Posts

Showing posts from February, 2009

ಸುಳ್ಳೇ ನಮ್ಮನೆದೇವರು

ದೇವರಿದ್ದಾನೆಯೇ? ಇಲ್ಲವೇ? ಕಷ್ಟಕ್ಕೆ ಸಿಲುಕಿದಾಗ ಹಾಗೊಬ್ಬ ಸರ್ವಶಕ್ತ ಇದ್ದರೆ ಒಳ್ಳೆಯದೆಂದು ಅನಿಸುವುದು ಸುಳ್ಳಲ್ಲ. ಅದಕ್ಕೇ ಇರಬೇಕು 'ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು' ಎಂದು ಬೇಡಿಕೊಳ್ಳುವುದು. ದೇವರನ್ನು ನಮ್ಮ, ಪರರ ಒಳ್ಳೆಯ ಗುಣದಲ್ಲಿ ಕಾಣಬೇಕು ಅಂತಲು ಹೇಳುತ್ತಾರೆ. ಅದೇ ತರಹ, ದೇವರು ತಾನು ಎಲ್ಲೆಲ್ಲೂ ಇರಲಾರದ್ದಕ್ಕೆಂದೇ ಅಮ್ಮಂದಿರನ್ನು ಸೃಷ್ಟಿಸಿದ ಅನ್ನುವ ಮಾತೂ ನಾವೆಲ್ಲ ಕೇಳಿರುವುದೇ ಆಗಿದೆ.

ಅದಿರಲಿ. ಶಿಶುವಿನಹಾಳದ ಷರೀಫರ 'ಕೋಡಗನ ಕೋಳಿ ನುಂಗಿತ್ತ' ಅನ್ನುವ ಹಾಡು ಒಂದಿಪ್ಪತ್ತು ವರ್ಷಗಳಿಂದ ಬಹಳ ಹೆಸರುವಾಸಿಯಾಗಿದೆ. ಆಗದ ಸಂಗತಿಗಳನ್ನೇ ಹೇಳುತ್ತಾ ಕೇಳುಗರನ್ನು ಗೋವಿಂದ ಗುರುವಿನ ಪಾದದ ಅಗಾಧತೆಯನ್ನು ಮನವರಿಕೆ ಮಾಡಿಕೊಡುವಂತಹ, ಒಂದು ಒಗಟಿನಂತಹ ಹಾಡಿದು. ಇಂತಹ ಹಾಡುಗಳನ್ನು ಬರೆದವರಲ್ಲಿ ಷರೀಫರು ಮೊದಲಿಗರೇನೂ ಅಲ್ಲ. ಹರಿದಾಸರು, ಶಿವಶರಣರು ಈ ರೀತಿಯ ಹಲವು ರಚನೆಗಳನ್ನ ಬರೆದಿರುವುದು ತಿಳಿದ ವಿಷಯವೇ.

ಅಂತಹ ಒಂದು ರಚನೆಯನ್ನು ಈಚೆಗೆ ಓದಿದೆ. ದೇವರ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಅದನ್ನು ಹಾಕೋಣ ಅನ್ನಿಸಿತು. ಓದಿ ನೋಡಿ - ಸುಳ್ಳೇ ನಮ್ಮನೆ ದೇವರು - ಪುರಂದರ ದಾಸರ ಒಂದು ರಚನೆ:

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು ! ||ಪಲ್ಲವಿ||

ಬೆಕ್ಕು ಭಕ್ಕರಿ ಮಾಡೋದ ಕಂಡೆ ಇಲಿಯು ಒಲೆಯ ಚುಚ್ಚೋದ (ಚಾಚೋದ?) ಕಂಡೆ
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆ ಗಡ…

ವಾಹ್ವಾರೆ ಮೆಣಸಿನ ಕಾಯಿ!

Image
ಮೆಣಸಿನಕಾಯಿ ಇಲ್ಲದ ಊಟವನ್ನೇ ನಾವು ಇವತ್ತು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಮಟ್ಟಿಗೆ ಅದು ನಮ್ಮ ಅಡಿಗೆಯ ಮೂಲ ಸಾಮಗ್ರಿ ಆಗಿಹೋಗಿದೆ.(ಚಿತ್ರ ಕೃಪೆ: http://www.thaikingdom.co.uk/)

ಆದರೆ ಈ ಮೆಣಸಿನಕಾಯಿ ಭಾರತದ್ದಲ್ಲವಂತೆ. ಬಲ್ಲವರು ಹೇಳುವ ಪ್ರಕಾರ, ಮಧ್ಯ ಅಮೆರಿಕೆಯಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಯನ್ನು, ಅಲ್ಲಿಂದ ಹೊರಜಗತ್ತಿನಲ್ಲಿ ಪರಿಚಯ ಮಾಡಿಸಿದ್ದು ಕೊಲಂಬಸ್. ೧೪೯೪ರಲ್ಲಿ ಸ್ಪೆಯಿನಿಗೆ, ಆಮೇಲೆ ಯೂರೊಪಿನ ಇತರ ದೇಶಗಳು , ನಂತರ ಏಷ್ಯಾದ ಬೇರೆ ಬೇರೆಕಡೆಗೆ ಹೀಗೆ ನಾವಿಕರ ಜೊತೆ ಅದು ಸಾಗಿತಂತೆ. (ಮಾಹಿತಿ:ವಿಕಿಪಿಡಿಯಾ - ಹಾಗೇ ಇದೇ ಅಭಿಪ್ರಾಯವನ್ನು ಬಿ.ಜಿ.ಎಲ್.ಸ್ವಾಮಿಯವರ ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಪುಸ್ತಕದಲ್ಲೂ ಓದಿದ್ದ ನೆನಪಿದೆ)

ಅಂದರೆ ಕ್ರಿ.ಶ.೧೫೦೦ರ ಹೊತ್ತಿಗೆ ಭಾರತಕ್ಕೆ (ಅತೀ ಮೊದಲು ಎಂದರೆ) ಬಂದಿರಬಹುದಾದ ಮೆಣಸಿನಕಾಯಿ ಸುಮಾರು ಐವತ್ತು ವರ್ಷಗಳಲ್ಲೇ ಕನ್ನಡಿಗರ ನಾಲಿಗೆಯನ್ನು ಗೆದ್ದುಬಿಟ್ಟಿತ್ತು ಎನ್ನುವುದಕ್ಕೆ ಪುರಂದರ ದಾಸರ ಈ ರಚನೆಯೇ ಒಂದು ಕುರುಹು

ಈಗ ಓದಿ: ವಾಹ್ವಾರೆ ಮೆಣಸಿನಕಾಯಿ!

ಪಲ್ಲವಿ:
ವಾಹ್ವಾರೆ ಮೆಣಸಿನ ಕಾಯಿ ಒಣರೊಟ್ಟಿಗೆ ತಂದೆನೊ ತಾಯಿ ||

ಚರಣಗಳು:

೧: ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟ ನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹು ರುಚಿಯೆಂಬೆ

೨: ಒಂದೆರಡರೆದರೆ ಬಹು ರುಚಿಯೆಂಬೆ
ಮೇಲೆರಡರೆದರೆ ಬಹು ಖಾರೆಂಬೆ
ಅದು ಎರಡರೆದರೆ ಅತಿ ಖಾರೆಂಬ

೩: ಬಡವರಿಗೆಲ್ಲ ನಿನ್ನಾಧಾ…

ವಾರದ ಕೊನೆಯಲ್ಲಿ ನನ್ನ ಓದು

Image
ಒಂದು ಕಾಲವಿತ್ತು. ಏನಾದರೂ ಓದಬೇಕು ಅಂತ ಕುಳಿತರೆ ಹಾಗೇ ಗಂಟೆಗಟ್ಟಲೆ ಕೂತು ಮುಗಿಸಿಬಿಡ್ತಿದ್ದೆ. ಅದು ಯಾವ ಜವಾಬ್ದಾರಿ ಇಲ್ಲದ ಕಾಲ ಅಂತ ಹೇಳ್ಬೇಕಾಗಿಲ್ಲ ಮತ್ತೆ. ಆದ್ರೆ, ಎಲ್ಲ ದಿವಸಗಳೂ ಒಂದೇ ತರಹ ಇರೋದಿಲ್ಲ ನೋಡಿ. ಹಾಗಿದ್ರೆ ಚೆನ್ನಾಗೂ ಇರೋದಿಲ್ಲ. ಉದಾಹರಣೆಗೆ ಊಹೆ ಮಾಡ್ಕೊಳಿ - ಚಿಕ್ಕಂದಿನಲ್ಲಿ ಯಾರೋ ಯಾವತ್ತೋ ನಿಮಗೆ ಕೊಟ್ಟಿದ್ದ ಹೊಸ ಬಟ್ಟೆಯೋ, ಪುಸ್ತಕವೋ ಈಗಲೂ ನೆನಪಿರುತ್ತೆ. ಆದ್ರೆ ಅದೇ ತರ್ಹ ನೀವೇ ಸಾವಿರ ಹೊಸ ಬಟ್ಟೆ ತೊಗೊಂಡ್ರೂ ಅಂತಹ ಸಂತೋಷ ಆಗೋದಿಲ್ಲ. ಅಂದ್ರೆ, ಅಪರೂಪಕ್ಕೆ ಸಿಕ್ಕಾಗಲೇ ನಮಗೆ ಅದರ ಬೆಲೆ ತಿಳಿಯೋದು. ಒಂದು ಸುಭಾಷಿತವೇ ಇದೆಯಲ್ಲ, ’ಅತಿಪರಿಚಯಾದವಜ್ಞಾ..’ ಅಂತ - ಪರಿಚಯ ಹೆಚ್ಚಾದ್ರೆ ತಾತ್ಸಾರವೇ ಪ್ರಾಪ್ತಿ. ಮಲೆನಾಡಿನ ಬೇಡಹೆಂಗಸು, ಒಲೆ ಉರಿಸೋದೂ ಗಂಧದ ಕಟ್ಟಿಗೇಲಿ ಅಂತ ಅದರ ಸಾರಾಂಶ. ಆ ದೃಷ್ಟೀಲಿ ನೋಡಿದ್ರೆ, ಹೀಗೆ ಅಪರೂಪಕ್ಕೆ ಅನ್ನೋಹಾಗೆ ಒಂದೊಂದು ಪುಸ್ತಕ ಓದಿದರೂ, ಅಂತೂ ಓದಿ ಮುಗಿಸಿದೆನಲ್ಲಾ ಅನ್ನೋ ಸಂತೋಷವೇ ಇರುತ್ತೆ. ಒಟ್ಟಲ್ಲಿ ಈಗಂತೂ ನನಗೆ ಒಂದು ಪುಸ್ತಕ ಓದಿ ಮುಗಿಸೋದು ಅನ್ನೋದು ಎಷ್ಟೋ ದಿವಸಗಳ, ಇಲ್ಲವೇ ವಾರಗಳ ಯೋಜನೆ ಆಗಿಹೋಗುತ್ತೆ. ಒಂದಷ್ಟು ದಿನದ ಹಿಂದೆ ಶಂಕರಭಟ್ಟರ ಕನ್ನಡ ನುಡಿಯ ಬಗ್ಗೆಯ ಪುಸ್ತಕಗಳೊಂದಷ್ಟನ್ನು ಎರವಲು ಪಡೆದೆ. ಸುಭಾಷಿತ ಗೊತ್ತೇ ಇದೆಯಲ್ಲ - ’ಪುಸ್ತಕಂ ವನಿತಾ ವಿತ್ತಂ ...’ ಅಂತ - ಹಾಗಾಗಬಾರದು, ಹಾಗಾಗೋದಿಲ್ಲ ಅಂತ ಮೊದಲೇ ಅವರಿಗೆ ಭರವಸೆ ಕೊಟ್ಟಿದ್ರಿಂದ ಅ…

ಶಿವರಾತ್ರಿಗೊಂದು ಶಿವಸ್ತುತಿ

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು
ಹಿರಿಬೇಟೆಗಾರನೇ! ಮನಸೆನ್ನುವೀ ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು
ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು
ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದೇ ನಿನಗೆ ಸರಿಯು ಸಂಸ್ಕೃತ ಮೂಲ (ಶಿವಾನಂದ ಲಹರಿಯಿಂದ): ಮಾಗಚ್ಛ ತ್ವಮಿತಸ್ತತೋ ಗಿರಿಶ ಭೋ ಮಯ್ಯೇ ವಾಸಂ ಕುರು
ಸ್ವಾಮಿನ್ನಾದಿಕಿರಾತ ಮಾಮಕಮನಃಕಾಂತಾರಸೀಮಾಂತರೇ |
ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯ ಮೋಹಾದಯಃ
ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ || -ಹಂಸಾನಂದಿ ಕೊ: ಶಿವನು ಅರ್ಜುನನೊಂದಿಗೆ ಬೇಟೆಗಾರನಾಗಿ ನಡೆಸಿದ ’ಕಿರಾತಾರ್ಜುನೀಯ’ ಕಾಳಗವನ್ನು ನೆನೆಯಿರಿ

ಬೆಂಕಿಯಲ್ಲದೇ ಸುಡುವುವಿವು

ಮನದನ್ನೆಯಗಲಿಕೆ ತಮ್ಮವರಿಂದಪಮಾನ
ಮುಗಿಯದುಳಿದ ಕದನ* ಕೇಡಿಗರ ಸೇವೆ
ಗತಿಗೆಟ್ಟಿರುವನಿಸಿಕೆ ಎಣೆಗೆಡುಕರ ಕೂಟ
ಬೆಂಕಿಯೊಂದಿಲ್ಲದೇ ಸುಡುವುದೊಡಲನ್ನು ಸಂಸ್ಕೃತ ಮೂಲ: ಕಾಂತಾವಿಯೋಗಃ ಸ್ವಜನಾಪಮಾನೋ
ರಣಸ್ಯ ಶೇಷಃ ಕುನೃಪಸ್ಯ ಸೇವಾ |
ದರಿದ್ರ ಭಾವೋ ವಿಷಮಾ ಸಭಾ ಚ
ವಿನಾಗ್ನಿಮೇತೇ ಪ್ರದಹಂತಿ ಕಾಯಂ || (ಸಮಯೋಚಿತ ಪದ್ಯರತ್ನ ಮಾಲಿಕಾದಿಂದ) -ಹಂಸಾನಂದಿ ಕೊ.ಕೊ: *ಜಾರ್ಜ್ ಬುಷ್ ಇರಾಕಿಗೆ ಹೋಗುವ ಮೊದಲು ಈ ಪದ್ಯ ಓದಿರಬೇಕಿತ್ತು :(

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ): ಶಿಕ್ಷಾ ಕ್ಷಯಂ ಗಚ್ಛತಿ ಕಾಲ ಪರ್ಯಯಾತ್
ಸುಬದ್ಧಮೂಲಾಃ ನಿಪತಂತಿ ಪಾದಪಾಃ |
ಜಲಂ ಜಲಸ್ಥಾನಗತಂ ಚ ಶುಷ್ಯತಿ
ಹುತಂ ಚ ದತ್ತಂ ಚ ತಥೈವ ತಿಷ್ಟತಿ || ಕೊಸರು: ಮೂಲದಲ್ಲಿ ಇರುವ ’ಈಗಿನ’ಕಾಲದ ಕ್ರಿಯಾಪದಗಳನ್ನು ನಾನು ನೇರವಾಗಿ ಕನ್ನಡಿಸಿಲ್ಲ ಕೊ.ಕೊ: ಹುತಂ = ಹೋಮ ಮಾಡಿದ್ದು ಎಂಬ ಸಾಮಾನ್ಯ ಅರ್ಥವಾದರೂ, ಅದಕ್ಕೆ ಲೋಕಹಿತಕ್ಕಾಗಿ ಬಿಟ್ಟದ್ದು ಎನ್ನುವ ಅರ್ಥವೂ ಇದೆ. ನಾನು ಬಿಟ್ಟದ್ದು ಎಂದು ಉಪಯೋಗಿಸಿರುವುದು ಅದನ್ನೇ

ಫೆಬ್ರವರಿ ಹದಿನಾಕರ ದಿನಕ್ಕೆ ನೆನೆಯಲು ಐದು ನಲ್ನುಡಿಗಳು

ಊರಲ್ಲೆಲ್ಲ ಒಂದೇ ಗಲಾಟೆ ಅಂತೆ. ಅದ್ಯಾವ್ದೋ ದಿನ ಆಚರಿಸಬೇಕೋ ಬೇಡವೋ, ಅದು ನಮ್ಮ ಸಂಸ್ಕೃತಿಗೆ ತಕ್ಕದ್ದೋ ಅಲ್ವೋ ಅಂತ. ಅದೆಲ್ಲ ಬಿಡಿ, ಅದಕ್ಕೆ ಉತ್ತರ ಕೊಡೋಷ್ಟು ಬುದ್ಧಿಯಾಗಲಿ, ವ್ಯವಧಾನವಾಗಲೀ, ಅಗತ್ಯವಾಗಲೀ ಒಂದೂ ನನಗಿಲ್ಲ. ಆದರೆ ಈ ಮೊದಲೇ ಬರೆದಿದ್ದ - ಬೇರೆ ಬರಹಗಳಲ್ಲಿ ಹಾಕಿದ್ದ ನಾಕು ಸುಭಾಷಿತಗಳ ಅನುವಾದವನ್ನ ಒಟ್ಟಿಗೆ ಒಮ್ಮೆ ಹಾಕೋಣ ಅನ್ನಿಸ್ತು. ಹಾಕ್ತಿದೀನಷ್ಟೇ. ಈ ಪದ್ಯಗಳೆಲ್ಲದರ ಮೂಲ: ಭರ್ತೃಹರಿಯ ಶೃಂಗಾರ ಶತಕ ೧: ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ ಶಂಭುಃ ಸ್ವಯಂಭು ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕರ್ಮ ದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ
೨: ಹೆಣ್ಣಲ್ಲದೇ ಮತ್ತೆ ಏನಿಹುದು
ಈ ಜಗದಿ ಅಮೃತ ವಿಷವೆಂದು?
ಒಲಿದವಗೆ ಅವಳೇ ಅಮೃತಬಳ್ಳಿ
ಒಲಿಯದಿರೆ ಆದಾಳು ವಿಷದ ಕಳ್ಳಿ
ನಾಮೃತಮ್ ನ ವಿಷಮ್ ಕಿಂಚಿದೇಕಾಂ ಮುಕ್ತ್ವಾ ನಿತಂಬಿನೀಮ್ |
ಸೇವಾಮೃತಲತಾ ರಕ್ತಾ ವಿರಕ್ತಾ ವಿಷವಲ್ಲರೀ ||
೩: ಆಗಸದಿ ಹೊಳೆಯುವ ಚುಕ್ಕಿಗಳು ಚಂದಿರನು
ಮತ್ತೆ ದೀಪವು ಕತ್ತಲ ಕಳೆವುದೆಂಬರು.
ಎಳೆಜಿಂಕೆಕಣ್ಣಿನ ಸೊಬಗಿ ಬಳಿಯಿಲ್ಲದಿರಲು
ಜಗವಿದಾಗಿಹುದೆನಗೆ ಕಡುಕತ್ತಲು!
ಸತಿ ಪ್ರದೀಪೇ ಸತ್ಯಗ್ನೌ ಸತ್ಸು ತಾರಾಮಣೀಂದುಷು|
ವಿನಾ ಮೇ ಮೃಗಶಾವಾಕ್ಷ್ಯಾ ತಮೋಭೂತಮಿದಂ ಜಗತ್||
೪: ಕವಿಗಳ ಮಾ…

ಕನ್ನಡಿಯೊಳಗಿನ ಆನೆ

Image
ಅರಿಗರಪಾರ ಗುಣಗಳೂ ಕಿರಿದು
ತೋರೀತು ಕೀಳ್ಮನಸಿನ ಕಂಗಳಿಗೆ
ತೋರಿಕೆಯೆಂದಿಗು ನೋಡುವರ ಮಟ್ಟಕೆ
ಕಿರುಗನ್ನಡಿಯೊಳಗಿನ ಆನೆಯಂತೆ ಸಂಸ್ಕೃತ ಮೂಲ:
ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃಆಧಾರಾಧೇಯಭಾವೇನ ಗಜೇಂದ್ರ ಇವ ದರ್ಪಣೇ -ಹಂಸಾನಂದಿ

ಅಪರೂಪದ ಮದ್ದು

ಅರಿಗರು ದೊರೆತರೂ ಹದುಳಿಗರು ದೊರೆಯರು
ದೊರೆವ ಹದುಳಿಗರೋ ಅರಿಯದವರಿರಬಹುದು
ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ
ಅರಿತವನೂ ಹದುಳಿಗನೂ ಆಗಿರುವ ಮಾನಿಸನು! ಅರಿಗ = ವಿದ್ವಾಂಸ
ಹದುಳಿಗ= ಹಿತಕರ, ಹಿತೈಷಿ
ಮಾನಿಸ = ಮನುಷ್ಯ, ಮಾನವ ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ): ಮನೀಷಿಣಃ ಸಂತಿ ನ ತೇ ಹಿತೈಷಿಣೋ
ಹಿತೈಷಿಣಃ ಸಂತಿ ನ ತೇ ಮನೀಷಿಣಃ |
ಸುಹೃಚ್ಚ ವಿದ್ವಾನಪಿ ದುರ್ಲಭೋ ನೄಣಾಂ
ಯಥೌಷದಂ ಸ್ವಾದು ಹಿತಂ ಚ ದುರ್ಲಭಃ || -ಹಂಸಾನಂದಿ

ಏಕೆ ಓದಬೇಕು?

ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?
ಸಂಸ್ಕೃತ ಮೂಲ: ಅಪಿ ಮುದಮುಪಯಾಂತೋ ವಾಗ್ವಿಲಾಸೈಃ ಸ್ವಕೀಯೈಃ
ಪರಭಣಿತಿಷು ತೋಷಂ ಯಾಂತಿ ಸಂತಃ ಕಿಯಂತಃ
ನಿಜಘನಮಕರಂದಸ್ಯಂದಪೂರ್ಣಾಲವಾಲಃ
ಕಲಶಸಲಿಲಸೇಕಂ ನೇಹತೇ ಕಿಂ ರಸಾಲಃ *ಅರಿಗ = ಅರಿತವ, ತಿಳಿದವ,ವಿದ್ವಾಂಸ (ಶಂಕರಭಟ್ಟರು ಈ ಪದವನ್ನು ಬಳಸಿದ್ದನ್ನು ನೋಡಿದೆ - ಹಿಡಿಸಿತು - ಅದಕ್ಕೇ ಉಪಯೋಗಿಸಿದೆ)
ನೀರುಣಿಸ = ನೀರಿನ ಉಣಿಸನ್ನು -ಹಂಸಾನಂದಿ

ಹೂ ಬಾಣ ಹಿಡಿದವಗೆ ಇನ್ನೊಂದು ನಮನ

ಕರ್ಪೂರದೊಲು ಉರಿದರೂ ಅಳವೇ*ರುತಲೆ ಇರುವ
ವೀರನಿಗೆ ನಾ ಮಣಿವೆ ಹೂ ಬಾಣ ಹಿಡಿದವಗೆ

(ಅಳವು = ಶಕ್ತಿ )

ಸಂಸ್ಕೃತ ಮೂಲ:

ಕರ್ಪೂರ ಇವ ದಗ್ಧೋಪಿ ಶಕ್ತಿಮಾನ್ ಯೋ ದಿನೇ ದಿನೇ
ನಮೋಸ್ತ್ವವಾರ್ಯ ವೀರ್ಯಾಯ ತಸ್ಮೈ ಕುಸುಮ ಧನ್ವನೇ

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಕುದುರೆಯು ಬೇಡ ಆನೆಯೂ ಬೇಡ
ಹುಲಿಯಂತೂ ಮೊದಲೇ ಬೇಡ
ಕೊಡಬೇಕು ಬಲಿ ಆಡಿನ ಮರಿಯನು
ಮೆದುಗರ ದೇವರೂ ಕೊಲುವವನು ಸಂಸ್ಕೃತ ಮೂಲ:
ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|
ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ||
-ಹಂಸಾನಂದಿ

ಹೆಸರುವಾಸಿ ಆಗೋದು ಹೇಗೆ?

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ! ಸಂಸ್ಕೃತ ಮೂಲ:
ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾಸಭಾರೋಹಣಮ್|
ಯೇನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋ ಭವೇತ್ || -ಹಂಸಾನಂದಿ

ರಾಗ ಅಭೇರಿ - ಮೊದಲ ಕಂತು

ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.

ಕರ್ನಾಟಕ ಸಂಗೀತದಲ್ಲಿ ಅಭೇರಿ, ಆಭೇರಿ ಅನ್ನುವ ಎರಡು ಹೆಸರುಗಳಿಂದಲೂ ಕರೆಯಲ್ಪಡುವ ಈ ರಾಗಕ್ಕೆ ಹಿಂದೂಸ್ತಾನಿ ರಾಗದಲ್ಲಿ ಒಂದು ಅವಳಿ ಜವಳಿ ರಾಗವಿದೆ. ಅಲ್ಲಿ ಅದನ್ನ ಭೀಮ್‍ಪಲಾಸ್, ಅಥವಾ ಭೀಮ್‍ಪಲಾಸೀ ಅಂತ ಕರೀತಾರೆ. ಕರ್ನಾಟಕ ಸಂಗೀತದಲ್ಲಿ ಇದು ಬಹಳ ಹಳೇ ರಾಗದಂತೆ ಕಾಣೋದಿಲ್ಲ. ೧೭ನೇ ಶತಮಾನದ ನಂತರ ಕಂಡುಬರೋ ಹೆಸರಿದು. ಆದರೆ, ಅದಕ್ಕೂ ಮೊದಲು ದೇವಗಾಂಧಾರ ಅಂತ ಪ್ರಸಿದ್ಧವಾದ ರಾಗವೊಂದಿತ್ತು, ಅದು ಹೆಚ್ಚು ಕಡಿಮೆ ಈಗ ನಾವು ಯಾವುದನ್ನ ಅಭೇರಿ ಅಂತ ಕರೀತೀವೋ ಅದೇ ತರಹ ಇರ್ತಿತ್ತು. ಈಗ ಕರ್ನಾಟಕ ಸಂಗೀತದಲ್ಲಿ ದೇವಗಾಂಧಾರಿ ಅಂತ ಬೇರೊಂದು ಪ್ರಸಿದ್ಧ ರಾಗ ಇರೋದ್ರಿಂದ, ೨೦ ನೇ ಶತಮಾನದಲ್ಲಿ ಹಳೆಯ ದೇವಗಾಂಧಾರಕ್ಕೆ ಕರ್ನಾಟಕ ದೇವಗಾಂಧಾರಿ ಅಂತ ಕರೆಯೋ ಪದ್ಧತಿ ಶುರುವಾಗಿದೆ.

ಇಷ್ಟು ಸಾಲದು ಅಂತ ಅಭೇರಿ ರಾಗದಲ್ಲೇ ತ್ಯಾಗರಾಜರ ಪದ್ಧತಿ ದೀಕ್ಷಿತರ ಪದ್ಧತಿ ಅಂತ ಎರಡು ಬೇರೆಬೇರೆ ರಾಗಗಳಿವೆ. ಸದ್ಯಕ್ಕೆ ನಾನು ತ್ಯಾಗರಾಜರ ಪದ್ಧತಿಯ ಅಭೇರಿ ರಾಗದ ಬಗ್ಗೆ ಮಾತಾಡುವೆ. ಇದಕ್ಕೂ (ಕರ್ನಾಟಕ) ದೇವಗಾಂಧಾರಕ್ಕೂ ವ್ಯತ್ಯಾಸ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಇನ್ನು ಮಾಮೂಲಿನ ಹಾಗೆ, ಈ ರಾಗದ ಸ್ವರಗಳ ಬಗ್ಗೆ ಮಾತಾಡೋ ಮೊದಲು, ಕೆಲವು ಚಿತ್ರಗೀತೆಗಳನ್ನ ಕೇಳಿಬಿಡೋಣ ಅಲ್ವೇ? ಅಂದಹಾಗೆ, ಈ ರಾಗ ಚಿತ್ರಸಂಗೀತಗಾರರಿಗೆ ಒಳ್ಳೇ ಪ್ರಿ…