮಾಡೋಣ್ವಾ? ಹನಿ ಹನಿಗೂಡಿದ್ರೆ ಹಳ್ಳ ಆದ್ರಿಂದ, ಎಲ್ರೂ ಅವರವರಿಗಾಗೋ ಅಷ್ಟು ಮಾಡಿದರೆ ಎಷ್ಟೋ ಒಳ್ಳೇದು.

-ಹಂಸಾನಂದಿ

ಹಂಸನಾದ ಅಂದ್ರೇನು?

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅಂತ. ಮತ್ತೆ ಹಾಗಾದ್ರೆ "ಹಂಸನಾದ ಅಂದ್ರೇನು?" ಅಂದ್ರು. ಹ್ಹ ಹ್ಹ - ಅದೂ ಒಂದು ಒಳ್ಳೇ ರಾಗ, ಮತ್ತೆ ಅದರ ಹೆಸರಲ್ಲೂ ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಬರತ್ತೆ ಅಂದೆ.

ಅದಿರಲಿ. ಏನೋ ನೋಡ್ತಿದ್ದಾಗ ಈ ವಿಡಿಯೋ ಸಿಕ್ತು. ನೀವೂ ಕೇಳಿ ಅಂತ ಹಾಕ್ತಿದೀನಿ. ನುಡಿಸಿರೋದು ಕೊಳಲು ಮೇಧಾವಿ ಶಶಾಂಕ್. ಅಂದಹಾಗೆ, ಇವರೂ ಮೊದಲಿಗೆ ನಮ್ಮೂರಿನೋರೇ ಅನ್ನೋದು ನನಗೊಂದು ಹೆಮ್ಮೆಯೇ. ನುಡಿಸ್ತಾ ಇರೋ ರಚನೆ, ಹಂಸನಾದ ರಾಗದಲ್ಲಿರೋ ತ್ಯಾಗರಾಜರ - ಬಂಟುರೀತಿಕೊಲುವಿಯವಯ್ಯ ರಾಮ ಅನ್ನೋ ರಚನೆ.
ಹಂಸನಾದವನ್ನು ಕೇಳಿಸಿದಮೇಲೆ, ಹಂಸಾನಂದಿಗೆ ಯಾಕೆ ಮೋಸ ಮಾಡ್ಬೇಕಲ್ವಾ? ಇಲ್ಲಿ ನೋಡಿ, ಸಂಧ್ಯಾರಾಗ ಚಿತ್ರದಿಂದ ’ಈ ಪರಿಯ ಸೊಬಗು’ ಎನ್ನುವ ಪುರಂದರ ದಾಸರ ರಚನೆ. ಹಾಡಿರೋದು ಭಾರತರತ್ನ ಭೀಮಸೇನ ಜೋಶಿ ಮತ್ತು ಡಾ.ಬಾಲಮುರಳೀಕೃಷ್ಣ. ದಕ್ಷಿಣಾದಿ ಮತ್ತು ಉತ್ತರಾದಿ - ಎರಡೂ ಬಗೆಗಳ ಸಮ್ಮಿಳಿತ.
-ಹಂಸಾನಂದಿ

ತ್ಯಾಗರಾಜ ಮತ್ತು ಪಾಶ್ಚಾತ್ಯ ಸಂಗೀತ

ತ್ಯಾಗರಾಜರು ಸಮಾಧಿ ಹೊಂದಿದ್ದು ೧೭೪೭ರ ಜನವರಿ ೬ರಂದು. ಅವರ ನೆನಕೆಯಲ್ಲಿ ಈ ಬರಹ.

ತ್ಯಾಗರಾಜರು ಪಂಚರತ್ನ ಕೃತಿಗಳೇ ಮೊದಲಾದ ರಚನೆಗಳಿಂದ ಹೆಸರಾದವರಾದರೂ, ಎಲ್ಲ ಮಟ್ಟದ ಸಂಗೀತ ಅಭ್ಯಾಸಿಗಳಿಗೆ ಅನುಕೂಲವಾಗುವಂತಹ ರಚನೆಗಳನ್ನೂ ಅವರು ರಚಿಸಿದ್ದಾರೆ. ಅವುಗಳಲ್ಲಿ, ಅವರ ಕಾಲದಲ್ಲಿದ್ದ ಬ್ರಿಟಿಷರ ಬ್ಯಾಂಡ್ ಸಂಗೀತದಿಂದ ಪ್ರಭಾವಿತರಾಗಿ ರಚಿಸಿದ ಕೆಲವು ಕೃತಿಗಳೂ ಇವೆ. ಸರಳವಾದ ಸಂಗೀತ, ಗುಂಪಿನಲ್ಲಿ ಹಾಡಲು ತಕ್ಕದಾದ ಇವು ಚಿಕ್ಕ ಮಕ್ಕಳಿಗೆ ಹೇಳಿಕೊಡಲೂ ಕೂಡ ಯೋಗ್ಯವಾಗಿವೆ. ಅವುಗಳಲ್ಲಿ ಕೆಲವು ಇಲ್ಲಿವೆ. ಕೇಳಿ.

ಸಾರಸನೇತ್ರ ಪಾರಗುಣ:
ವರಲೀಲಗಾನಲೋಲ:ಈ ಮೇಲಿನ ಎರಡೂ ಶಂಕರಾಭರಣ ರಾಗದ ಮೇಲೆ ಆಧಾರಿತವಾಗಿವೆ.

ರಮಿಂಚುವಾರೆವರುರಾ:-ಹಂಸಾನಂದಿ

ಖಗೋಳ ವಿಜ್ಞಾನ ವರ್ಷ - ೨೦೦೯

Image
ಈ ೨೦೦೯ ರ ವರ್ಷವನ್ನ ಖಗೋಳ ವಿಜ್ಞಾನವರ್ಷ ಎಂದು ಘೋಷಿಸಲಾಗಿದೆ!

ಮಾನವನ ಇತಿಹಾಸದ ಸಾವಿರಾರು ವರ್ಷಗಳಲ್ಲಾಗದಷ್ಟು ಬದಲಾವಣೆಗಳು ಕಳೆದ ಐವತ್ತು ವರ್ಷಗಳಲ್ಲಾಗಿವೆ.

ಅದರಲ್ಲಿ ಒಂದು ಬೆಳಕು ತರುವ ಕೊಳಕು. ಅಂದ್ರೆ ಲೈಟ್ ಪಲ್ಯೂಶನ್.

ಅದರ ದೆಸೆಯಿಂದಾಗಿ, ಬಹಳ ಜನಕ್ಕೆ ಆಕಾಶದಲ್ಲಿ ಏನಿರಬಹುದೆಂಬ ಹೊಳಹೂ ಇರದೇ‌ ಹೋಗಿದೆ.

ಅದಕ್ಕೊಂದು ತಡೆ ಹಾಕೋಣ. ಕತ್ತಲನ್ನು ಹುಡುಕಿ ಹೋಗುತ್ತಾ‌ ಆಗಸದಲ್ಲಿರುವ ನೋಟಗಳನ್ನು ಆನಂದಿಸೋಣ.

ನಡೆಯಿರಿ. ಜೊತೆಗೆ ಮಕ್ಕಳನ್ನೂ ಕರೆದೊಯ್ಯಿರಿ. ಅವರಿಗೂ‌ ಆಕಾಶದ ಹುಚ್ಚು ಹತ್ತಿಸಿಬಿಡಿ :)

ಏಕೆಂದರೆ, ಒಂದು ಸಲ ಈ‌ ಹುಚ್ಚು ಹತ್ತಿದರೆ, ಅದು ಜೀವಮಾನ ಪೂರ್ತಿ ಬಿಡದು, ಮತ್ತೆ ಅದಕ್ಕಾಗಿ ಅವರು ನಿಮಗೆ ಆಭಾರಿಯಾಗಿಯೂ‌ ಇರುತ್ತಾರೆ!

-ಹಂಸಾನಂದಿ