Posts

Showing posts from March, 2011

ಹಸಿರೆಂಬೆಯ ಹೊಡೆತವೂ, ಒಣಸೌದೆಯ ಲತ್ತೆಯೂ...

ಕನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.

ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವರ್ತ್ಯ, ಮರ್ಕೇಟರ್ ಪ್ರಕ್ಷೇಪಣ - ಅನ್ನೋ ತರಹದ ಕೆಲವು ಪಾರಿಭಾಷಿಕ ಪದಗಳನ್ನ ಹೇಳಿ ಮುಗಿಸೋ ಹೊತ್ತಿಗೆ, ಅದನ್ನ ಹೇಗೆ ಶುರು ಮಾಡಿದ್ವಿ ಅನ್ನೋದೇ ಮರೆತು ಹೋಗಿರತ್ತೆ.

ಇದೇ ತರಹ ಅಲ್ಪಪ್ರಾಣ, ಮಹಾಪ್ರಾಣ ಮೊದಲಾದ ಭಾಷೆಗೆ ಸಂಬಂಧ ಪಟ್ಟ ಪಾರಿಭಾಷಿಕ ಪದಗಳು ಸರಿ ಇಲ್ಲ ಅಂತ ಹೇಳೋದನ್ನ ಕೇಳ್ತಿದ್ದೇನೆ. ಹಾಗೇ ಆಗಲಿ ಅಂತ ಒಪ್ಪೋಣ. ಎಷ್ಟೇ ಅಂದ್ರೂ ಕನ್ನಡ ಮೂಲದ ಪದಗಳಲ್ಲ ಅವು.

ಇವಕ್ಕೆ ಬದಲಾಗಿ ಕೊರಳಿಸಿದ, ಕೊರಳಿಸದ ಅನ್ನೋ ಬಳಕೆಯನ್ನ ನೋಡ್ತಿದ್ದೇನೆ. ಹೊಸ ಪಾರಿಭಾಷಿಕ ಪದಗಳನ್ನ ಹುಟ್ಟುಹಾಕೋದು ಒಳ್ಳೇದೇ. ಅಲ್ಲದೇ, ಕೊರಳು ಅನ್ನೋದು ಕನ್ನಡವೇನೇ.

ಆದರೆ ಕೊರಳಿಸಿದ, ಕೊರಳಿಸದ ಅನ್ನೋದು voiced consonant, voiceless consonant ಅನ್ನೋದರ ಕನ್ನಡ ಅನುವಾದ ತಾನೇ?

ಹಸೀ ಕೊಂಬೇಲಿ ಹೊಡೆಸಿಕೊಂಡ್ರೂ, ಒಣಗಿದ ಸೌದೇಲಿ ಹೊಡೆಸಿಕೊಂಡ್ರೂ, ಏಟು ಏಟೇನೇ. ಅಲ್ವಾ?

ಇದರ ಬದಲು ’ಒತ್ತಿ ಹೇಳುವ’, ’ಒತ್ತಿ ಹೇಳದ’ ಅಂತ ಹೇಳಬಹುದು ಅಂತ ಎಣಿಸ್ತಿದ್ದೆ. ಅಚ್ಚ ಕನ್ನಡ, ಮತ್ತೆ ಬೀದೀಲಿ ಹೋಗೋ ಮಗೂನ ಕರೆದು ಹೇಳಿದರೂ ಸುಲಭವಾಗಿ ತಿಳಿಯೋ ಅಂತಹ ಬಳಕೆ ಅಂತ ಅನ್ನಿಸ್ತು.

ಅಷ್ಟರಲ್ಲೇ ತಲೆಯಲ್ಲೊಂದು ದೀಪ ಜಗ್ಗನೆ ಹತ್ತಿಕೊಂಡಿತು. ಭಾಷೆಯ ಬಗ್ಗೆ…

ಕಾಮನ ಹಬ್ಬ

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್ದ ಪಾರ್ವತಿಯನ್ನು ಕಂಡು, ಅವಳನ್ನು ಮೆಚ್ಚಿ ಮದುವೆಯಾಗಿದ್ದು; ವಿರಕ್ತರಲ್ಲಿ ವಿರಕ್ತನಾಗಿದ್ದ ಶಿವನು ಪ್ರೇಮಿಗಳಲ್ಲಿ ಪ್ರೇಮಿಯಾಗಿ ಕಂಗೊಳಿಸಿದ್ದು, ನಂತರ ಷಣ್ಮುಖ ಹುಟ್ಟಿದ್ದು ಇದೇ ಕಾಳಿದಾಸನ ಕುಮಾರ ಸಂಭವ ಕಾವ್ಯದ ಮುಖ್ಯ ಹೂರಣ.

ಅದಕ್ಕೇ ಶಿವನನ್ನು ಭರ್ತೃಹರಿ ತನ್ನ ಶೃಂಗಾರ ಶತಕದಲ್ಲಿ ಹೀಗೆ ಕೊಂಡಾಡುತ್ತಾನೆ: (ಪದ್ಯ -೯೭)

ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ |
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ ||

(ಸಾರಾಂಶ: ಪ್ರೇಮಿಗಳಲ್ಲಿ ಅಗ್ರೇಸರನಾದವನು ತನ್ನ ದೇಹದ ಅರ್ಧಭಾಗದಲ್ಲೇ ತನ್ನ ಪ್ರಿಯೆ ಪಾರ್ವತಿಯನ್ನು ಧರಿಸಿ ಅರ್ಧನಾರೀಶ್ವರನಾದಂತಹ ಶಿವ. ಅದೇ ರೀತಿ ಅವನೇ ಹೆಣ್ಣಿನ ಸಂಗವನ್ನು ತೊರೆದ ವಿರಾಗಿಗಳಲ್ಲೂ ಅವನೇ ಅಗ್ರಗಣ್ಯ! ಅದಕ್ಕೇ ಅಲ್ಲವೇ ನಿವಾರಿಸಲಾರದ ಹಾವಿನ ವಿಷ ಜ್ವಾಲೆಯಂತಹ ಕಾಮಬಾಣಗಳನ್ನು ಅವನು ತಡೆಯಲು ಸಾಧ್ಯವಾಗಿದ್ದು? ಸಾಮಾನ್ಯ ಜನರಿಂದ ಆಗುವುದೇನು? ಪಾಪ, ಕಾಮಬಾಣಗಳಿಗೆ ಸಿಲುಕಿದರೆ ಅವರು, ಅನುಭವಿಸಲೂ, ಬಿಡಲೂ, ಒಂದೂ ಅರಿಯದೇ ಹೋಗು…

ಪಹಾಡಿ

Image
ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ, ಕೆಲವು ಪ್ರಾಣಿ ಪಕ್ಷಿಗಳ ಮೇಲೆ. ಇನ್ನು ಕೆಲವಕ್ಕೆ ಯಾವ ಅರ್ಥವೂ ತೋರುವುದೂ ಇಲ್ಲ. ಒಂದೇ ರೀತಿಯ ಹೆಸರುಳ್ಳ ರಾಗಗಳಿಗೆ ಹೋಲಿಕೆ ಇರಬೇಕೆಂಬುದೂ ಇಲ್ಲ. ಒಟ್ಟಿನಲ್ಲಿ ಒಂದು ರಾಗಕ್ಕೆ ಇಂತಹದ್ದೇ ಹೆಸರೇಕೆ ಬಂತು ಅನ್ನುವುದನ್ನು ಹೇಳುವುದು ಕಷ್ಟವೇ.

ಆದರೆ ಕೆಲವು ರಾಗಗಳ ಹೆಸರನ್ನು ನೋಡಿದಾಗ ಮಾತ್ರ ಅವು ಮೊದಲಿಗೆ ಎಲ್ಲಿಂದ ಬಂದವು ಎನ್ನುವುದನ್ನು ತೋರುತ್ತವೆಯೋ ಎಂದು ಊಹಿಸಬಹುದು. ಕನ್ನಡ, ಕಾನಡಾ, ಕನ್ನಡಗೌಳ, ಕನ್ನಡಬಂಗಾಳ, ಸಿಂಧುಕನ್ನಡ, ಗುರ್ಜರಿ, ಗೌಳ(ಗೌಡ), ಗೌಡಮಲ್ಹಾರ್, ಬಂಗಾಳ, ಸೌರಾಷ್ಟ್ರ, ಸುರುಟಿ, ಸೋರಟ್ ಇತ್ಯಾದಿ ಹಲವಾರು ದೇಶವಾಚಕ ರಾಗಗಳಿವೆ. ಹಾಗೇ ಹೊರದೇಶಗಳಿಂದ ಬಂದಿರುವಂತಹ ಯಮನ್/ಕಲ್ಯಾಣಿ (ಎಮನ್), ಹೆಜ್ಜುಜ್ಜಿ ( ಹಿಜಾಜ್) ಮೊದಲಾದ ರಾಗಗಳೂ ಇವೆ. ಮತ್ತೆ ಕೆಲವು ಜಾನಪದ ಸಂಗೀತದಿಂದ ಬಂದಿರುವಂತಹ ಎರಕಲಕಾಂಭೋಜಿ, ಪಹಾಡಿ ಮೊದಲಾದ ರಾಗಗಳೂ ಇವೆ.

ಇವತ್ತು ನಾನು ಹೇಳಹೊರಟಿದ್ದು ಪಹಾಡಿ ರಾಗದ ಬಗ್ಗೆ. ಹೆಸರು ಸೂಚಿಸುವಂತೆ ಇದು ಹಿಮಾಲಯದ ಗುಡ್ಡಗಾಡಿನ ಜನಪದ ಸಂಗೀತದಿಂದ ಶಾಸ್ತ್ರೀಯ ಸಂಗೀತಕ್ಕೆ ಬಂದಿರಬಹುದು ಅಂತ ಸುಲಭವಾಗಿ ಊಹಿಸಬಹುದು.

ಸಾಮಾನ್ಯವಾಗಿ, ರಾಗವೊಂದಕ…

ಕೊಳಲಿಗೆ

Image
ಓ ಕೊಳಲೇ,
ನೀನಿರುವೆ ನಸುನಗುವ ಮುಕುಂದನ
ಮೊಗದಾವರೆಯ ಬಳಿಯೇ;

ಅವನುಸಿರನೇ ಸವಿದು
ನಲಿವ ನಿನಗೆ
ನಾ ಕೈಯ ಮುಗಿವೆ;
ಬೇಡಿಕೊಳುವೆ.

ಆ ನಂದ ಕಂದನ
ರನ್ನದಾ ತುಟಿಗಳ ಬಳಿಸಾರಿ ನೀ ಹೇಗೋ ನನ್ನಳಲನ್ನು ಅವನ ಕಿವಿಯಲ್ಲಿ ಮೆಲ್ಲಗುಸಿರೇ!

ಸಂಸ್ಕೃತ ಮೂಲ: (ಶ್ಲೋಕ ೧೧ - ಲೀಲಾಶುಕನ ಕೃಷ್ಣಕರ್ಣಾಮೃತ)

ಅಯಿ ಮುರಲಿ ಮುಕುಂದ ಸ್ಮೇರ ವಕ್ತ್ರಾರವಿಂದ-
ಶ್ವಸನಮಧುರಸಜ್ಞೇ ತ್ವಂ ಪ್ರಣಮ್ಯಾದ್ಯ ಯಾಚೇ
ಅಧರಮಣಿಸಮೀಪಂ ಪ್ರಾಪ್ತವತ್ಯಾಂ ಭವತ್ಯಾಂ
ಕಥಯ ರಹಸಿ ಕರ್ಣೇ ಮದ್ದಶಾಂ ನಂದಸೂನೋಃ

-ಹಂಸಾನಂದಿ

ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ

Image
ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದು ಕಾಳಿದಾಸ-ಭೋಜರಾಜ ಈ ಜೋಡಿಯ ಹೆಸರೇ. ಭೋಜರಾಜನಿಗೆ ಆಗಾಗ್ಗೆ ವಿಚಿತ್ರ ಪ್ರಶ್ನೆಗಳನ್ನು ಕೇಳುವುದೇ ಕೆಲಸ. ಮತ್ತೆ ಅವುಗಳನ್ನು ಕಾಳಿದಾಸನಲ್ಲದೇ ಬೇರಾರಿಗೂ ಬಿಡಿಸಲಾಗದಿರುವುದೂ ಶತಸ್ಸಿದ್ಧ. ಅದರಲ್ಲೋ , ಭೋಜರಾಜ ಸುಮ್ಮನೆ ವಿಚಿತ್ರ ಪ್ರಶ್ನೆಗಳನ್ನು ಕೇಳುವುದೇ ಹೆಚ್ಚು.

ಹೀಗೆ ಒಂದು ದಿನ ಅವನು ಕೊಟ್ಟ ಸಾಲು: "ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ ". ಅರ್ಥವಿಲ್ಲದ ಇಂತಹ ಒಂದು ಸಾಲನ್ನು ಇದನ್ನು ಬಳಸಿ ಪದ್ಯವೊಂದನ್ನು ಬರೆಯಬೇಕು. ಸುಲಭದ ಮಾತೇ? ಸಭೆಯಲ್ಲಿ ಯಾರಿಗೂ ಆಗಲಿಲ್ಲ. ಆದರೇನು? ಕಾಳಿದಾಸ ಇದ್ದಾನಲ್ಲ! ಅವನು ಈ ಪ್ರಶ್ನೆಯನ್ನು ಬಿಡಿಸಿದ್ದು ಹೀಗೆ:

ರಾಮಾಭಿಷೇಕೇ ಜಲಮಾಹರಂತ್ಯಾಃ
ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾಃ |
ಸೋಪಾನಮಾಸಾದ್ಯ ಕರೋತಿ ಶಬ್ದಂ
ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ ||

रामाभिषेके जलमाहरान्त्याः
हस्ताच्च्युतो  हेमघटो युवत्याः |
सोपानमासाद्य करोति शब्दम्
ठा ठं ठ ठं ठं ठ ठ ठं ठ ठं ठः ||

ಹಾಗಂದರೆ ಏನಂತೀರಾ? ನನ್ನ ಕನ್ನಡ ಅನುವಾದ ಓದಿ:

ರಾಮನಭಿಷೇಕಕ್ಕೆ ನೀರನ್ನು ತರುತಿರುವ
ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ
ಮೆಟ್ಟಿಲಿನ ಮೇಲುರುಳಿ ಮಾಡಿತ…

ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

ಹಣೆಬರಹ

ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯ ಸಿರಿಗೊಡೆಯ ಮಗನು ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು! ಸಂಸ್ಕೃತ ಮೂಲ: ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||
ನೀ ಮೇಲೋ? ನಾ ಮೇಲೋ?

ನನ್ನ ಕೊಳಕನೆಂದು ನೀ ತಿಳಿದರೆ
ನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ?
ದುಷ್ಟನು, ಕೆಟ್ಟಕೆಳೆಯವನು ನಾನೆನಲು
ವಿಷದಕಲೆಯವನು, ಹಾವಹಿಡಿದನು ನೀ ತಾನೆ!

ಸಂಸ್ಕೃತ ಮೂಲ:

ಅಶುಚಿಂ ಯದಿ ಮಾನು ಮನ್ಯಸೇ
ಕಿಮಿದಂ ಮೂರ್ಧ್ನಿ ಕಪಾಲದಾಮ ತೇ|
ಉತ ಶಾಠ್ಯಮಸಾಧು ಸಂಗತಿಂ
ವಿಷಲಕ್ಷ್ಮಾಸಿ ನ ಕಿಂ ದ್ವಿಜಿಹ್ವಧೃತ್||

ಬೇಟೆಗಾರನಿಗೊಂದು ನಮನ
ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು
ಹಿರಿಬೇಟೆಗಾರನೇ! ಮನಸೆನ್ನುವೀ ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು
ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು
ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದೇ ನಿನಗೆ ಸರಿಯು
ಸಂಸ್ಕೃತ ಮೂಲ (ಶಿವಾನಂದ ಲಹರಿಯಿಂದ)
ಮಾಗಚ್ಛ ತ್ವಮಿತಸ್ತತೋ ಗಿರಿಶ ಭೋ ಮಯ್ಯೇ ವಾಸಂ ಕುರು
ಸ್ವಾಮಿನ್ನಾದಿಕಿರಾತ ಮಾಮಕಮನಃಕಾಂತಾರಸೀಮಾಂತರೇ |
ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯ ಮೋಹಾದಯಃ
ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ || ಭಕ್ತಿ

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,
ಸೂಜಿಗಲ್ಲ…