Posts

Showing posts from May, 2013

ಅಗಲಿಕೆ

Image
ತೊಟ್ಟ ಬಳೆಗಳು
ಕೈಯ ತೊರೆದವು ನಿಲ್ಲದೇ ಸುರಿದವು ಕಣ್ಣ ಹನಿಗಳು

ಒಂದು ಚಣದಲ್ಲೇ ದೂರವಾಯ್ತು ಧೈರ್ಯ   ಮನಸೆಲ್ಲೆಲ್ಲೋ ಓಡಿತು ಬಿಟ್ಟು ನನ್ನನೊಂಟಿ ; ಕಲ್ಲುಮನಸಿನ ನಲ್ಲ ನನ್ನ  ತೊರೆದಿರಲು ಜೊತೆಯಲೇ ಇವರೆಲ್ಲ ಹೊರಟರಲ್ಲ!

ಹೇ ಜೀವ! ಹೋಗುವುದಾದರೆ ನೀನೂ ಹೋಗು! ನೀನೇಕುಳಿದೆ ಗೆಳೆಯರ ಗುಂಪನು ಸೇರದೇನೇ?ಸಂಸ್ಕೃತ ಮೂಲ: ಅಮರುಕನ ಅಮರು ಶತಕದಿಂದ (ಪದ್ಯ 31/35) :
ಪ್ರಸ್ಥಾನಂ ವಲಯೈಃ ಕೃತಂ ಪ್ರಿಯಸಖೈರಸ್ರೈರಜಸ್ರಂ ಗತಂ ಧೃತ್ಯಾ ನ ಕ್ಷಣಮಾಸಿತಂ ವ್ಯವಸಿತಂ ಚಿತ್ತೇನ ಗಂತುಂ ಪುರಃ ಗಂತುಂ ನಿಶ್ಚಿತಚೇತಸಿ ಪ್ರಿಯತಮೇ ಸರ್ವೇ ಸಮಂ ಪ್ರಸ್ಥಿತಾ ಗಂತವ್ಯೇ ಸತಿ ಜೀವಿತಪ್ರಿಯ ಸುಹೃತ್ಸಾರ್ಥಃ ಕಿಮುತ್ಯಜ್ಯತೇ ॥

प्रस्थानं वलयैः कृतं प्रियसखैरस्रैरजस्रं गतं धृत्या न क्षणमासितं व्यवसितं चित्तेन गन्तुं पुरः । गन्तुं निश्चितचेतसि प्रियतमे सर्वे समं प्रस्थिता गन्तव्ये सति जीवितप्रियसुहृत्सार्थः किमु त्यज्यते ॥३१॥ (३५)


-ಹಂಸಾನಂದಿ

ಚಿತ್ರಕೃಪೆ: ವಿಕಿಪೀಡಿಯಾ. ರಾಜಾ ರವಿವರ್ಮನ "ವನವಾಸದಲ್ಲಿ ದಮಯಂತಿ" ಅನ್ನುವ ಓಲಿಯೋಗ್ರಾಫ್


ಕೊ: ಈ ಚಿತ್ರದಲ್ಲಿ "ತೊಟ್ಟ ಬಳೆಗಳು" ಕೈಯನ್ನು ತೊರೆದಿಲ್ಲದಿದ್ದರೂ, ಇದ್ದಿದ್ದರಲ್ಲಿ ಪದ್ಯದ ಭಾವಕ್ಕೆ ಹೊಂದುತ್ತೆಂದು ಹಾಕಿದೆ :)

ಕೊ.ಕೊ:  ತಲೆಬರಹವನ್ನು ಕೊಟ್ಟ ಮಿತ್ರ ಶ್ರೀಕಾಂತ ಮಿಶ್ರಿಕೋಟಿಯವರಿಗೆ ನಾನು ಆಭಾರಿ

"ವೀರ" ವಸಂತ

Image
ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ' ವಸಂತನ ಬಗ್ಗೆಯ ಪದ್ಯದ ಅನುವಾದವನ್ನು ಹಾಕೋಣವೆನ್ನಿಸಿತು!


ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು
ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ
ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ-
ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು ||

ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 1)

ಪ್ರಫುಲ್ಲ ಚೂತಾಂಕುರತೀಕ್ಷ್ಣಸಾಯೋ
ದ್ವಿರೇಫಮಾಲಾ ವಿಲಸದ್ಧನುರ್ಗುಣಃ
ಮನಾಂಸಿ ವೇದ್ಧುಮ್* ಸುರತಃಪ್ರಸಂಗಿನಾಂ^
ವಸಂತಯೋದ್ಧಾ~ ಸಮುಪಾಗತಃ ಪ್ರಿಯೇ

प्रफुल्लचूताङ्कुरतीक्ष्णसायो
द्विरेफमालाविलसद्धनुर्गुणः।
मनांसि वेद्धुम् सुरतप्रसङ्गिनां
वसन्तयोद्धा समुपागतः प्रिये॥६-१||

-ಹಂಸಾನಂದಿ

ಚಿತ್ರ: ಹೂಬಿಟ್ಟ ಮಾಮರ, ವಿಕಿಪೀಡಿಯಾದಿಂದ

ಕೊ: ಈ ಪಾಠಾಂತರಗಳೂ ಇವೆ: * – ಭೇತ್ತುಮ್ ;    ^ – ಸುರತೋತ್ಸುಕಾನಾಮ್  ; ~ – ಯೋಧಃ ;  ಇವುಗಳಿಂದ ಅರ್ಥದಲ್ಲೇನೂ ಭಾರಿ ಬದಲಾಗುವುದಿಲ್ಲ.

ಕೊ.ಕೊ: (ಕೆಲವು 1:1 ಅನುವಾದವಿಲ್ಲದಿದ್ದರೂ ಒಟ್ಟಾರೆ ಭಾವವನ್ನು ಉಳಿಸುವ ಪ್ರಯತ್ನ ಮಾಡಿದ್ದೇನೆ.

ಕೊ.ಕೊ.ಕೊ: "ವೀರವಸಂತ" ಎನ್ನುವುದು ಕರ್ನಾಟಕ ಸಂಗೀತದ ಒಂದು ರಾಗವೂ ಹೌದು. ಸ್ವಲ್ಪ ಅಪ…