Posts

Showing posts from June, 2016

ಶಿವ-ಶಿವೆಗೆ

Image
ಸಂಪಿಗೆಯ ಹೊಂಬಣ್ಣ ಮೈಯ ಸೊಬಗಿನವಳಿಗೆ ಕರ್ಪೂರ ಬಿಳುಪಿನಾ ಮೈಯ ಸೊಬಗನಿಗೆ ತುರುಬು ಕಟ್ಟಿರುವಳಿಗೆ ಜಟೆಯ ಬಿಟ್ಟಿರುವನಿಗೆ ನಮಿಸುವೆನು ಶಿವೆಗೆ ನಾ ಮಣಿಯುವೆನು ಶಿವಗೆ
चाम्पॆयगौरार्धशरीरकायै कर्पूरगौरार्धशरीरकाय । धम्मिल्लकायै च जटाधराय नमः शिवायै च नमः शिवाय ॥ 1 ॥
***

ಕಸ್ತೂರಿ ಕುಂಕುಮವ ನೊಸಲಿಗಿರಿಸಿದವಳಿಗೆ ಚಿತೆಯ ಬೂದಿಯ ದೂಳ ಹಣೆಗೆ ಬಳಿದವಗೆ ನೆನೆಯಬೇಕೆನಿಪಳಿಗೆ ನೆನೆಯೆ ಭಯವಾಗುವಗೆ ನಮಿಸುವೆನು ಶಿವೆಗೆ ನಾ ಮಣಿಯುಬೆನು ಶಿವಗೆ
कस्तूरिकाकुङ्कुमचर्चितायै चितारजःपुञ्ज विचर्चिताय । कृतस्मरायै विकृतस्मराय नमः शिवायै च नमः शिवाय ॥ 2 ॥
***

ಝಲ್ಲೆನುವ ಗೆಜ್ಜೆಗಳ ಬಳೆಯ ತೊಟ್ಟಿರುವಳಿಗೆ ಹಾವನ್ನೆ ಕಾಲ್ಗೆಜ್ಜೆ ಮಾಡಿಕೊಂಡವಗೆ ಚಿನ್ನದಾ ತೋಳ್ಬಳೆಯ ಹಾವ ಭಾಪುರಿಯನ್ನು ತೊಟ್ಟ ಶಿವೆ ಶಿವರನ್ನು ನಾನೀಗ ಮಣಿವೆ

झणत्क्वणत्कङ्कणनूपुरायै पादाब्जराजत्फणिनूपुराय । हॆमाङ्गदायै भुजगाङ्गदाय नमः शिवायै च नमः शिवाय ॥ 3 ॥ ***

ಕನ್ನೈದಿಲೆಯ ಪೋಲ್ವ ಕಂಗಳಿರುವಳಿಗೆ ಅರಳಿರುವ ಕಮಲದಂತಿಹ ಕಣ್ಣವನಿಗೆ ಮಂಗಳದ ಕಣ್ಗಳಿಹ ವಿಷಮ ಕಣ್ಣುಗಳಿಹ ಶಿವೆಗೆ ಮಣಿವೆನು ನಾನು ನಮಿಸುವೆನು ಶಿವಗೆ
विशालनीलॊत्पललॊचनायै विकासिपङ्कॆरुहलॊचनाय । समॆक्षणायै विषमॆक्षणाय नमः शिवायै च नमः शिवाय ॥ 4 ॥ ***

ಮಂದಾರಮಾಲೆ ನಲಿವಂಥ ಕುರುಳಿರುವಳಿಗೆ ತಲೆಬುರುಡೆ ಸರವ ಧರಿಸಿರುವ ಕೊರಳಿಹಗೆ ಸೊಗದ ವಸ್ತ್ರವನುಟ್ಟ ಬಟ್ಟೆಯನ್ನು…

ಸಂಸ್ಕೃತ ಪ್ರಾಕೃತಗಳ ಸಂಬಂಧ: ಒಂದು ಒಳನೋಟ

ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳ ಸಂಬಂಧ ಬಹು ಚರ್ಚಿತ ವಿಷಯ. ಕೆಲವು ತಿಂಗಳ ಹಿಂದೆ ತುಸು ಈ ಬಗ್ಗೆ "ಸಂಸ್ಕೃತದ ಸುತ್ತ ತಪ್ಪು ಗ್ರಹಿಕೆಯ ಹುತ್ತ" ಎಂಬ ಒಂದು ಬ್ಲಾಗ್ ಬರಹದಲ್ಲಿ ವಿವರಿಸಿದ್ದೆ. ಈಚೆಗೆ ಕೆಲವು ದಿವಸಗಳ ಹಿಂದೆ ಓದಿದ ಇನ್ನೊಂದು ಬರಹದಿಂದ ಈ ಬಗ್ಗೆ ಇನ್ನೊಂದಷ್ಟು ಟಿಪ್ಪಣಿ ಹಾಕೋಣವೆನ್ನಿಸಿತು.  

ಹಿಂದಿನ ಸಂಸ್ಕೃತ ಗ್ರಂಥಗಳಲ್ಲಿ  "ಪ್ರಕೃತಿಃ ಸಂಸ್ಕೃತಮ್, ತತ್ರ ಭವೇತ್ ಪಾಕೃತಂ" ಅನ್ನುವ ವಿವರಣೆಯನ್ನು ಕಾಣಬಹುದು. ಈ ಮಾತಿನ ಅರ್ಥ ಸಂಸ್ಕೃತ ಭಾಷೆಯ ರೂಪಗಳಾಗಿ, ಅದರಿಂದ ಪ್ರಾಕೃತವು (ಗಳು) ಬಂದಿತು(ಬಂದವು) ಎಂದು. ಮಾತಾಡುವುದಕ್ಕೂ ಪುಸ್ತಕದ ಭಾಷೆಗೂ ವ್ಯತ್ಯಾಸಗಳಿರುವುದು ಹೆಚ್ಚಿನ ಭಾಷೆಗಳಲ್ಲಿ ಕಂಡುಬರುವ ವಿಷಯವೇ ಆದ್ದರಿಂದ, ಕಾಲ ದೇಶಗಳಿಗೆ ತಕ್ಕಂತೆ ಭಾಷೆ ಸ್ವಲ್ಪ ಸ್ವಲ್ಪವಾಗಿ ಮಾರ್ಪಾಡಾಗುವುದೂ ಗೊತ್ತಿರುವ ಸಂಗತಿಯೇ. ಹಾಗಾಗಿ, ಒಂದು ಭಾಷೆಗೆ (ಅಂದರೆ ಇಲ್ಲಿ ಸಂಸ್ಕೃತಕ್ಕೆ) ಹಲವಾರು ಮಾತಾಡುವ ರೂಪಗಳಿದ್ದರೆ (ಅಂದರೆ ಶೌರಸೇನಿ, ಮಾಗಧಿ, ಪಾಲಿ, ಮಹಾರಾಷ್ಟ್ರೀ ಇತ್ಯಾದಿ  ಹೆಸರುಗಳಿಂದ ಪ್ರಖ್ಯಾತವಾದ ಪ್ರಾಕೃತಗಳು) ಅದರಲ್ಲಿ  ಅಷ್ಟಾಗಿ ಅಚ್ಚರಿ ಪಡುವಂಥದ್ದೇನಿಲ್ಲ .

ಈಚೆಗೆ, ಅಂದರೆ ಒಂದು ಸುಮಾರು ೨೦೦ ವರ್ಷಗಳ ಹಿಂದಿನಿಂದ ಪ್ರಾಕೃತವೇ (ಗಳೇ) ಮೊದಲು, ಅವುಗಳನ್ನು "ಸಂಸ್ಕರಿಸಿ" ಸಂಸ್ಕೃತವನ್ನು "ಕಟ್ಟ"ಲಾಯಿತು ಎಂಬ ವಾದ ಬಂದಿರುವುದು ತಿಳಿದ ವಿಷಯವೇ.  ಎಷ್ಟೋ ಜ…