Posts

Showing posts from July, 2013

ಬೆಳಕು

Image
ತುಟಿಯಲೊತ್ತಿಟ್ಟಿರುವ ಸೊಗದಕೊಳಲಿನ ಹೊಳಪು ಮುಡಿಯಲೇರಿಹ  ನವಿಲ ಗರಿಯ ಮೆರುಗು ಸೆಳೆವ ನೀಲಕೆ  ಸಿಗ್ಗು ತಂದವನ  ಮೈಬಣ್ಣ ಬೆಳಕ ತೋರಲಿಯೆನಗೆ ಕಡೆಯ ಪಯಣದಲಿ!
ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿ, ಪದ್ಯ ೧೨): ಅಧರಾಹಿತ ಚಾರು ವಂಶ ನಾಳಾಃ ಮುಕುಟಾಲಂಬಿ ಮಯೂರ ಪಿಂಛಮಾಲಾಃ ಹರಿನೀಲಶಿಲಾ ವಿಭಂಗ ನೀಲಾಃ ಪ್ರತಿಭಾಃ ಸಂತು ಮಮ ಅಂತಿಮ ಪ್ರಯಾಣೇ
ಒಂದು ಹೊಸ ಪದ್ಯ ಕಂಡು ಅದನ್ನು ಕನ್ನಡಿಸುವಾಗ ಹಲವು ಬಾರಿ ನಾನು ಇದರಲ್ಲಿ ಆಸಕ್ತಿಯಿರುವ ನನ್ನ ಗೆಳೆಯರೊಂದಿಗೆ ಅದನ್ನು ಮೊದಲು ಹಂಚಿಕೊಳ್ಳುವುದುಂಟು. ಅಂಥ ಸಂದರ್ಭದಲ್ಲೆಲ್ಲಾ ಅವರುಗಳು ನನಗಿಂತ ಚೆನ್ನಾಗಿ ಅವುಗಳನ್ನು ಅನುವಾದ ಮಾಡುತ್ತಾರೆ ಅನ್ನುವುದೂ ಗುಟ್ಟೇನಲ್ಲ. ಈ ಬಾರಿ ಗೆಳೆಯ ಜೀವೆಂ ಅವರು ಇದೇ ಪದ್ಯಕ್ಕೆ  ಮಾಡಿದ ಅನುವಾದ ಹೀಗಿದೆ: ಹೊಳೆವ ಮುಕುಟದಮೇಲೆ ನಲಿವ ಶಿಖಿ ಪಿಂಛವು ಪ- ವಳದ ಬಳ್ಳಿಯ ಪೋಲ್ವ ತುಟಿಗಿಟ್ಟ ಕೊಳಲು ಸೆಳೆವ ನೀಲವೆ ನಾಚುವಂತಿರುವ ಮೈ ಬಣ್ಣ- ವುಳಿಯಲಿದು ಕಂಗಳಲಿ ಕಡೆಯ ನೋಟ
ನಮ್ಮಿಬ್ಬರ ಪದ್ಯಗಳೂ ಪಂಚಮಾತ್ರಾ ಚೌಪದಿಯಲ್ಲೇ ಇದ್ದರೂ, ನಾನು ಪ್ರಾಸವನ್ನು ಬಿಟ್ಟೆ. ಜೀವೆಂ ಅವರು ಅದನ್ನು ಎತ್ತಿ ಹಿಡಿದಿದ್ದಾರೆ. -ಹಂಸಾನಂದಿ ಕೊ: ಹಾಕಿರುವ ಚಿತ್ರ ಹಿಂದೂ ದಿನಪತ್ರಿಕೆಯ ಕಲಾವಿದರಾದ ಮಿತ್ರ ಕೇಶವ್ ವೆಂಕಟರಾಘವನ್ ಅವರ ಬ್ಲಾಗ್ ನಿಂದ. ಅವರು ಈ ಚಿತ್ರವನ್ನು ರಚಿಸಲು ಸ್ಫೂರ್ತಿ ಕೂಡ ಗೋಪಾಲವಿಂಶತಿಯ ಇದೇ ಪದ್ಯ ಅನ್ನುವುದು ಕುತೂಹಲದ ಸಂಗತಿ. ಕೊ.ಕೊ: ಸಾಮಾನ್ಯವಾಗಿ ಸಂಸ

ಚಂಚಲ

Image
ಕಿರುಕುಳಕೆ ಸಿಲುಕಿಹರ ಕಂಡೇಕೆ ನೀ ನಗುವೆ ?
ಕುರುಡಾಗಬೇಡಯ್ಯ  ಹಣದ ಮದದಿಂದ
ಮರುಳ! ನಿಲ್ಲಳು ಲಕುಮಿ ನಿಂತಕಡೆ ಎಂದೆಂದು
ಬೆರಗುಪಡದಿರದುವೆ ಜಗದ ಕಟ್ಟಳೆಯು;

ಮರಳ ಗಡಿಯಾರವನ್ನೊಮ್ಮೆ ನೀನೋಡು
ಸರಿಯುತಿಹ ಕಾಲವನದೆತ್ತಿ ತೋರುವುದು   ಬರಿದಾದ್ದು ತುಂಬುವುದು ಗಳಿಗೆ ಕಳೆದಿರಲತ್ತ
ಭರದಲ್ಲಿ ತುಂಬಿದ್ದು ಗಳಿಗೆಯಲಿ ಬರಿದು !

ಸಂಸ್ಕೃತ ಮೂಲ:
ಆಪದ್ಗತಂ ಹಸಸಿ ಕಿಂ ದ್ರವಿಣಾಂಧ ಮೂಢ ಲಕ್ಷ್ಮೀಸ್ಥಿರಾ ನ ಭವತೀತಿ ಕಿಮತ್ರ ಚಿತ್ರಮ್ ಏತಾನ್ ಪ್ರಪಶ್ಯಸಿ ಘಟಾಂ ಜಲಯಂತ್ರಚಕ್ರೇ ರಿಕ್ತಾ ಭವಂತಿ ಭರಿತಾ ಭರಿತಾಶ್ಚ ರಿಕ್ತಾಃ

-ಹಂಸಾನಂದಿ

ಕೊ: ಮೂಲದಲ್ಲಿದ್ದ ನೀರ ಗಡಿಯಾರವನ್ನು ಮರಳಗಡಿಯಾರವಾಗಿ ಬದ್ಲಾಯಿಸಿದ್ದೇನೆ. ಅದಕ್ಕೆ, ಈಗ ನಮಗೆಲ್ಲ ಮೈಕ್ರೊಸಾಪ್ಟ್ ವಿಂಡೋಸ್ ದಯದಿಂದ ಹೊತ್ತು ಕಳೆವ ಮರಳುಗಡಿಯಾರ ನೀರಿನ ಗಳಿಗೆ ಬಟ್ಟಲಿಗಿಂತ ಹೆಚ್ಚು ಪರಿಚಿತ ಎನ್ನುವ ಕಾರಣಕ್ಕೆ. ನೀರ ಗಡಿಯಾರದಲ್ಲಿ ಒಂದು ದೊಡ್ಡ ಪಾತ್ರೆಯಲ್ಲಿ, ಚಿಕ್ಕ ತೂತೊಂದನ್ನುಳ್ಳ ಗಳಿಗೆ ಬಟ್ಟಲನ್ನು ತೇಲಿ ಬಿಡಲಾಗುತ್ತಿತ್ತು. ನೀರು ಏರಿ, ಆ ಬಟ್ಟಲು ಮುಳುಗಿದಾಗ, ಇನ್ನೊಂದು ಬಟ್ಟಲನ್ನು ಅಲ್ಲಿ ತೇಲಿ ಬಿಟ್ಟು, ಮುಳುಗಿದ್ದ ಬಟ್ಟಲನ್ನು ತೆಗೆಯಲಾಗುತ್ತಿತ್ತು. ಭಾಸ್ಕರಾಚಾರ್ಯ ಲೀಲಾವತಿ ಎನ್ನುವ ಗಣಿತದ ಪುಸ್ತಕ ಬರೆದಿರುವ ಹಿನ್ನಲೆಯಲ್ಲಿ ಈ ಗಳಿಗೆ ಬಟ್ಟಲಿನ ಕತೆಯೂ ಒಂದಿದೆ. ಅದನ್ನು ಆಸಕ್ತರು ಇಲ್ಲಿ ಓದಬಹುದು.

ಕೊ.ಕೊ: ಮೂಲದಲ್ಲಿ ಲಕ್ಷ್ಮಿ ಎಂಬುದು ಕೇವಲ ಹಣಕ್ಕಲ್ಲದೆ ಜಯ, ಯಶಸ್ಸು ಮೊದಲಾ…

ಚುಕ್ಕಿ ಮಳೆ

Image
ಚುಕ್ಕಿ ಮಳೆ ಅನ್ನೋ ಮಾತನ್ನ ನೀವು  ಕೇಳೇ ಇರಲಾರಿರಿ. ಯಾಕಂದ್ರೆ  ಯಾರೂ ಅದನ್ನ ಇಲ್ಲಿಯವರೆಗೆ ಬಳಸಿದ ಹಾಗೆ ಕಂಡಿಲ್ಲ. ಅಲ್ಲಿಲ್ಲಿ ಕೇಳಿ ಬರೋ ಉಲ್ಕಾವರ್ಷ ಅನ್ನೋ ಹೆಸರನ್ನೂ ಕೂಡ ಅದು ಏನು ಅಂತ ಗೊತ್ತಿರೋವ್ರಿಗೆ ಕೇಳಿ ಗೊತ್ತಿರತ್ತೆ ಅಷ್ಟೆ. ಈಗ ಪಟ್ಟಣಗಳಲ್ಲೆಲ್ಲಾ ರಾತ್ರಿ ಹೊತ್ತಿನಲ್ಲಿ ಬೀದಿ ದೀಪಗಳ, ಮನೆಗಳ, ಅಂಗಡಿ ಮುಂಗಟ್ಟುಗಳ ದೀಪಗಳ ಬೆಳಕು ಹೆಚ್ಚಾಗಿ ರಾತ್ರಿ ಆಕಾಶದ ಸೊಬಗೇ ಮಾಯವಾಗಿದೆ. ಆಕಾಶದಲ್ಲಿ ನಕ್ಷತ್ರಗಳೇ ಕಾಣ್ತಿಲ್ಲ. ಒಂದುವೇಳೆ ಕೆ ಇ ಬಿ ದಯದಿಂದ ಪವರ್ ಕಟ್ ಆದ್ರೂ, ಈಗ ಎಲ್ಲೆಲ್ಲೂ ಯುಪಿಎಸ್ ಗಳಿರೋ ಕಾಲ. ಹಾಗಾಗಿ ಆಕಾಶ ನೋಡೋ ಅವಕಾಶ ಸಿಕ್ಕಬೇಕು ಅಂದರೆ, ಎಲ್ಲೋ ದೂರದ ಹಳ್ಳಿಗಾಡಿನಲ್ಲಿ ವಿದ್ಯುತ್ ದೀಪದ ಸುದ್ದಿನೇ ಇಲ್ಲದಿರೋ ಕಡೆಗೆ ಹೋಗಬೇಕು ಬಿಡಿ.

ಈ ಉಲ್ಕೆ ಆಂದರೆ ಆಗೀಗ ಯಾವುದೋ ಒಂದು ಚಿಕ್ಕ ದೂಳಿನ ಕಣವೋ ಸಣ್ಣ ಕಲ್ಲಿನ ತುಂಡೋ ಭೂಮಿಯ ವಾತಾವರಣದ ಒಳಗೆ ಬಂದು ಬಿದ್ದಾಗ ಅದು ಉರಿದು ಹೋಗುತ್ತಲ್ಲ, ಅದು ನಮ್ಮ ಕಣ್ಣಿಗೆ ಒಂದು ನಕ್ಷತ್ರದ ಹಾಗೇ ಹೊಳೆದು ಮಿಂಚಿ ಮಾಯವಾಗುತ್ತೆ ಕೆಲವೇ ಕ್ಷಣಗಳಲ್ಲಿ. ಇದನ್ನೇ ನಕ್ಷತ್ರ ಬಿತ್ತು ಅಂತಲೂ ಅಂತಾರೆ. ನೀವು ಕೇಳಿರಬಹುದು. ಆದರೆ ಕಾಣದಿರೋ ಆಕಾಶದಲ್ಲಿ ಇನ್ನು ಆಗಲೋ ಈಗಲೋ ಬೀಳೋ ಉಲ್ಕೆ ಇನ್ನು ಯಾರಿಗೆ ಕಾಣತ್ತೆ ಹೇಳಿ?  ಅದೇ ಈಗ ಬಂದಿರೋ ತೊಂದರೆ.


ಅದೇ ಒಂದುವೇಳೆ, ನಿಮಗೆ ಸ್ವಲ್ಪ ಅದೃಷ್ಟವಿದ್ದು ನೀವು ಒಳ್ಳೇ ಕತ್ತಲು ರಾತ್ರಿ ಇರೋ ಕಡೆಯಲ್ಲಿ ಒಂದು ತುಸು ಹೊತ್ತು ನಿಂತು…

ಹೂವಿನ ಹುಡುಗಿ

Image
(ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಚಿತ್ರಕ್ಕೆ ಕವಿತೆ) 
ದೇವ ಪೂಜೆಗೆನುತ್ತ ತಂದಿರೆ ಹೂವು ತುಂಬಿದ ಪಾತ್ರೆಯ
ಹೂವ ಕೋದಿಹಳೀಕೆ ಮಲ್ಲಿಗೆ ಮಾಲೆಯೊಂದನು ಮಾಡುತ
ಯಾವ ಧ್ಯಾನವದಾವ ಮಾಯವದೆತ್ತಲೋಡಿವೆ ಕಂಗಳು?
ಸಾವಧಾನದೊಳೀಕೆ ಯಾರನು ಕಾಯುತಾ ನಸು ನಕ್ಕಳೊ!

-ಹಂಸಾನಂದಿ

ಕೊ: ಇದು ಮತ್ತಕೋಕಿಲ/ಮಲ್ಲಿಕಾಮಾಲೆಯ ಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ

ಗಂಗಾಧರ?

Image
ಈ ಕಳೆದ ವಾರದ ಪದ್ಯಪಾನದಲ್ಲಿ ಕೊಟ್ಟ  ಚಿತ್ರಕ್ಕೆಂದು ನಾನು ಬರೆದ ಮೂರು ವೃತ್ತಗಳು - ಹೆಚ್ಚುಕಡಿಮೆ  ಒಂದೇ ಅರ್ಥದ್ದು :) .

ಅಂದು ಭಗೀರತನ ಬೇಡಿಕೆಗೆ ಗಂಗೆಯನ್ನು ತಲೆಯಲ್ಲಿ ಹಿಡಿದು, ಲೋಕವನ್ನು ಕಾಯ್ದ ಶಿವ ಈಗ ಉತ್ತರಖಂಡದಲ್ಲಿ ಅದ ನೆರೆ ಹಾವಳಿಯ ಸಮಯದಲ್ಲಿ ಜನರನ್ನು   ಕಾಯದೇಹೋದನಲ್ಲಾ ಎಂಬ ಹಳಹಳಿಕೆಯೊಂದಿಗೆ:

ದಿಗಿಲೊಳ್ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದೋದ್ಭವೆ
ಭರದೊಳ್ ಬೀಳುವ ಸೊಕ್ಕಿನಾರ್ಭಟವನುಂ ಸಂತೋಷದಿಂ ನಿಲ್ಲಿಸಿ
ಹಿತದೊಳ್ ಗಂಗೆಯನಂದು ನೀನೆ ಶಿರದೊಳ್ ಕಾಪಿಟ್ಟು ಕಾಯ್ದೆಲ್ಲರಂ
ಅಕಟಾಯೇಕಿದು ಪೇಳುಯಿಂದು ಜನರಂ ಕೈಬಿಟ್ಟು ನೀ ಪೋದೆಯೋ?


ಕರುಣಾಪಾರನೆಂಬ ಶಿವನೇಕೆ ಇಂದು ತನ್ನ ಕಾರುಣ್ಯದ ನೋಟವನ್ನು  ತೋರದೇಹೋದ?

ದಿಗಿಲೊಳ್ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ
ಭರದೊಳ್ ಬೀಳುವ ಗಂಗೆಯಾರ್ಭಟವನುಂ ನೀ ಜಟಾಜೂಟಂಗಳಿಂ -
ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಕಾಯ್ದೆಲ್ಲರಂ
ಅಕಟಾ! ನೋಡದೆ ಹೋದೆಯಿಂದು ಶಿವನೇ ಕಾರುಣ್ಯದಾಕಂಗಳಿಂ!

ಅಂದು ಗಂಗೆಯನ್ನು ಹಿಡಿದ ಶಿವ ಇಂದು   ಅದೇ ಗಂಗೆಯಲ್ಲೇ ತೇಲಿ ಹೋದನೇಕೆ?

ದಿಗಿಲೊಳ್ ಬೇಡಿರಲಾ ಭಗೀರಥ ಮುದಲ್ ಶ್ರೀವಿಷ್ಣು ಪಾದಂಗಳಿಂ
ಭರದೊಳ್ ಬೀಳುವ ಗಂಗೆಯಾರ್ಭಟವನುಂ ಸಂತೈಸುತುಂ ತಾಳ್ಮೆಯಿಂ
ಹಿತದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ
ಶಿವನೇ ಭೋರ್ಗರೆದಿರ್ಪ ನೀರಹರಿವೊಳ್ ನೀನೆಂತು ತೇಲಾಡಿಹೆಯ್?

- ಹಂಸಾನಂದಿ

ಕೊ:  ಎಲ್ಲವೂ ಮತ್ತೇಭವಿಕ್ರೀಡಿತ ವೃ…

ಲೆಮನ್ ಯೆಲ್ಲೋ, ರೆಡ್ ವೈನ್!

Image
ಸಂಪದಿಗ ಗಣೇಶರು  ನಾನು ನೆನ್ನೆ ಬರೆದಿದ್ದ  ಬರಹ ಓದಿ  ಲೆಮನ್ , ಯೆಲ್ಲೋ ,ರೆಡ್ ,ವೈನ್ - ಈ ನಾಲ್ಕು ಪದಗಳನ್ನು ಬಳಸಿ ರಾಮಾಯಣದ ಕಥೆಯ ಯಾವುದಾದರೂ ಒಂದು ಸಂದರ್ಭಕ್ಕೆ ಪದ್ಯ ಬರೆಯಿರೆಂದುಕೇಳಿದರು ( http://sampada.net/comment/181604#comment-181604 )  ಅದಕ್ಕಾಗಿ  ಬರೆದ ಚೌಪದಿ  ಇದು:


(ಮಾಯಾ ಮೃಗದ ಸಂದರ್ಭ. ಗಂಡಸರ ಎಡಗಣ್ಣು, ಹೆಂಗಸರ ಬಲಗಣ್ಣು ಅದುರಿದರೆ ಅಶುಭ ಶಕುನವೆಂಬುದು ಕವಿಸಮಯ. ರಾಮಾಯಣದಲ್ಲಿ ಮಾರೀಚನನ್ನು ಹಿಡಿಯಲು ಹೋದಾಗ ರಾಮನಿಗೆ ಎಡಗಣ್ಣದುರಿದ ಕಥೆ ಇದೆಯೋ ಇಲ್ಲವೋ ಗೊತ್ತಿಲ್ಲ :-) ಅದು ನನ್ನ ಕಲ್ಪನೆ)
ಕಾನಲ್ಲಿ ಸೀತೆಯೆಲ್ಲೋ ನೀರು ತರುವಾಗ ವೈನಾದ ಹೊನ್ನಜಿಂಕೆಯ ನೋಡಿ ಬಯಸೆ ತಾನಲ್ಲೆ ಮನದನ್ನೆಯಾಸೆ ತೀರಿಸೆ ರಾಮ ಚಿನ್ನಮಿಗಕೆಳಸಿರೆಡಗಣ್ಣದುರಿತವಗೆ
-ಹಂಸಾನಂದಿ
ಕೊ. ರೆಡ್ ಪದ ಅಷ್ಟು ಚೆನ್ನಾಗಿ ಮೂಡಿ ಬಂದಿಲ್ಲವಾದರೂ ಹಾಕಿಬಿಟ್ಟೆ!

Image from http://www.indianetzone.com/photos_gallery/9/GoldenDeer_14328.jpg

ಹರಕೆ

Image
ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು:

Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲಿ ರಚಿಸಿರಿ)

ಎಲ್ಲಿಯ ಟ್ರಿಗೊನಮೆಟ್ರಿ? ಎಲ್ಲಿಯ ಗೋಪಾಲಕೃಷ್ಣ?  ಅದೂ ಅಲ್ಲದೆ 
ಸುಮಾರು ಎರಡು ತಿಂಗಳಿಂದ 'ಹಂಸನಾದ' ದ ಕಡೆಗೆ ತಲೆ ಹಾಕಿಯೂ ಮಲಗಿರಲಿಲ್ಲ! ಹಾಗಾಗಿ  ಈ ಪ್ರಶ್ನೆಗೆ  ಉತ್ತರಿಸುವಾಗ ಸ್ವಲ್ಪ ತಿಣುಕಾಡಲೇ ಬೇಕಾಯಿತು! 

ಬರೆದ ಕೆಲವು ಉತ್ತರಗಳನ್ನ  ಇಲ್ಲಿ ಹಾಕಿರುವೆ:

ಮೊದಲು  ಪಂಚಮಾತ್ರಾ  ಚೌಪದಿಯಲ್ಲೊಂದು : 

ಕೊರಳಲ್ಲಿ ಮೆರೆಯುತಿದೆ ಕಾಸಿನಾ ಸರವು ಮುಂ-
ಗುರುಳಲ್ಲೊ ಸೈ! ನಗುವ ನವಿಲಗರಿ ಸೊಗಸು!
ಮರೆತೆನೇನಕಟಾ! ನಲಿವ ಹರಿಯ ನೆನಕೆಯನು?
ಹರಸಲೀತನ ನೋಟ ಕಾಟಗಳ ಕಳೆದು 


ಮತ್ತೆ ಸುಮಾರು  ಇದೇ ಹಂದರದಲ್ಲಿಯೇ, ಸ್ವಲ್ಪ ಬದಲಾವಣೆಗಳೊಂದಿಗೆ   ಭಾಮಿನಿ ಷಟ್ಪದಿಯಲ್ಲೊಂದು ಉತ್ತರ  : 

ಕೊರಳಿನಲಿ ಕುಣಿಯುತಿಹ ಕಾಸಿನ
ಸರವ ನಲಿದಾಡುತಿಹ ಪಾದದಿ
ಮೆರೆವ ಗೆಜ್ಜೆಯ ಮೊಗದ ನಗುವನು ನೋಳ್ಪ ಸೊಗವೇ ಸೈ!
ನರರೊಳುತ್ತಮ ಗೊಲ್ಲ ಬಾಲನ 
ತುರುವ ಕಾಯ್ದನ ಮರೆತೆನಕಟಾ!
ನರೆತ ಜೀವದ ಭವದ ಕಾಟವನಿವನೆ ಕಳೆವುದೆ ಸೈ!


ಇದನ್ನೇ ಚೂರುಪಾರು ಬದಲಾಯಿಸಿ, ಇನ್ನೊಂದು: 

ಕೊರಳಿನಲಿ ಕುಣಿಯುತಿಹ ಕಾಸಿನ
ಸರದ ನಲಿದಾಡುತಿಹ ಪಾದದಿ