Posts

Showing posts from July, 2017

ಆಷಾಢಸ್ಯ ಪ್ರಥಮ ದಿವಸೇ ...

Image
"ಮಳೆಗಾಲ ಚಳಿಗಾಲ ಬೇಸಿಗೇ ಕಾಲ ಮುಗಿಯಾಲಿ, ಕಲಿಸತ್ತೆ ಕೆಲಸಾವ!" ಅಂದಳಂತೆ ಯಾರೋ ಜಾಣೆ ಸೊಸೆ. ಸಮಶೀತೋಷ್ಣವಲಯದಲ್ಲಿರುವ ಪ್ರದೇಶಗಳಲ್ಲಿ ವರ್ಷಕ್ಕೆ ನಾಲ್ಕು ಕಾಲ ಎಂಬ ಲೆಕ್ಕಾಚಾರವಿದ್ದರೆ, ನಮ್ಮ ದೇಶದಲ್ಲಿ ಹಿಂದಿನಿಂದ ವರ್ಷಕ್ಕೆ ಮೂರು ಕಾಲ, ಆರು ಋತುಗಳು ಮತ್ತೆ ಹನ್ನೆರಡು ತಿಂಗಳುಗಳು ಎಂಬ ಲೆಕ್ಕಾಚಾರ. ಎಲ್ಲಾ ಕಾಲಗಳನ್ನೂ ಕವಿಗಳು ವರ್ಣಿಸಿದ್ದರೂ, ಮಳೆಗಾಲವನ್ನು ವಿಶೇಷವಾಗಿ ಬಣ್ಣಿಸುವುದನ್ನ ನೋಡಬಹುದು. ಬಹುಶಃ ನಮ್ಮ ಬದುಕಿಗೆ ಮೂಲವೇ ಈ ಮಳೆಗಾಲ, ಅದೇ ನಮ್ಮ ಜೀವನಾಡಿಯಾದ್ದರಿಂದಲೇ ಈ ಬಣ್ಣನೆ. ’ಆಷಾಢ ಮಾಸ ಬಂದೀತವ್ವಾ , ಅಣ್ಣ ಬರಲಿಲ್ಲ ಕರಿಯಾಕ’ ಎಂದು ಹಳ್ಳಿಯ ಹೆಂಗಸೊಬ್ಬಳ ಹಾಡಿನಿಂದ ಹಿಡಿದು ಕಾಳಿದಾಸನಂತಹ ಮಹಾ ಕವಿ ’ಆಷಾಢಸ್ಯ ಪ್ರಥಮದಿವಸೇ’ ಎಂದು ಬರೆಯುವತನಕ ಈ ಮುಂಗಾರಿನ ವರ್ಣನೆ ನಮ್ಮ ಚರಿತ್ರೆಯ, ಸಂಸ್ಕೃತಿಯ ಒಳನೋಟಗಳನ್ನು ಕೊಡಬಲ್ಲವು. ನಾವು ಒಳಹೊಕ್ಕು ನೋಡಬೇಕಷ್ಟೇ!ಅಷ್ಟಕ್ಕೂ, ನಮ್ಮ ತಿಂಗಳುಗಳಿಗೆ ಹೆಸರು  ಕೊಟ್ಟಿರುವುದೇ ಒಂದು ಕುತೂಹಲದ ಸಂಗತಿ. ಆಯಾ ಹುಣ್ಣಿಮೆಯಲ್ಲಿ ಚಂದ್ರ ಆಕಾಶದಲ್ಲಿ ಎಲ್ಲಿ ಕಾಣುತ್ತಾನೆ ಅನ್ನುವುದರ ಮೇಲೆ  ಚೈತ್ರ, ವೈಶಾಖ ಮೊದಲಾದ ತಿಂಗಳುಗಳ ಹೆಸರನ್ನು ಇಡಲಾಗಿದೆ. ಹುಣ್ಣಿಮೆಯ ಚಂದ್ರ ಪೂರ್ವಾಷಾಢಾ-ಉತ್ತರಾಷಾಢಾ ಎಂಬ ನಕ್ಷತ್ರಗಳ ಬಳಿ ಇರುವ ತಿಂಗಳೇ ಆಷಾಢ. ಇದು ಕಾರ್ಗಾಲದ ಸಮಯ. ಮೋಡ ಕವಿದಿರುವ ಆಕಾಶದಿಂದ ಹುಣ್ಣಿಮೆಯ ಚಂದ್ರ ಕಾಣದೇ ಹೋಗಬಹುದಾದರೂ, ಹುಣ್ಣಿಮೆಯ ಚಂದಿರ ಎಲ್ಲಿರುತ್…

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಮ್ಮಲ್ಲಿ ಹೆಚ್ಚಿನ ಕನ್ನಡದ ಜನರಲ್ಲಿ ಒಂದು  ಭ್ರಮೆ ಇದೆ (ಅದು ಬೇರೆ ನುಡಿಯಾಡುವ ಜನರಲ್ಲೂ ಇರಬಹುದು, ಆದರೆ ಈ ಬರಹವನ್ನು ಓದುವವರು ಕೇವಲ ಕನ್ನಡಿಗರಾದ್ದರಿಂದ ನನ್ನ ಮಾತುಗಳನ್ನು ಆ ಚೌಕದೊಳಗೇ ಮೀಸಲಾಗಿಡುತ್ತೇನೆ).  ಪ್ರಾಕೃತವೆಂಬ ಭಾಷೆಯಿಂದ (ಅಥವಾ ಭಾಷೆಗಳಿಂದ) ಸಂಸ್ಕೃತ ಎನ್ನುವ ಭಾಷೆಯನ್ನು ಶೋಧಿಸಿ, "ಕಟ್ಟಲಾಯಿತು" ಎನ್ನುವುದೇ ಈ ಭ್ರಮೆ. ಈ ಭ್ರಮೆಯನ್ನು ಚಾಲ್ತಿಯಲ್ಲಿಡಲು ಹಲವರು ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಅದು  ಅವರವರ ವಾದಗಳಿಗೆ ಸಮಜಾಯಿಶಿ ಕೊಡಲು ಮಾಡುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.

ಈ ಭ್ರಮೆಗೆ ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳಲ್ಲಿರುವ ಅರೆಬೆಂದ ಪಾಠಗಳನ್ನೇ ಓದಿ, ಅದನ್ನೇ ನಿಜವೆಂದು ನಂಬಿ ಅದನ್ನೇ ಪಾಠ ಮಾಡಿ, ಮತ್ತೆ ಮುಂದಿನ ಪೀಳಿಗೆಗೂ ಅಜ್ಞಾನ ಪ್ರಸಾರ ಮಾಡುತ್ತಿರುವವರದ್ದೂ,  ಇನ್ನೊಂದು ಭಾಷೆಯನ್ನು ಓದದೇ ತಿಳಿಯದೇ ಅದರ ಬಗ್ಗೆ ದೊಡ್ಡ ವಿನ್ಯಾಸವಾಗಿ ಬಣ್ಣಬಣ್ಣವಾಗಿ ಮಾತಾಡುವಂತಹ ಸಾಹಿತಿಗಳದ್ದೂ, ಬುದ್ಧಿಜೀವಿಗಳು , ಜಾತ್ಯತೀತರು ಎಂಬ ಕಿರೀಟವನ್ನು ಹೊತ್ತು ಮೆರೆಯುವ ಮಹನೀಯರದ್ದೂ, ಇನ್ನು ಇವತ್ತಿನ ಮಟ್ಟಿಗೆ ಬಂದರೆ ವಾಟ್ಸಪ್ ನಲ್ಲಿಯೋ, ಯಾವುದೋ ಫೇಸ್ ಬುಕ್ ಗುಂಪಿನಲ್ಲೋ,  ಅಥವಾ ಯಾವುದೋ ಪತ್ರಿಕೆ ಅಂಕಣದಲ್ಲಿ ಓದಿದ್ದೆಲ್ಲ ನಿಜವೆಂದು ತಿಳಿಯುವ ಮುಗ್ಧರದ್ದೂ - ಈ ರೀತಿಯ ಹಲವಾರು ಬಗೆಯ ಜನಗಳ ದೊಡ್ಡ ಕಾಣಿಕೆ, ಈ ಭ್ರಮೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಇದೆ. ದೊಡ್…