Posts

Showing posts from January, 2013

ಚಂದಿರನೆಡೆಗೆ

Image
ಹಾರ ಹೊರಟಿರೆ ಶಬ್ದಕಿಂತಲು ವೇಗಪಯಣವು ನಿಚ್ಚಳ
ಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತ
ನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ!
ಮಾರೆಯಿಂಬ್ರಿಯದಲ್ಲಿ ಇಳಿವೆನು ವಸತಿಯೊಂದನು ಹೂಡುತ

ಹಾರ ಹೊರಡಲು ಶಬ್ದಕಿಂತಲು ವೇಗಪಯಣವು ನಿಚ್ಚಳ
ಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತ
ನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ
ಮಾರೆಯಿಂಜನಿಯಲ್ಲೆ ಇಳಿದರೆ ಇಳೆಯ ಮರೆವುದು ಖಂಡಿತ!

-ಹಂಸಾನಂದಿ

ಕೊ: ಸ್ವಲ್ಪ ದಿನಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆ ಬರೆದ ಎರಡು (ಎರಡಲ್ಲ, ಒಂದೂ ಕಾಲೇ) ಚೌಪದಿಗಳು -ಯಾಕಂದ್ರೆ ಎರಡನೆಯದರಲ್ಲಿ ಬದಲಾಗಿರೋದು ಒಂದೇ ಸಾಲು! ಚಿತ್ರ ಕೃಪೆ - ಪದ್ಯಪಾನ

ಶಬ್ದಕಿಂತಲು ವೇಗಪಯಣ = supersonic speed

ಮೇರು ಪರ್ವತ = North Pole , ನಮ್ಮೆಲ್ಲ ಜ್ಯೋತಿಷ ಗ್ರಂಥಗಳ ಪ್ರಕಾರ ಮೇರು ಇರುವುದು ಉತ್ತರ ಧ್ರುವದಲ್ಲೇ. ನಾನು ಅದನ್ನು ಇಲ್ಲಿ ಪೋಲಾರ್ ಆರ್ಬಿಟಿಂಗ್ ಎನ್ನುವ ಅರ್ಥದಲ್ಲಿ ಬಳಸಿಕೊಂಡೆ. ಇಸ್ರೋ ನ ಪಿಎಸ್ಸೆಲ್ವಿ ನೆನೆಸಿಕೊಳ್ಳಿ

ಮಾರೆಯಿಂಬ್ರಿಯ = Mare Imbrium, ನಮಗೆ ಕಾಣುವ ಚಂದ್ರನ ಭಾಗದಲ್ಲಿನ ಒಂದು “ಸಮುದ್ರ”

ಮಾರೆಯಿಂಜನಿ =  Mare Ingenii ನಮಗೆ ಕಾಣದ ಚಂದ್ರನ ಬೆನ್ನು ಮಗ್ಗುಲಲ್ಲಿರುವ ಒಂದು “ಸಮುದ್ರ”. ನಮಗೆ ಕಾಣದ ಭಾಗದಲ್ಲಿರುವುದರಿಂದ, ಅಲ್ಲಿಂದ ಭೂಮಿಯೂ ಕಾಣದು. ಹಾಗಾಗಿ ಅಲ್ಲಿ ಏನಾದರೂ ಇಳಿದರೆ, ಇಳೆಯನ್ನು ಮರೆಯದೇ ಗತಿಯಿನ್ನೇನು, ಅಲ್ವೇ?

ಅಂದಹಾಗೆ,…

ಕುಮಾರ ವ್ಯಾಸನಿಗೊಂದು ನಮನ

Image
ಕುಮಾರವ್ಯಾಸನ ಕಾವ್ಯ ನನಗೆ ಬಹಳ ಹಿಡಿಸುತ್ತೆ - ಇದಕ್ಕೆ , ಕನ್ನಡದ ಬೇರೆ ಹಳೆಯ ಕಾವ್ಯಗಳಿಗಿಂತ ಇದು ಓದಿದರೆ ಸುಲಭವಾಗಿ ಅರ್ಥವಾಗುತ್ತೆ ಅನ್ನೋದೂ ಒಂದು ಕಾರಣವಿರಬಹುದು. ಅದಿರಲಿ, ಸದ್ಯಕ್ಕೇ ಬರುವ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ, ವರಕವಿಗೊಂದು ನಮನ - ಅವನ ಕಾವ್ಯದಲ್ಲಿ ಬಳಸಿದ ಭಾಮಿನೀ ಷಟ್ಪದಿಯ ಹತ್ತು ಪದ್ಯಗಳಲ್ಲಿ.

ಈ ಹತ್ತು ಪದ್ಯಗಳನ್ನು ಬರೆಯಲಾಗಿದ್ದು ನನ್ನ ಅದೃಷ್ಟವೆಂದೇ ನನ್ನೆಣಿಕೆ. ಹಿಂದಿನಿಂದಲೂ ಕುಮಾರವ್ಯಾಸನ ಪದ್ಯಗಳನ್ನೋದಿ, ಆದರ ಧಾಟಿಯ ಪರಿಚಯವಿದ್ದರೂ, ಈಚೆಗೆ ಪದ್ಯಪಾನ ಜಾಲತಾಣದಲ್ಲಿ ಕಳೆದ ಒಂದು ವರ್ಷದಲ್ಲಿ ಕಲಿತ, ಓದಿದ ಕೆಲವು ಪಾಠಗಳಿಂದಲೇ ನನಗೆ ಇದನ್ನು ಬರೆಯಲು ಸಾಧ್ಯವಾದದ್ದು ಅನ್ನುವುದರಲ್ಲಿ ಯಾವ ಅನುಮಾನವೇ ಇಲ್ಲ.


ಸಾಸಿರದಲಿವನೊಬ್ಬ ಕವಿವರ
ಲೇಸು ರೂಪಕದರಸ ಕುವರ
ವ್ಯಾಸನಿಗೆ ನಮಿಸುವೆನು ಮೊದಲಲಿ ಬಳಿಕ ಶಾರದೆಗೆ
ಮಾಸ ವರ್ಷಗಳೆಷ್ಟೊ ಸಂದರು
ಮಾಸದಿಹುದಾ ಕವಿಯ ನೆನಪಿದು
ಹಾಸುಹೊಕ್ಕಾಗುಳಿದ ನಮ್ಮಯ ಮನಸಿನಂಗಳದಿ || ೧||

ತಿಳಿದು ಪೇಳಲು ಕೃಷ್ಣ ಕಥೆಯ-    
ನ್ನಳವೆಯನ್ಯಗೆ? ಗಾಳು ಕವಿಗಳು
ಗಳಹಿದರೆ ಸುಮ್ಮನೆಯೆ ವ್ಯರ್ಥದೆ ಬೀಳು ಮಾತಿನಲಿ?
ಸುಳಿವಿರದ ಕಬ್ಬಗಳನೋದಿದ
ಬಳಿಕವೋದಲು ನಾರಣಪ್ಪನ
ಹೊಳೆವುದೈ ಸಲೆ ಸುಕವಿಕಾವ್ಯದ ಹಿತವು ಮನಸಿನಲಿ!  ||೨||

ವೀರ ನಾರಾಯಣನ ಸನ್ನಿಧಿ
ಯಾರ ಭಾಗ್ಯಕೆ ಸಿಗುವುದುಂಟೋ!
ಬೇರದಾರೋ ದೇವನಿಹನೇ  ಸರಿಯಗಟ್ಟಲಿಕೆ?
ಧೀರ ಬಿಟ್ಟಿಗರಾಯ ಕೆತ್ತಿಸಿ           
ಪೂರಯಿಸಿದನು ತ…

ಕೋರಿಕೆ

Image
ಚೆನ್ನವಿದು ಮುಖಕಮಲ ಸೋಗಿರದ ಮುಗುದನಿವ
ತನ್ನ ಪೊಂಗೊಳಲುಲಿಯ ತಾನೆ ಸವಿದಿಹನು! ಇನ್ನಿವನ ಕೆಂದಾವರೆಯ ಪಾದ ನಲಿಯುತಿರ- ಲೆನ್ನೆದೆಯದವನಲ್ಲೆ ತಲ್ಲೀನವಾಗಿಹುದು!
ಸಂಸ್ಕೃತ ಮೂಲ:ಲೀಲಾಶುಕನ (ಬಿಲ್ವಮಂಗಳ) ಕೃಷ್ಣಕರ್ಣಾಮೃತ (೧-೧೫)
ಅವ್ಯಾಜಮಂಜುಲಮುಖಾಂಬುಜ ಮುಗ್ಧಭಾವೈಃ
ಆಸ್ವಾದ್ಯಮಾನ ನಿಜವೇಣುವಿನೋದನಾದಮ್
ಆಕ್ರೀಡತಾಮರುಣಪಾದಸರೋರುಹಾಭ್ಯಾಮ್
ಆರ್ದ್ರೇ ಮದೀಯಹೃದಯೇ ಭುವನಾರ್ದ್ರಮೋಜಃ
ಚಿತ್ರ ಕೃಪೆ:  ಕಲಾವಿದ ಶ್ರೀ ಕೇಶವ್ ವೆಂಕಟರಾಘವನ್  (http://www.kamadhenu.blogspot.in/
http://kamadenu.blogspot.in/search?updated-max=2013-01-08T07:14:00%2B05:30)

ಹಂಸನಾದ ೧೦೦೦೦೦

Image
ಹಂಸನಾದದಲ್ಲಿ ನಾನು ಮೊದಲ ಪೋಸ್ಟ್ ಹಾಕಿದ್ದು ೨೦೦೭ರ ಡಿಸೆಂಬರ್ ೧೨ರಂದು. ಅಂತೂ ಇಂತೂ ಐದು ವರ್ಷ ದಾಟಿದ ಮೇಲೆ, "ಎಂಟು ವರ್ಷಕ್ಕೆ ನನ್ನ ಮಗ ದಂಟು" ಅನ್ನೋ ಹಾಗೆ ಹಿಟ್ ಕೌಂಟರ್ ಕೊನೆಗೂ ಒಂದು ಲಕ್ಷ ಅಂಕೆಯನ್ನ ದಾಟಿದೆ!
ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ವೇ? ಹಾಗಾಗಿ ಇದನ್ನು ನೋಡಿ ಹಿಗ್ಗು ಆಗುವುದು ನಿಜವಾದರೂ, ಬರೆದದ್ದೆಲ್ಲ ಚೆನ್ನಾಗಿದೆ ಅನ್ನುವ ಭ್ರಮೆಯೇನೂ ನನಗಿಲ್ಲ! ಅದಿರಲಿ! ಇಷ್ಟು ದಿನಕ್ಕೆ ನಾನು ಬರೆದಿದ್ದು ಚಿಕ್ಕದು ಪುಟ್ಟದು ಎಲ್ಲ ಸೇರಿ ಸುಮಾರು ಐನೂರು ಬರಹಗಳಾಗಿವೆ ಹಂಸನಾದದಲ್ಲಿ.
ಹಂಸನಾದದಿಂದ ನಾನು ಗಳಿಸಿದ್ದು ಬಹಳ! ಹೊಸ ಗೆಳೆತನ, ಹೊಸ ಕಲಿಕೆ ಎಲ್ಲಕ್ಕೂ ಇದು ಕಾರಣವಾಗಿದೆ ಎಂದು ಹೇಳಿದರೆ ಅದರಲ್ಲಿ ಹೆಚ್ಚಾಯವೇನಿಲ್ಲ. ಇಲ್ಲಿಯವರೆಗೆ ಇಲ್ಲಿಗೆ ಬಂದು ಹೋದ, ಓದಿದ, ತಮ್ಮ ಅನಿಸಿಕೆಗಳನ್ನು ಬರೆದ, ನನ್ನ ಕಲಿಕೆಗೆ ಕಾರಣರಾದ ಎಲ್ಲರಿಗೂ ನಾನು ಆಭಾರಿ. ಹೀಗೇ ಬಂದು ಹೋಗುತ್ತಿರಿ.

ಈ ಸಂದರ್ಭದಲ್ಲಿ, ಹಿಂದೊಮ್ಮೆ ಭಕ್ತಿವೇದಾಂತ ದರ್ಶನವೆಂಬ ಪತ್ರಿಕೆಗೆ ಬರೆದಿದ್ದ ಬರಹದ ಕರಡು ಸಿಕ್ಕಿತು. ಅದನ್ನು ಹೇಗೂ ಹಂಸನಾದದಲ್ಲಿ ಈ ಮೊದಲು ಹಾಕಿರಲಿಲ್ಲ, ಹಾಗಾಗಿ, ಕೆಲವು ಚಿತ್ರಗಳನ್ನೂ ಸೇರಿಸಿ ಪೋಸ್ಟಿಸಿದ್ದೇನೆ.
ನಲುಮೆಯಿರಲಿ,

-ಹಂಸಾನಂದಿ

ಜಯತು ಜಯ ವಿಠಲ

ಮಂಗಳಮಯ ತುಂಗಭದ್ರದಿ ಮೆರೆವನ ಅಂಗಜಪಿತ ಶ್ರೀ ಲಕ್ಷ್ಮೀಪತಿಯ ಶೃಂಗಾರ ಮೂರುತಿ ಪುರಂದರ ವಿಠಲನ ಕಂಗಳಿಂದಲಿ ಕಂಡೆ ಹಿಂಗಿತು ಭವಭಯ!


ನೀವು ಹಂಪೆಗೆ ಹೋಗಿದ್ದಿರಾದರೆ, ಅಲ್ಲಿರುವ …

ವರುಷತೊಡಕಿನ ದಿನ

Image
ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು. ಅಂದ್ರೆ ಆ ದಿನ ಸಿನೆಮಾಗೆ ಹೋಗೋದು ಇತ್ಯಾದಿ ಚಟುವಟಿಕೆಗಳು ಮನ್ನಾ. ಒಂದು ಸ್ವಲ್ಪವಾದರೂ ಓದಿ ಬರೆದು ಮಾಡಿ ಅಂತ ಮನೆಯಲ್ಲಿ ಅಪ್ಪಣೆ ( ಬೇಸಿಗೆಯ ಪರೀಕ್ಷೆ ಒಂದು ವೇಳೆ ಕಳೆದು ಹೋಗಿದ್ದರೂ ಕೂಡ)!

ಈಗ ಜನವರಿ ಒಂದನೇ ತೇದಿ ಕೂಡ ವರ್ಷಾರಂಭವಾದ್ದರಿಂದ, ಇವತ್ತು, ಎರಡನೇ ತಾರೀಕನ್ನ ವರ್ಷತೊಡಕು ಅಂತ ಕರೆದರೂ ತಪ್ಪಿಲ್ಲವೇನೋ. ಇವತ್ತು ಏನನ್ನೋ ನೋಡುತ್ತಿದ್ದಾಗ ವಿದ್ಯಾಕರನ ಸುಭಾಷಿತ ರತ್ನಕೋಶವೆಂಬ ಪುಸ್ತಕವೊಂದು ದೊರೆತಿತು. ಜೈ ಗೂಗಲೇಶ್ವರ! ಕೆಲವು ಪದ್ಯಗಳನ್ನ ಓದಿದೆ. ಒಂದು ಪದ್ಯವನ್ನ ಅನುವಾದಿಸಬೇಕೆನ್ನಿಸಿ ಮಾಡಿದೆ. ಅದು ಹೀಗಿದೆ ನೋಡಿ.ಅರರೆ! ಅದೆಂತಹ ನಿಪುಣತೆಯು
ಬಿಲ್ಗಾರಿಕೆಯಲಿ ಮದನನದು
ಬಿಟ್ಟಿರೆ ಬಾಣವು ಮೈಮೇಲೆ
ತಗುಲದೆ ಒಳಮನ ಸೀಳುವುದು!

ಸಂಸ್ಕೃತ ಮೂಲ: (ಪದ್ಯ 330, ವಿದ್ಯಾಕರನ ಸುಭಾಷಿತ ರತ್ನಕೋಶದಿಂದ)

ಅಹೋ ಧನುಷಿ ನೈಪುಣ್ಯಂ ಮನ್ಮಥಸ್ಯ ಮಹಾತ್ಮನಃ
ಶರೀರಂ ಅಕ್ಷತಂ ಕೃತ್ವಾ ಭಿನ್ನತಿ ಅಂತರ್ಗತಂ ಮನಃ ||

अहो धनुषि नैपुण्यं मन्मथस्य महात्मनः  ।
शरीरं अक्षतं कृत्वा भिनत्ति अन्तर्गतं मनः  । ।


ಈಗ ವರುಷತೊಡಕಿನ ಮಹಿಮೆಯಿಂದ ಈ ರೀತಿಯ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುವಂತೆ ನಿಜಕ್ಕೂ ಆ…

ಹೊಸವರ್ಷಕ್ಕೆ

Image
೨೦೧೩ ಎಲ್ಲರಿಗೂ ಸಂತಸ ನೆಮ್ಮದಿಗಳಿಂದ ಕೂಡಿರಲೆಂಬ ಹಾರೈಕೆಗಳೊಂದಿಗೆ ಎರಡು ಚೌಪದಿಗಳು:
ಚಂದದಾ ಮುಂಬೆಳಗ ಚುಮ್ಮೆನುವ ಚಳಿಯಲ್ಲಿ
ಚಂದಿರನು ಕಣ್ಣಿಂದ ಕಾಣದಾದ
ಸುಂದರಾಕಾಶದಲಿ ಹಾಕುತ್ತ ರಂಗೋಲಿ
ತಂದಿರಲು ನೇಸರನು ಮನಕೆ ಮೋದ

ಹೊಸತೇನು ಬಂತಿಲ್ಲಿ ಹೂವಿಲ್ಲ ಚಿಗುರಿಲ್ಲ ?
ತುಸು ಸೊಗಸು ಕಂಡಿಲ್ಲವೆಂದೆನ್ನಬೇಡ!
ಮುಸುಕಿದಾಗಸದಲ್ಲಿ  ರಂಗಿನೋಕುಳಿ ಚೆಲ್ಲಿ-
ಯೆಸೆವ ಹೊಸ ಭಾಸ್ಕರನ ಸೊಬಗ ನೋಡಾ!

-ಹಂಸಾನಂದಿ

ಕೊ: ಕ್ರಿಸ್ತ ವರ್ಷಾರಂಭದಲ್ಲಿ ನಮ್ಮ ಯುಗಾದಿಯ ಚೈತ್ರದ ಚಿಗುರು, ಸೊಗಸು ಯಾವುದೂ ಕಾಣದು ಎಂದು ಹೇಳುವುದುಂಟು. ಅದು ನಿಜವೂ ಹೌದು. ಆದರೆ, ವರಕವಿ ಬೇಂದ್ರೆಯವರು ನುಡಿದಂತೆ, ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನವೆಂಬಂತೆ ಸೂರ್ಯನ ಪ್ರತಿ ಹೊಸ ಹುಟ್ಟೂ ಒಂದೊಂದು ಹೊಸ ಜೀವನವೇ! ಅದಕ್ಕೆಂದೇ, ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮ್ಮೆಡೆಗೆ ಬರಲೆಂಬ ಹಳೆಯ ಸೂಕ್ತಿಯಂತೆ, ಈ ವರ್ಷಾರಂಭವನ್ನೂ ಸ್ವಾಗತಿಸುವುದರಲ್ಲಿ ತಪ್ಪೇನಿದೆ ಎನ್ನಿಸದಿರದು.

ಕೊ.ಕೊ: ಸುಮಾರು ಎಲ್ಲ ಸಾಂಪ್ರದಾಯಿಕ ಹೊಸವರ್ಷಗಳೂ ಆಕಾಶದ ಯಾವುದಾದರೊಂದು ಘಟನೆಗೆ ಸಂಬಂಧಿಸಿರುವುದಾಗಿರುತ್ತೆ. ಭಾರತದ ಚಾಂದ್ರಮಾನ ಮತ್ತೆ ಸೌರಮಾನ ವರ್ಷಗಳೂ ಇದಕ್ಕೆ ಹೊರತಲ್ಲ. ಆದರೆ ಜನವರಿ ಒಂದರಂದು ಆ ರೀತಿಯ ಯಾವುದೇ ವಿಶೇಷವು ನಡೆಯುವುದಿಲ್ಲ ಅನ್ನುವುದು ನಿಜವಾದರೂ, ವರ್ಷಕ್ಕೊಮ್ಮೆ ನಡೆಯುವ ಘಟನೆಯೊಂದು ಜನವರಿ ಒಂದಕ್ಕೆ ಹತ್ತಿರವಾಗಿ ಜರುವುಗುವುದಂತೂ ಉಂಟು. ಜನವರಿ ಎರಡು ಯುನಿ…