Posts

Showing posts from February, 2014

ಒಂದು ಊರಿನ ಕಥೆ

Image
ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ.  ಎಲ್ರೂ ಅವರವರ ಮನೆಯಲ್ಲಿ ಅಡಿಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ  ಬಡಿಸ್ತಿದ್ದರಂತೆ. 
ಆಗ ಊರಿಗೊಬ್ಬ ಹೊಸ ಡೊಣೆ ನಾಯಕ ಬಂದು ಠರಾವು ಮಾಡಿದನಂತೆ. ಈಗ ಇರೋ ಅಡಿಗೆಗೆಳಲ್ಲಿ ಪೌಷ್ಟಿಕತೆ ಸಾಲದು. ಯಾವ ಅಡಿಗೇಭಟ್ಟರಿಗೂ ಒಂದು ಚೂರೂ ಹೊಸತು ಮಾಡೋ ಆಸೆಯಾಗಲಿ, ಕ್ರಿಯಾಶೀಲತೆಯಾಗಲೀ ಒಂದೂ ಇಲ್ಲ. ಅದಲ್ಲದೆ ಇದು ಪೀಟ್ಜ್ಝಾ ಬರ್ಗರ್ ಕಾಲ. ನಾವೂ ಎಲ್ಲರ ಸಮಕ್ಕೆ ಇರಬೇಕಾದರೆ ಹೊಸತನ್ನೇನಾದರೂ ತರಲೇ ಬೇಕು. ಅದು ಬಿಟ್ಟು  ಅಪ್ಪ ಹಾಕಿದ ಆಲದ ಮರ ಅಂತ ಬರೀ ಇಡ್ಲಿ ಸಾಂಬಾರ್ ತಿನ್ನುತ್ತಾ ಇರಬೇಕೇನು? ಪ್ರಪಂಚದಲ್ಲಿ ಇರೋದೆಲ್ಲ ನಾವು ಮಾಡೋಕಾಗ್ದೇನು?   ನಾವು ಒಂದು ಹೊಸ ಆಡಿಗೇ ಕಾರ್ಖಾನೆಯನ್ನೇ ತೆಗೆಯೋಣ ಅಂದನಂತೆ. ಹಲವಾರು  ಜನ ಚಪ್ಪಾಳೆ ತಟ್ಟಿದರಂತೆ.  ಒಂದಷ್ಟು ಜನ ಅವನನ್ನೂ ಹಿಂಬಾಲಿಸಿದರಂತೆ. ಒಂದಷ್ಟು ಜನ ಸುಮ್ಮನೇ ಕುತೂಹಲದಿಂದ ನೋಡಿದರಂತೆ. ಒಂದಷ್ಟು ಜನ ಈ ಡೊಣೆನಾಯಕಂದೇನು, ನಾವೇ ನೋಡ್ಕೋತೀವಿ ನಮ್ಮ ನಮ್ಮ ಅಡಿಗೇ ಮನೇಲೇನೇ, ಅಕ್ಕಿ ರೊಟ್ಟಿ ಬದಲು ಜೋಳದ ರೊಟ್ಟಿ ಮಾಡ್ತೀವಿ. ಮೆಣಸಿನ ಕಾಯಿ ಬದಲು ಕಾಳು ಮೆಣಸು ಹಾಕಿ ಕೂಟಿನ ರುಚಿ ಚೆನ್ಣಾಗಿರತ್ತೋ ಇಲ್ವೋ ಅಂತ. ಅದಕ್ಕೆ …

‘ನಂಜುಂಡ’ವನಿಗೊಂದು ಪ್ರಶ್ನೆ

Image
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ  ಉರಿನಂಜ ನೀನದೆಂತು ಕಂಡೆಯೋ?  ಕೈಯಲ್ಲಿ ಹಿಡಿದೆಯೋ  ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು  ನುಂಗಿದೆಯೊ  ಔಷಧಿಯ  ಗುಳಿಗೆಯಿರಬಹುದೆನ್ನುತ?   ನೀಲಮಣಿಯಾಭರಣ ಸೊಗಸೆಂದು ತೊಟ್ಟೆಯೋ ನಂಜುಂಡ?  ನೀನೆ ನುಡಿಯೋ!

ಸಂಸ್ಕೃತ ಮೂಲ (ಆದಿ ಶಂಕರ, ಶಿವಾನಂದಲಹರಿ - ೩೨) :
ಜ್ವಾಲೋಗ್ರಸ್ಸಕಲಾಮರಾತಿ ಭಯದಃ ಕ್ಷ್ವೇಲ ಕಥಮ್ ವಾ ತ್ವಯಾ ದೃಷ್ಟಃ ಕಿಂಚ ಕರೇ ಧೃತಃ ಕರತಲೇ ಕಿಂ ಪಕ್ವ ಜಂಬೂ ಫಲಮ್ । ಜಿಹ್ವಾಯಾಂ ನಿಹತಾಶ್ಛ ಸಿದ್ಧಘುಟಿಕಾ ವಾ ಕಂಠ ದೇಶೇ ಭೃತಃ ಕಿಂ ತೇ ನೀಲ ಮಣಿವಿಭೂಷಣಮಯಂ ಶಂಭೋ ಮಹಾತ್ಮನ್ ವದ ॥
-ಹಂಸಾನಂದಿ
ಕೊ: ಸಮುದ್ರಮಥನದ ಸಮಯದಲ್ಲಿ ಅಮೃತ ಸಿಕುವ ಮೊದಲು ವಿಷ ಹುಟ್ಟಿತು. ಅದನ್ನು ಕುಡಿದು ಕಂಠದಲ್ಲಿ ಧರಿಸಿ ಶಿವನು ನೀಲಕಂಠನಾದ. ಹಾಗಾಗೇ ಕನ್ನಡದಲ್ಲಿ ಶಿವನಿಗೆ ‘ನಂಜುಂಡ’ನೆಂದು ಹೆಸರು. ನಂಜನಗೂಡಿನ ನಂಜುಂಡೇಶ್ವರ ಯಾರಿಗೆ ಗೊತ್ತಿಲ್ಲ? ಮೂಲದಲ್ಲಿರುವ ಶಂಭು ಎನ್ನುವ ಪದವನ್ನು ಅದಕ್ಕಾಗಿಯೇ ನಾನು ಅನುವಾದದಲ್ಲಿ ನಂಜುಂಡ ಎಂದು ಬದಲಿಸಿದ್ದೇನೆ.
ಕೊ.ಕೊ: ಶಿವರಾತ್ರಿಯ ಈ ಸಂದರ್ಭದಲ್ಲಿ  ಒಂದು ಹೊಸ ಪದ್ಯ ಕಣ್ಣಿಗೆ ಬಿದ್ದು ಅದನ್ನು ಅನುವಾದ ಮಾಡಿದ್ದಾಯಿತು. ಮೂಲವು ಶಾರ್ದೂಲ ವಿಕ್ರೀಡಿತದಲ್ಲಿದೆ. ಅನುವಾದವೂ ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ. ಪ್ರತಿ ಸಾಲಿನಲ್ಲೂ ಐದು ಮಾತ್ರೆಯ ಆರು ಗಣಗಳೂ, ಮತ್ತೆ ಕೊನೆಯಲ್ಲೊಂದು ಗುರುವೂ ಇವೆ. ಪ್ರಾಸವನ್ನಿಟ್ಟಿಲ್ಲ.
ಕೊ.ಕೊ.ಕೊ. ಚಿತ್ರ ಹಳೇಬೀಡಿನ ಹೊಯ…

ನೈಜ ಸ್ಪಂದನ

Image
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ
ಕೂಡಲೆಯೆ ಮುಚ್ಚಿಕೊಂಡೆ
ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ?

ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14):

ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್ಟೇ
ಅಂಗಂ ಕದಂಬಕುಸುಮಮಿವ ಪುಲಕಿತಂ ಕಥಂ ನು ಚ್ಢಾದಯಿಷ್ಯಾಮಿ


ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ - 4-14)

ಅಚ್ಛೀಇ  ತಾ ಥಡಸ್ಸಂ ದೋಹಿ ವಿ ಹತ್ಥೋಇ ವಿ ತಸ್ಸಿಂ ದಿಟ್ಠೇ
ಅಂಗಂ ಕಲಂಬಕುಸುಮಂ ವ ಪುಲಇಅಂ ಕಹ ಣು  ಢಕ್ಕಿಸ್ಸಂ || 4-14||

-ಹಂಸಾನಂದಿ

ಕೊ: ಈ ಪದ್ಯದ ನಾಯಿಕೆ  ತನ್ನ ಪ್ರಿಯಕರನೊಂದಿಗೆ ಮುನಿಸು ಹೊಂದಿರುವ 'ಖಂಡಿತೆ'. ತನ್ನ ಪ್ರಿಯಕರನ ಜೊತೆ ಮುನಿಸುಗೊಂಡಿರುವವಳು. ಅವನು ಕಂಡರೆ ಅವನನ್ನು ನೋಡಲೂಬಾರದೆಂದು ಕಣ್ಣುಮುಚ್ಚಿಕೊಳ್ಳುವವಳು - ಆದರೆ ಅವಳ ಕೈ, ಕಣ್ಣುಗಳಂತೆ ಮನಸ್ಸನ್ನು ಕಟ್ಟಿಹಾಕಲು ಅವಳಿಂದ ಅಸಾಧ್ಯವೆನ್ನುವುದು ಪದ್ಯದ ಭಾವ.

ಕೊ.ಕೊ: ಚಿತ್ರದಲ್ಲಿರುವುದು ಕದಂಬ ಹೂವು ( Neolamarckia cadamba). ಕರ್ನಾಟಕದ ಪ್ರಸಿದ್ಧ ರಾಜಮನೆತನ 'ಕದಂಬ' ರಿಗೆ ಹೆಸರು ಬಂದಿರುವುದೂ ಈ ಮರದಿಂದಲೇ ಅಂತೆ. ಕೆಲವರು ಕದಂಬ ಮರವೆಂದರೆ ಈಚಲಮರ ಎನ್ನುವುದೂ ಉಂಟು.

ಕೊ.ಕೊ.ಕೊ: ಹಾಲನ ಗಾಹಾ ಸತ್ತಯಯಿ ನಂತರ ಬಂದ ಅಮರುಕನ ಮೇಲೆ ಪ್ರಭಾವ ಬೀರಿದೆ ಎನ್ನುವು ಅಭಿಪ್ರಾಯವಿದೆ. ಉದಾಹರಣೆಗೆ ಈ ಪದ್ಯವನ್ನೇ ಹೋಲುವ ಹಮ್ಮು ತೊರೆದವಳು - ಈ ಅನುವಾದವನ್ನು ನೋಡಿ.

ಚಿತ್ರಕೃಪೆ: ವಿಕಿಪೀಡಿ…

ಅದ್ವೈತ

Image
ನಿಂತಿಹುದವನರೂಪ ಕಣ್ಣಲ್ಲಿ ಮತ್ತವನ ಸ್ಪರ್ಶವೇ ನೆಲೆಸಿರಲು ಮೈಯಲ್ಲಿ ಮಾತು ಕಿವಿಯಲ್ಲಿರಲು ಮನಸು ಮನಸಲ್ಲಿರಲು ಬೇರೆ ಮಾಡುವುದೇನು ದೈವವಿನ್ನು ?ಪಾಕೃತ ಮೂಲ (ಹಾಲನ ಗಾಥಾ ಸತ್ತಸಯಿ ೨-೩೨) :

ರೂಅಂ ಅಚ್ಛೀಸು ಠಿಅಂ  ಫರಿಸೋ ಅಂಗೇಸು ಜಂಪಿಅಂ ಕಣ್ಣೇ 
ಹಿಅಅಂ ಹಿಅಏ ಣಿಹಿಅಂ ವಿಓಝಅಂ ಕಿಂತ್ಥ ದೇವ್ವೇಣ

‘ಮಂಜುನಾಥ’ ಭಟ್ಟ' ಶ್ರೀ ಮಥುರಾನಾಥ ಶಾಸ್ತ್ರಿಯವರ ಸಂಸ್ಕೃತ ಅನುವಾದ::

ರೂಪಮಷ್ಣೋಃ ಸ್ಥಿತಂ ಸ್ಪರ್ಶೋಂಗೇಷು ಜಲ್ಪಿತಂ ಕರ್ಣೇ ಹೃದಯಂ ಹೃದಯೇ ನಿಹಿತಂ ವಿಜೋಜಿತಂ ಕಿಮತ್ರ ದೈವೇನ-ಹಂಸಾನಂದಿ
ಕೊ:  ಗಾಹಾ ಸತ್ತಸಯಿ ಎಂಬುದು ಶಾತವಾಹನರ ರಾಜ ಹಾಲನೆಂಬವನು ಮಾಡಿರುವ ೭೦೦ ಪದ್ಯಗಳ ಸಂಗ್ರಹ. ಇದರಲ್ಲಿ ಅವನ ರಚನೆಗಳೂ, ಮತ್ತೆ ಬೇರೆ ಕವಿಗಳ ರಚನೆಗಳೂ ಸೇರಿವೆಯಂತೆ. ಇದು ಮಹಾರಾಷ್ಟ್ರೀ ಎನ್ನುವ ಪ್ರಾಕೃತ ಭಾಷೆಯಲ್ಲಿದೆ. ಇದರ ಕಾಲ ಸುಮಾರಾಗಿ ಕ್ರಿ.ಶ. ಒಂದನೇ ಶತಮಾನ.
ಕೊ.ಕೊ: ಈ ಅನುವಾದಕ್ಕೆ ನಾನು ಮೂಲವಾಗಿಟ್ಟುಕೊಂಡಿದ್ದು, ‘ಮಂಜುನಾಥ’ ನ ಸಂಸ್ಕೃತ ಪದ್ಯವನ್ನು. ಈ ಎರಡನ್ನೂ ಹೋಲಿಸಿ ನೋಡಿದಾಗ, ಸಂಸ್ಕೃತವು ಹೇಗೆ ಬೇರೆ ಬೇರೆ ಪ್ರಾಕೃತಗಳಾಗಿ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡು, ಇಂದು ಬಳಕೆಯಲ್ಲಿರುವ ಭಾಷೆಗಳಾಗಿ ಬದಲಾಗಿದೆ ಅನ್ನುವುದು ಸುಲಭವಾಗಿ ತಿಳಿಯುತ್ತೆ.
ಕೊ.ಕೊ.ಕೊ: ಅಜಿಂಠಾ (ಅಜಂತ) ದಲ್ಲಿರುವ ಗುಹೆಗಳ ಮೊದಮೊದಲ ವರ್ಣಚಿತ್ರಗಳು ರಚನೆಯಾದದ್ದು ಶಾತವಾಹನರ ಕಾಲದಲ್ಲೇ. ಹಾಗಾಗಿ ಅಲ್ಲಿನ ಒಂದು ಚಿತ್ರವನ್ನೇ ಹಾಕಿದ್ದೇನೆ. ಈ ಪದ್ಯ ನಾಯಕಿ ಅವಳ …

ನಿರಾಕರಣ

Image
ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ